ಭಾರತ ಕಂಡ ಉತ್ತಮ ಪತ್ರಕರ್ತೆ ಸಾಮಾಜಿಕ ಹೋರಾಟಗಾರ್ತಿ , ಗೌರಿ ಲಂಕೇಶ್ರನ್ನು ದುಷ್ಕರ್ಮಿಗಳು ಆಕೆಯ ಮನೆಯ ಮುಂದೆಯೇ ಹತ್ಯಗೈದಿರುವುದು ತಿಳಿದಿರುವಂತಹುದೇ ಆದರೆ ಕೆಲ ವಿಕೃತ ಮನಸ್ಸಿನ ದುಷ್ಕರ್ಮಿಗಳು ಗೌರಿ ಲಂಕೇಶ್ ಸಾವಿನ ಕುರಿತು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನಾರ್ಹ . Gauri_Lankesh
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಮಾತುಗಳನ್ನು ವ್ಯಕ್ತಪಡಿಸಲು ಅವಕಾಶವಿರುವುದರಿಂದ ಎಲ್ಲರೂ ಅವರವರ ಅಭಿಪ್ರಾಯವನ್ನು ಅವರವರದೇ ಧಾಟಿಯಲ್ಲಿ ಮಂಡಿಸುತ್ತಾರೆ . ಹಾಗೆ ನೋಡಹೊರಟರೆ ಪತ್ರಕರ್ತೆಯಾಗಿ ಗೌರಿ ಲಂಕೇಶ್ ಸಾಮಾಜಿಕವಾಗಿ ಜನಪರವಾದ ಕೆಲಸಕಾರ್ಯಗಳನ್ನು ಬಹಳಷ್ಟು ಮಾಡಿರುವಂತವರೇ…. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ನಕ್ಸಲೀಯರಲ್ಲಿ ಹಲವಾರು ನಕ್ಸಲೀಯರಿಗೆ ಧೈರ್ಯ ತುಂಬಿ ಸಾಮಾಜಿಕವಾಗಿ ಕಾನೂನು ಮೂಲಕ ಹೋರಾಡುವಂತೆ ಪ್ರೊತ್ಸಾಹಿಸಿ , ನಕ್ಸಲೀಯರನ್ನು ಸಮಾಜಮುಖಿಯಾಗಿಸುವಲ್ಲಿ ಅದೆಷ್ಟು ಶ್ರಮಪಟ್ಟು ಯಶಸ್ವಿಯಾಗಲಿಲ್ಲವೇ??? , ಹಲವಾರು ದಲಿತ ಕುಟುಂಬಗಳೀಗೆ ಸಾಮಾಜಿಕ ನ್ಯಾಯ ಕೊಡಿಸಿ ದಲಿತರು ಸಹಾ ನಮ್ಮಂತೇ ಮನುಷ್ಯರೂ ಅವರನ್ನು ಸಹಾ ಪ್ರೀತಿಯಿಂದ ಕಾಣಿ ಎಂದು ವಾದಿಸಿಲ್ಲವೇ ? ಹಲವಾರು ರೈತಪರ ಹೋರಾಟಗಳನ್ನು ಸಂಘಟಿಸಿ ಆ ಹೋರಾಟಗಳಿಗೆ ನೈತಿಕ ಸ್ಥೈರ್ಯ ತುಂಬಿ ರೈತರಿಗೆ ಆಶಾಕಿರಣವಾಗಿರಲಿಲ್ಲವೇ???ಲೈಂಗಿಕ ಕಾರ್ಯಕರ್ತರಿಗೂ ಮನಸ್ಸಿದೆ ಅವರಿಗೂ ಅವರದೇ ಆದ ನೋವಿದೆ ಎಂದು ವಾದಿಸಿದ್ದೂ ಇದೇ ಗೌರಿ ಲಂಕೇಶ್ ಎಂಬ ಗಟ್ಟಿಗಿತ್ತಿ, ಹಲವಾರು ನೊಂದ ಜೀವಿಗಳ ಪರವಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ನೊಂದ ಜೀವಿಗಳಿಗೆ ಆತ್ಮಸ್ಥೈರ್ಯ ತುಂಬಿ ಅವರ ಅಭಿವೃಧ್ಧಿಗೆ ಶ್ರಮಿಸಿದ್ದು ಇದೇ ಗೌರಿ ಲಂಕೇಶ್ ಎಂಬ ಆಶಾಕಿರಣ .. ಸಾಮಾಜಿಕ ಹೋರಾಟಗಾರರಿಗೆ ಮಾರ್ಗದರ್ಶಕಿಯಾಗಿ, ಪ್ರೀತಿಯ ಅಮ್ಮನಾಗಿ , ಅಸ್ಪøಶ್ಯತೆಯ ವಿರುದ್ದದ ಹೋರಾಟಗಾರ್ತಿಯಾಗಿ ನಿಷ್ಠೂರವಾದಿ ವಾಗ್ಮಿಯಾಗಿ ಹಲವಾರು ಬಂಡವಾಳಶಾಹಿಗಳ ಕೆಂಗಣ್ಣಿಗೆ ಗುರಿಯಾದದ್ದು ಸುಳ್ಳಲ್ಲ . ಆದರೂ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದುಕೊಂಡು , ಎಲ್ಲರ ಮನೆಮಾತಾಗಿದ್ದ ಗೌರಿ ಲಂಕೇಶ್ ಇನ್ನು ನೆನಪು ಮಾತ್ರ .. ಅವರ ಆತ್ಮ ಚಿರಸ್ಥಾಯಿಯಾಗಿರಲಿ ಎಂಬ ಸದಾಶಯವೊಂದೇ ಸತ್ಯ ಮಿಕ್ಕವೆಲ್ಲವೂ ಮಿಥ್ಯವಷ್ಟೆ……

By Suddi9

Leave a Reply

Your email address will not be published. Required fields are marked *