ಬಂಟ್ವಾಳ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಮಂಗಳವಾರ ಪಾಣೆಮಂಗಳೂರಿನ ಭ.1008 ಶ್ರೀ ಅನಂತನಾಥ ಸ್ವಾಮಿ ಜಿನಚೈತ್ಯಾಲಯದಲ್ಲಿ ಭವ್ಯಮಂಗಲ ವರ್ಷಾಯೋಗ ಚಾತುರ್ಮಾಸ ಆಚರಿಸುತ್ತಿರುವ ಪರಮ ಪೂಜ್ಯ108 ಮುನಿಶ್ರೀ ವೀರ ಸಾಗರ ಮಹಾರಾಜರನ್ನು ಭೇಟಿಯಾದರು.ಅನಂತ ನೋಂಪಿಯ ಶುಭ ದಿನದಂದು ಶ್ರೀ ದೇವರ ದರ್ಶನ ಹಾಗೂ ಮಹಾ ಮಾತೆ ಪದ್ಮಾವತಿಯ ವಿಶೇಷ ಅಲಂಕಾರದ ಲಕ್ಷಹೂವಿನ ಪೂಜೆಯನ್ನೂ ವೀಕ್ಷಿಸಿದ ಡಾ. ಹೆಗ್ಗಡೆ, ಕೆಲ ಕಾಲ ಮುನಿಶ್ರೀಗಳೊಂದಿಗೆ ಕಳೆದರು.

IMG_0775
ಈ ಸಂದರ್ಭದಲ್ಲಿ ಚಾತುರ್ಮಾಸ ಸಮಿತಿಯ ಅಧ್ಯಕ್ಷ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಜಿನರಾಜ ಆರಿಗ ಪಚ್ಚಾಜೆ, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಹರ್ಷರಾಜ ಬಲ್ಲಾಳ್, ಪ್ರವೀಣ್ ಕುಮಾರ್, ಭರತ್ ರಾಜ್ ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *