ಭಾರತೀಯ ಮಾಧ್ಯಮ ಲೋಕವೇ ಬೇಚ್ಚಿ ಬೀಳಿಸುವಂತಹಾ ಪ್ರಸಂಗ ನಡೆದಿದೆ , ಸದಾ ನಿಷ್ಠೂರವಾದಿ ನಡೆಯಿಂದ ಹೆಸರುವಾಸಿಯಾಗಿದ್ದ ದಿಟ್ಟ ಪತ್ರಕರ್ತೆಯೊಬ್ಬರ ಭೀಕರ ಹತ್ಯೆಯಾಗಿದೆ.ಭಾರತ ಮಾದ್ಯಮ ಲೋಕದ ಧ್ರುವತಾರೆಯೊಂದು ಕಣ್ಮರೆಯಾಗಿದೆ. ಹೌದು ಸದಾ ಬಡಜನರ ಪರವಾಗಿದ್ದ , ಬಡಜನರ ಸಮಸ್ಯೆಗಳಿಗೆ ಸ್ಪಂದಿಸುತ್ತದ್ದ ಗೌರಿ ಲಂಕೇಶ್ ಇನ್ನು ನೆನಪು ಮಾತ್ರ . ನಿಷ್ಠೂರ , ಕಠೋರ ವರದಿಗಾರಿಕೆಯಿಂದ ಬಂಡವಾಳಶಾಹಿಗಳ ಹುಟ್ಟಡಗಿಸುತ್ತದ್ದ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗದಲ್ಲೇ ದುಷ್ಕರ್ಮಿಗಳು ಹತ್ಯೆಗೈದಿರುವುದು ವಿಷಾದನೀಯ. 
ಕನ್ನಡ ಪತ್ರಿಕೋದ್ಯಮ ವಲಯದಲ್ಲೇ ಸಂಚಲನವನ್ನುಂಟುಮಾಡಿದ್ದ ಲಂಕೇಶ್ ಪತ್ರಿಕೆಯು ಶ್ರಿ ಲಂಕೇಶ್ ಸಂಪಾದಕ್ತವದಲ್ಲಿ ಮೂಡಿ ಬರುತ್ತಿತ್ತು, ಬಂಡವಾಳಶಾಹಿಗಳು , ಕಳ್ಳ ಬ್ರಷ್ಟರ ವಿರುದ್ದ ಸದಾ ಲೇಖನಿ ಮಸೆಯುತ್ತಾ ಯುದ್ದ ಸಾರುತ್ತಿದ್ದ ಲಂಕೇಶ್‍ರ ಕಾ;ಲಾನಂತರದಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆದುಕೊಂಡು ಬಂದಿದ್ದವರು ಗೌರಿ ಲಂಕೇಶ್ . ವೈಚಾರಿಕ ವೈಮನಸ್ಯದಿಂದ ತನ್ನ ಕುಟುಂಬ ವರ್ಗದಲ್ಲೇ ಹಲವರ ವಿರೋಧ ಕಟ್ಟಿಕೋಡಿದ್ದ ಇವರು ಆರೆಸ್ಸೆಸ್ಸ್ ,ಬಿಜೆಪಿ ,ಹಾಗೂ ಇತರೆ ಹಿಂದೂಪರ ಸಂಘಟನೆಗಳನ್ನು ಕಟುವಾಗಿಯೇ ವಿರೋಧಿಸುತ್ತಾ ಬಂದವರು ಆದರೆ ನಾಮಕಾವಸ್ಥೆಯ ಬುದ್ದಿಜೀವಿಯಂತಾಗದೆ ಹಲವಾರು ಸಾಮಾಜಿಕ ಬದಲಾವಣೆಗಾಗಿ ಶ್ರಮಿಸಿದ ಧೀರೆ ಗೌರಿ ಲಂಕೇಶ್. ನಕ್ಸಲ್‍ವಾದವು ಕರ್ನಾಟಕದಲ್ಲಿ ಬೇರೂರಲು ಕಾತರಿಸುತ್ತಿದ್ದ ದಿನಗಳಲ್ಲಿ , ಹಲವಾರು ನಕ್ಸಲ್ ಮುಖಂಡರನ್ನು ಭೇಟಿಯಾಗಿ , ಶಸ್ತ್ರ ತ್ಯಜಿಸಿ, ಸತ್ಯಾಗ್ರಹ ಮಾಡುವಂತೆ ಪ್ರೋತ್ಸಾಹಿಸಿ, ಸಿರಿಮನೆ ನಾಗರಾಜನಂತಹಾ ಹಲವಾರು ನಕ್ಸಲ್ ನಾಯಕರನ್ನು ನಕ್ಸಲ್ವಾದದಿಂದ ವಿಮುಖರಾಗುವಂತೆ ಮಾಡಿ ಸಾಮಾಜಿಕ ಸಾನಮಾನ ನೀಡುವಲ್ಲಿ ಬಹಳಷ್ಟು ಶ್ರಮಿಸಿದವರು. ನಾವೆಲ್ಲರೂ ಒಂದೇ , ನಾವೆಲ್ಲರು ಕೇವಲ ಮನುಷ್ಯರು ಮಾತ್ರ, ಜಾತಿ ,ಧರ್ಮ ಬೇಧ ನಮ್ಮಲ್ಲಿ ಬೇಡ ಎಂದು ವಾದಿಸುತ್ತಾ ನಿಷ್ಠೂರವಾದಿಯಾಗಿಯೇ ಮಾತನಾಡುತ್ತಿದ್ದವರು. ಕೋಮು ಸೌಹಾರ್ದ ವೇದಿಕೆಯ ಸದಸ್ಯೆಯಾಗಿದ್ದುಕೊಂಡು ಕೋಮುವಾದದ ವಿಷಬೀಜ ಬಿತ್ತುವವರ ವಿರುದ್ಧ ಬಹಿರಂಗ ಸಮರ ಸಾರಿ , ತಮ್ಮ ಪತ್ರಿಕೆಯಲ್ಲಿ ಕೋಮುವಾದಿಗಳ ಮಾನಹರಣ ಮಾಡದ ಹಲವಾರು ಉದಾಹರಣೆಗಳೂ ಉಂಟು. ಇಂತಹಾ ಧೀರ ಪತ್ರಕರ್ತೆಯ ಕೊಲೆ ಯಾಕಾದರೂ , ಯಾರಿಂದಾದರೂ ಆಗಿರಬಹುದು ಎಂಬ ಪ್ರಶ್ನೆ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಹಲವಾರು ಬುದ್ದಿಜೀವಿಗಳ ಪ್ರಕಾರ ಗೌರಿ ಲಂಕೇಶ್ ಹತ್ಯೆಯನ್ನು ಆರೆಸ್ಸೆಸ್ಸ್, ಭಜರಂಗದಳ ಹಾಗೂ ಇತರೇ ಹಿಂದೂಪರ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ನಡೆಸಿರುವರು ಎಂಬ ವಾದ ಮಂಡನೆ ಒಂದೆಡೆಯಾದರೆ, ಆಕೆಯ ದಿಟ್ಟ ನಿಲುವುಗಳಿಂದ ಬೇಸತ್ತ ಸ್ವಪಕ್ಷಿಯರೇ ಕೊಲೆ ಮಾಡಿರುವರೇನೋ ಎಂಬ ವಾದ ಇನ್ನೊಂದೆಡೆ. ಇದಕ್ಕೆ ಪುಷ್ಠಿ ನೀಡುವಂತೇ , ಗೌರಿ ಲಂಕೇಶ್ ಮಾಡಿರುವ ಕೊನೆಯ ಕೆಲ ಟ್ವೀಟ್‍ಗಳು ಅನುಮಾನ ಮೂಡಿಸಿವೆ . ಅಷ್ಟಕ್ಕೂ ತನ್ನ ವೈಚಾರಿಕ ವಿರೋಧಿಗಳಿಗೆ ತಮ್ಮ ವಿಚಾರ ಮಂಡನೆಯ ಮೂಲಕವೇ ಉತ್ತರ ನೀಡುವ ಸಂಸ್ಕøತಿ ಆರೆಸ್ಸೆಸ್ಸ್‍ನದ್ದು , ಇದಕ್ಕೆ ವ್ಯತಿರಿಕ್ತವಾಗಿ ತಮ್ಮ ವೈಚಾರಿಕ ವಿರೋಧಿಗಳ ಉಸಿರಡಗಿಸುವ ಕಾರ್ಯ ಆರೆಸ್ಸೆಸ್ಸ ಈವರೆಗೂ ಮಾಡಿಲ್ಲ ಬದಲಾಗಿ , ಶಸ್ತ್ರವನ್ನೇ ತನ್ನ ಅಸ್ತ್ರವನ್ನಾಗಿಟ್ಟುಕೊಂಡು ತನ್ನ ವಿರುದ್ಧ ದನಿಯೆತ್ತಿದವರ ಹುಟ್ಟಡಗಿಸುವ ಜಾಯಮಾನ , ಮನಸ್ಥಿತಿ ಎರಡೂ ಇರುವುದು ನಕ್ಸಲ್ ವಾದದಲ್ಲಿ ಬಹುಷಃ ಈ ರೀತಿಯಾಗಿ ನೋಡಹೊರಟರೆ , ಗೌರಿ ಲಂಕೇಶ್ ಹತ್ಯೆಗೂ ನಕ್ಸಲ್‍ರ ಶರಣಾಗತಿಗೂ ಸಂಬಂಧವಿರಬಹುದೇನೋ ಎಂದೆನಿಸುತ್ತದೆ. ಹಲವಾರು ನಕ್ಸಲರ ಮನವೊಲಿಸಿ ಅವರನ್ನು ಸಮಾಜದ ಮೇಲ್ಮೈಗೆ ತರಲು ಪ್ರಯತ್ನಿಸುತ್ತಿದ್ದ ಗೌರಿ ಲಂಕೇಶ್ರನ್ನು ಬದುಕಲು ಬಿಟ್ಟರೆ ಮುಂದೆ ತನ್ನ ಅದಃಪತನವಾದೀತು ಎಂದು ಅಂದುಕೊಂಡ ನಕ್ಸಲ್ ಸಂಘಟನೆಯೇ ಗೌರಿಯನ್ನು ಕೊಲೆ ಮಾಡಿಸಿತೇ? ತನ್ನೊಂದಿಗಿದ್ದ ಗಿಳಿಯು ತನ್ನ ಹಿತೈಷಿಯನ್ನೇ ಕಂದಿತೇ ಎಂಬ ಪ್ರಶ್ನೆ ಕಾಡುತ್ತಿದೆ.ಈ ಯಾವ ವಿಚಾರವನ್ನು ಅರಿಯದೇ ದೂರದ ದಿಲ್ಲಿಯಲ್ಲಿ ಕುಳಿತ ಕಂಗ್ರೆಸ್ ಪಕ್ಷದ ನಾಯಕನೆಂದೆನಿಸಿಕಂಡ ರಾಹುಲ್ ಗಾಂಧಿಯು ತಾನೇ ನ್ಯಾಯದೀಶನೆಂಬಂತೆ , ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಹೊರಟು , ಆರೆಸ್ಸೆಸ್ಸ್ ಹಾಗೂ ಬೀಜೆಪಿಯ ಮೇಲೆ ಗೂಬೆ ಕೂರಿಸಹೊರಟಿರುವುದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಇದು ವೈಚಾರಿಕ ಕೊಲೆಯೋ ವೈಮನಸ್ಯದ ಕೊಲೆಯೋ ಕೊಲೆಗಾರನೇ ಬಲ್ಲ . ಅದೇನೇ ಇರಲಿ , ಗೌರಿ ಲಂಕೇಶ್ರನ್ನು ಕೊಂದ ಕೊಲೆಗಾರರು ಶೀಘ್ರ ಪತ್ತೆಯಾಗಲಿ ಎಂಬುವುದು ನಮ್ಮ ಆಶಯ.
