ವಿಟ್ಲ ಜೆಸಿಐ ಘಟಕದ ಜೆಸಿಐ ಸಪ್ತಾಹ 2017 ಇದರ ಉದ್ಘಾಟನೆಯನ್ನು ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಶಾಲೆಯ ಎಸ್ ಡಿ ಎಂ ಸಿ ಗೌರವಾಧ್ಯಕ್ಷ ಸುಬ್ರಾಯ ಪೈ ಯವರು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ, ಜೆಸಿಐ ಅಧ್ಯಕ್ಷ ರಮೇಶ್ ಬಿ ಕೆ, ನಿಕಟ ಪೂರ್ವ ಅಧ್ಯಕ್ಷ ಬಾಬು ಕೊಪ್ಪಳ, ಸಪ್ತಾಹದ ನಿರ್ದೇಶಕ ಸೋಮಶೇಖರ್ ಹೆಚ್ ಹಾಗೂ ಸದಸ್ಯರು ಭಾಗವಹಿಸಿದ್ದರು.
