ಮಂಗಳೂರು: ರಾಜ್ಯ ಸರಕಾರದ ವಿರೋಧದ ನಡುವೆಯೂ ಬಿಜೆಪಿ ಮಂಗಳೂರಿನಲ್ಲಿ ಬ್ರಹತ್ ಪ್ರತಿಭಟನಾ ರ್ಯಾಲಿಯನ್ನು ದಿಟ್ಟವಾಗಿ ಸಂಘಟಿಸಿ ,ಸರಕಾರಕ್ಕೆ ಸೆಡ್ಡು ಹೊಡೆದು ನಿಂತಿದೆ. ಈಗಾಗಲೇ ಛೀಮಾರಿ ಹಾಕಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೆಯೂ ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದು ರ್ಯಾಲಿಯ ನಾಯಕತ್ವವನ್ನು ವಹಿಸಿಕೊಂಡಿದ್ದ ಬಿಜೆಪಿ ಮುಖಂಡರುಗಳಾದ ಬಿ.ಎಸ್ ಯಡಿಯೂರಪ್ಪ , ಆರ್ ಅಶೋಕ್, ಶೋಭಾ ಕರಂದ್ಲಾಜೆ , ಹರೀಶ್ ಪೂಂಜಾ , ಕೆ ಎಸ್ ಈಶ್ವರಪ್ಪ ಮುಂತಾದ ನಾಯಕರುಗಳನ್ನು ಪೊಲೀಸರು ಬಂಧಿಸಿದ್ದು ಪರಿಸ್ಥಿತಿ ಉದ್ವಿಘ್ನತೆಯಿಂದ ಕೂಡಿದೆ.

