ಬಂಟ್ವಾಳ: ತಾಲೂಕಿನ ಕರ್ಪೆ ಗ್ರಾಮದಲ್ಲಿ ಸುಮಾರು 23 ವರ್ಷಗಳ ಕಾಲ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಪಂಜಿಕಲ್ಲು ಆರೋಗ್ಯ ಸಮುದಾಯ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ಗೀತಾ ಅವರಿಗೆ ಬೀಳ್ಕೋಡುಗೆ ಮತ್ತು ಅಭಿನಂದನೆ ಕಾರ್ಯಕ್ರಮ ಕರ್ಪೆ ಸಮಾಜ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ ಸದಸ್ಯ ಪ್ರಭಾಕರ ಪ್ರಭು ವೃತ್ತಿ ನಿಷ್ಟೆಯಿದ್ದರೆ ಮಾತ್ರ ವೃತ್ತಿಯಲ್ಲಿ ವ್ಯಕ್ತಿಗೆ ಗೌರವ ಸಿಗುತ್ತದೆ, ಪ್ರಮಾಣಿಕತೆ, ನಿಶ್ವಾರ್ಥ ಮತ್ತು ಸಮಾನ ರೀತಿಯ ಸೇವೆ ಸಲ್ಲಿಸುವ ಮೂಲಕ ಆರೋಗ್ಯ ಇಲಾಖೆಯಲ್ಲಿ ಗೀತಾ ಸಿಸ್ಟರ್ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು. ಜನರ ಪ್ರೀತಿ ಮತ್ತು ಗೌರವ ಜೀವನದಲ್ಲಿ ಅಳಿಸಲಾಗದ ಸಂಪತ್ತು. ಜನರಿಗೆ ಉತ್ತಮ ಸೇವೆ ನೀಡಿದಾಗ ವಿಶ್ವಾಸದಲ್ಲಿ ನಮ್ಮನ್ನು ಗುರುತಿಸುವ ಕೆಲಸ ಮಾಡುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾ.ಪಂ.ಉಪಾಧ್ಯಕ್ಷ ಸತೀಶ್ ಪೂಜಾರಿ ಮಾತನಾಡಿ ಸೇವೆಯ ಮೂಲಕ ಸರಕಾರಿ ಇಲಾಖೆಯವರು ಜನರ ಮನಸ್ಸನ್ನು ಗೆದ್ದರೆ ಅದಕ್ಕಿಂತ ದೊಡ್ಡ ಸನ್ಮಾನ ಬೇಕಿಲ್ಲ ಎಂದರು. ವೇದಿಕೆಯಲ್ಲಿ ಹಿರಿಯರಾದ ವಿಜಯಪ್ರಭು ದೋಟ , ಗ್ರಾ.ಪಂ.ಸದಸ್ಯ ದೇವಪ್ಪ ಕರ್ಕೇರ , ಶೇಖರ್ ನಾಯ್ಕ, ಸುಭಾಷಿನಿ, ಮಾಜಿ ತಾ.ಪಂ.ಸದಸ್ಯೆ ರೇವತಿ , ನಿವೃತ್ತ ಶಿಕ್ಷಕ ನಾರಾಯಣ ನಾಯಕ್, ಆರೋಗ್ಯ ಇಲಾಖೆಯ ಲ್ಯಾಬ್ ಟೆಕ್ನಿನಿಷಿಯನ್ ಬಸವರಾಜ್, ನಿವೃತ್ತ ಶಿಕ್ಷಕ ವಿನಯಕುಮಾರ್ ಜೈನ್, ಗಣಪತಿ ನಾಯಕ್ ದೇವರಮನೆ, ಜೀವಂದರ್ ಜೈನ್ ಭಾವ, ಮಾಜಿ ಗ್ರಾ.ಪಂ.ಸದಸ್ಯರಾದ ಶ್ರೀದೇವಿಪ್ರಭು , ಮಲ್ಲಿಕಾ, ಗಣ್ಯರಾದ ಲೋಕಯ್ಯ ಪೂಜಾರಿ ಕೋಡು, ಪುರಂದರ ಭಟ್, ರಾಮಕೃಷ್ಣ ನಾಯಕ್,ಐತಪ್ಪ ಪೂಜಾರಿ, ಅಂಗನವಾಡಿ ಕಾರ್ಯಕರ್ತೆಯರಾದ ಜೀನ ಶ್ರೀ, ಲೀಲಾ ಕುಮಾರಿ ಆಶಾ ಕಾರ್ಯಕರ್ತೆ ಭಾನುಮತಿ ಭಟ್ ಮತ್ತಿತರರು ಉಪಸ್ಥಿತರಿದ್ದರು. ವಾಮನ ಪೂಜಾರಿ ಸ್ವಾಗತಿಸಿ ಗ್ರಾ.ಪಂ ಸಿಬಂದಿ ಮಹಾಬಲ ನಾಯ್ಕ ವಂದಿಸಿದರು. ಗುಣಪಾಲ ಕಾರ್ಯಕ್ರಮ ನಿರೂಪಿಸಿದರು.
