ಲಯನ್ಸ್ ಕ್ಲಬ್ ಮಂಗಳೂರು , ಜೆಸಿಐ ಮಂಗಳೂರು , ಮೊರಾರ್ಜೆ ದೇಸಾಯಿ ವಸತಿ ಶಾಲೆ ಕುಟಿನ್ಹೋಪದವು,ಉಳಾಯಿಬೆಟ್ಟು ಹಾಗೂ ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ಇದರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಉಳಾಯಿಬೆಟ್ಟು ಕುಟಿನ್ಹೋಪದವು ಮೊರಾರ್ಜೆ ದೇಸಾಯಿ ವಸತಿ ಶಾಲೆಯಲ್ಲಿ ಪರೀಕ್ಷಾ ತಯಾರಿ ಮತ್ತು ಅಧ್ಯಯನ ತಂತ್ರಗಳು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ 2016-17 ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ(625/620) ಪಡೆದ ಕುಮಾರಿ ಪೃಥ್ವಿ ಭಟ್ ಇವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸುಜಾತಾ ಆರ್ ಶೆಟ್ಟಿ , ವಿಪಿ ಭಟ್ , ಹರಿಕೃಷ್ಣ ಅಡಿಗ , ಸವಿತಾ ರಮೇಶ್ ಸುಮಂಗಳ ಎಸ್ ಇವರುಗಳು ಸನ್ಮಾನಿಸಿದರು
