ಕನ್ನಡ ಅಳಿವು-ಉಳಿವು ಎರಡೂ ಮುಷ್ಠಿಯೊಳಗಿರುವ ಪಕ್ಷಿಯ ಹಾಗೆ.ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡಿದರೆ ಕನ್ನಡವು ಉಳಿಯುವುದು.ಬಂದ ನೀರು ಇರುವ ನೀರನ್ನು ಕೊಚ್ಚಿ ಕೊಂಡು ಹೋದ ಹಾಗೆ ಇತರ ಭಾಷೆಗಳ ಪ್ರಭಾವದಿಂದ ಕನ್ನಡ ಅಳಿಯದಿರಲಿ ಎಂದು ನಿವೃತ್ತ ಕನ್ನಡ ಉಪನ್ಯಾಸಕರಾದ ಶ್ರೀ ಯು.ಯಸ್. ವಿಶ್ವೇಶ್ವರ ಭಟ್ ಇವರು ಹೇಳಿದರು.SHV_8821

ಇವರು ವಿಠಲ ಪದವಿಪೂರ್ವ ಕಾಲೇಜಿನಲ್ಲಿಕನ್ನಡ ಅಳಿವು-ಉಳಿವು ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.ಕಾಲೇಜಿನ ಉಪನ್ಯಾಸಕರಾದ ಅಣ್ಣಪ್ಪ ಸಾಸ್ತಾನ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕರಾದ ಸಂಪಾವತಿ,ಸಂಧ್ಯಾಲಕ್ಷ್ಮಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಅಝ್ವೀನಾ ಸ್ವಾಗತಿಸಿ,ಐಶ್ವರ್ಯ ವಂದಿಸಿದರು.ವಿದ್ಯಾರ್ಥಿನಿ ಅಲೈಕ ಬೀಬಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *