ಬಂಟ್ವಾಳ; ಜೈನರಿಗೆ ದಶಲಕ್ಷಣ ಪರ್ವವು ಅತ್ಯಂತ ಮಹತ್ವದ ಪರ್ವ ಎಂದು 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಹೇಳಿದ್ದಾರೆ. ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸ ವ್ರತಾಚರಣೆ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಮಂಗಲ ಪ್ರವಚನ ಪ್ರವಚನ ನೀಡಿದರು. ಇದಕ್ಕೂ ಮಾದಲು ಹೊಸಂಗಡಿ ಅರಮನೆಯ ಸಂಪತ್ ಕುಮಾರ್ ಶೆಟ್ಟಿ ಮತ್ತು ಕುಟುಂಬಸ್ಥರಿಂದ “ಶ್ರೀ ಪಾರ್ಶ್ವನಾಥ ಆರಾಧನೆ” ಯನ್ನು ನೆರೆವೇರಿತು.
ಪೂರ್ವಾಹ್ನ ಮುನಿ ಶ್ರೀಗಳ ಆಹಾರ ಚರ್ಯೆಯಲ್ಲಿ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು. ಇದೇ ವೇಳೆ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಸಾಮೂಹಿಕ ಶ್ರೀ ಪಾರ್ಶ್ವನಾಥ ಆರಾಧನೆಯ ವಿಧಿ- ವಿಧಾನಗಳನ್ನು ಮತ್ತು ಪೂಜಾ ಫಲಗಳನ್ನು ತಿಳಿಸಿದರು. ತ್ಯಾಗ ಧರ್ಮದ ದಿನದ ಪ್ರಯುಕ್ತ ಶ್ರಾವಕರು,ಜೀವನ ಪರ್ಯಂತ – ಚಿನ್ನಾಭರಣ ತ್ಯಾಗ, ಸೂರ್ಯಾಸ್ತದ ನಂತರ ಆಹಾರ, ನೀರು ತ್ಯಾಗ, ರೇಷ್ಮೆ ಬಟ್ಟೆ ತ್ಯಾಗ ಇತ್ಯಾದಿ ವೃತಗಳನ್ನು ಮುನಿ ಶ್ರೀ ಗಳ ಸಾನ್ನಿಧ್ಯದಲ್ಲಿ ಸ್ವೀಕರಿಸಿದರು. ಧರ್ಮ ಸಭೆಯಲ್ಲಿ ಶ್ವೇತಾ ಜೈನ್ ಮೂಡಬಿದ್ರೆ, ಶಿವ ಪ್ರಕಾಶ್ ಜೈನ್ ದಶಧರ್ಮಗಳ ಕುರಿತು ಮಾತನಾಡಿದರು.
ಮಂಗಲ ಪ್ರವಚನದ ನಂತರ ಧರ್ಮ ಸಭೆಯಲ್ಲಿ “ಶಂಕಾ-ಸಮಾಧಾನ”ಕಾರ್ಯಕ್ರಮ ನಡೆಯಿತು.ಶ್ರಾವಕರ ಧಾರ್ಮಿಕ ಪ್ರಶ್ನೆಗಳಿಗೆ ಮುನಿ ಮಹಾರಾಜರು ಶಾಸ್ತ್ರಗಳ ಆಧಾರಿತವಾಗಿ ಉತ್ತರಿಸಿದರು.
ಸಾಮೂಹಿಕ ಆರಾಧನೆ ಕಾರ್ಯಕ್ರಮದಲ್ಲಿ ಮಂಗಳೂರು,ವೇಣೂರು, ಮೂಡಬಿದ್ರೆ,ಧರ್ಮಸ್ಥಳ, ಕಾರ್ಕಳ, ಹಾಸನ, ಬೆಂಗಳೂರು ಮೊದಲಾದ ಕಡೆಗಳಿಂದ ಶ್ರಾವಕರು ಭಾಗವಹಿಸಿದ್ದರು.
ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್ ಪಂಜಿಕಲ್ಲು, ಸಂಪತ್ ಕುಮಾರ್ ಶೆಟ್ಟಿ, ಧರಣೇಂದ್ರಇಂದ್ರ,ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್ ರಾಜ್ ಮೊದಲಾದವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *