ಬಂಟ್ವಾಳ:ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿಯ ಹೇಳಿಕೆಯಿಂದ ಬಂಟ್ವಾಳದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು.  ಪೊಲೀಸ್ ಅ„ಕಾರಿಯೊಂದಿಗೆ ಅತೀ ಕೀಳುಮಟ್ಟದಲ್ಲಿ ವ್ಯವಹರಿಸಿ ಹಿಂದೂ ಮುಖಂಡರನ್ನು ಬಂ„ಸಲು ಆಗ್ರಹಿಸಿದ್ದಾರೆ. ಅ„ಕಾರದ ದುರುಪಯೋಗಪಡಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.btw sep 4 Kallige Bjp Protest (3)

btw sep 4 Kallige Bjp Protest (2)ಇದು ಉಸ್ತುವಾರಿ ಸಚಿವರ ಸ್ವಂತ ಊರಾದ ಕಳ್ಳಿಗೆ ಗ್ರಾಮದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಕೇಳಿಬಂದ ಮಾತು.ಹಿಂದು ಕಾರ್ಯಕರ್ತರ ಮೇಲೆ ಪಿ ಎಪ್ ಐ ಕೆಎಪ್ಡಿ ಸಂಘಟನೆ ಕಾರ್ಯಕರ್ತರಿಂದ ವ್ಯವಸ್ಥಿತವಾಗಿ ನಿರಂತರ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ. ಆದರೆ ಹಿಂದುಗಳನ್ನು ಕೇಳುವವರಿಲ್ಲದ ಪರಿಸ್ಥಿತಿ ಬಂದೊದಗಿದೆ. ಉಸ್ತುವಾರಿ ಸಚಿವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ಆರೋಪಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ. ಆದ್ದರಿಂದ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಕೆಎಪ್ಡಿ, ಪಿಎಪ್ಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹ ವ್ಯಕ್ತವಾಯಿತು. ಸೆ.7ರಂದು ನಡೆಯಲಿರುವ ಬೈಕ್ ರ್ಯಾಲಿಗೆ ಅನುಮತಿ ನಿರಾಕರಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸಂವಿಧಾನದ ಬದ್ಧವಾಗಿ ಪ್ರತಿಭಟಿಸುವ ಹಕ್ಕನ್ನೂ ಕಸಿಯುವ ಮೂಲಕ ಸಚಿವರು ಸರ್ವಾಧಿಕಾರಿ ಧೋರಣೆಯನ್ನು ತಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.

btw sep 4 Kallige Bjp Protest (1)
ಬಳಿಕ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಲಾಯಿತು. ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷರಾದ ಪುರುಷ ಎನ್. ಸಾಲ್ಯಾನ್, ದಾಮೋದರ ನೆತ್ರಕೆರೆ, ಮನೋಹರ ಕಂಜತ್ತೂರು, ದೇವಿಪ್ರಸಾದ್ ಎಂ. ದೇವಂದಬೆಟ್ಟು, ನವೀನ್ ಪೆರಿಯೋಡಿಬೀಡು, ಮನೋಜ್ ವಳವೂರು, ಯೋಗೀಶ್ ದರಿಬಾಗಿಲು, ಪುಷ್ಪರಾಜ್ ಶೆಟ್ಟಿ ಬ್ರಹ್ಮರಕೂಟ್ಲು, ಯೋಗೀಶ್ ವಿ.ಕೆ. ದರಿಬಾಗಿಲು, ಕೇಶವ ಬೆಂಜನಪದವು, ಸತೀಶ್ ಬ್ರಹ್ಮರಕೂಟ್ಲು, ಪ್ರವೀಣ್ ಜ್ಯೋತಿಗುಡ್ಡೆ, ಪ್ರವೀಣ್ ಕಂಜತ್ತೂರು, ರಾಜೇಶ್ ಜಾರಂದಗುಡ್ಡೆ, ಗ್ರಾಪಂ ಸದಸ್ಯರಾದ ಮಹೇಶ್ ಚಂದ್ರಿಗೆ, ರೇವತಿ ಮಾಡಂಗೆ, ಯಶೋದಾ ಜಾರಂದಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *