ಕೈಕಂಬ :ಯಾರು ಯಾವ ಧರ್ಮದಲ್ಲಿ ಹುಟ್ಟಬೇಕೆಂಬುದು ಪೂರ್ವ ನಿರ್ಧರಿತವಾದುದಲ್ಲ. ಎಲ್ಲರ ಹುಟ್ಟು ಆಕಸ್ಮಿಕ. ಎಲ್ಲ ಧರ್ಮಗಳಿಗಿಂತ ಮಾನವೀಯತೆಯ ಧರ್ಮ ಶ್ರೇಷ್ಠ. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ದಿಶಾ ಸಂಸ್ಥೆಯ ಅಧ್ಯಕ್ಷರಾದ ಡಾ/ಐರಿನ್ ವೇಗಸ್ ಹೇಳಿದರು.
ಅವರು ಗುರುಪುರ ಕೈಕಂಬದಲ್ಲಿ ನಡೆದ ಮಲ್ಲೂರು ಪರಾರಿ ಬರ್ಕೆ ದಿ/ತ್ಯಾಂಪಣ್ಣ ಶೆಟ್ಟಿ ಸ್ಮರಣಾರ್ಥ ಉತ್ತಮ ಕೃಷಿಕ ಪ್ರಶಸ್ತಿ ವಿತರಣೆ ಹಾಗೂ ಕೃಷಿ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೇಸರ ಕೇಂದ್ರೀಯ ಸಮನ್ವಯ ಸಮಿತಿ, ಸ್ಪಂದನ ಸ್ವ-ಸಹಾಯ ಸಂಘಗಳ ಒಕ್ಕೂಟ, ದಿಶಾ ಟ್ರಸ್ಟ್ (ರಿ)ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನಡೆದ ಕೃಷಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವೇಣೂರಿನ ಪ್ರಗತಿ ಪರ ಕೃಷಿಕರಾದ ಅನಿಲ್ ಬಳಂಜ ತನ್ನ ತೋಟದಲ್ಲಿ ಬೆಳೆದ 700 ವಿವಿಧ ತಳಿಯ ಹಣ್ಣುಹಂಪಲಿನ ಗಿಡಗಳ ಕುರಿತು ಮಾಹಿತಿ ನೀಡುತ್ತಾ ಕೃಷಿಕರು ಒಂದೇ ರೀತಿಯ ಕೃಷಿಯಲ್ಲಿ ಅವಲಂಬಿತರಾಗದೆ ವೈವಿದ್ಯಮಯ ಕೃಷಿಯನ್ನು ಮಾಡಬೇಕು. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹಣ್ಣು ಹಂಪಲಿನ ಗಿಡ ಬೆಳೆಸುವತ್ತ ಗಮನ ಹರಿಸಬೇಕು ಎಂದರು.

2vp krishi vichara gosti
ಮಲ್ಲೂರು ಗ್ರಾಮದ ನಾಗೇಶ್, ಮೂಳೂರು ಗ್ರಾಮದ ರಮೇಶ್ ಹೆಗ್ಡೆ, ಕೊಳವೂರು ಗ್ರಾಮದ ಸವಿತ, ಕಂದಾವರ ಗ್ರಾಮದ ನೋಬರ್ಟ್ ಸಿಕ್ವೇರಾ, ಮೂಡುಶೆಡ್ಡೆ ಗ್ರಾಮದ ಆಶಾ ರೈ ಬೊಟ್ಟಿಕೆರೆ, ಕಿಲೆಂಜಾರು ಗ್ರಾಮದ ತೇಜಾಕ್ಷಿ, ಉಳಾಯಿಬೆಟ್ಟು ಗ್ರಾಮದ ರೇವತಿ, ಕೊಳಂಬೆ ಗ್ರಾಮದ ಮೋಲಿ ಲೋಬೋ, ಅಡ್ಡೂರು ಗ್ರಾಮದ ವಿಠಲ ಸಪಳಿಗ, ಮುತ್ತೂರು ಗ್ರಾಮದ ಹೆಲೆನ್ ಲೋಬೋ ಇವರುಗಳಿಗೆ ಮಲ್ಲೂರು ಪರಾರಿ ಬರ್ಕೆ ದಿ/ತ್ಯಾಂಪಣ್ಣ ಶೆಟ್ಟಿ ಸ್ಮರಣಾರ್ಥ ಉತ್ತಮ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ದಿಶಾಸಂಸ್ಥೆಯ ಕಾರ್ಯದರ್ಶಿ ಡಾ/ಮಹಮ್ಮದ್ ಗುತ್ತಿಗಾರ್, ನಿರ್ದೇಶಕರಾದ ಸಿಲ್ವೆಸ್ಟರ್ ಡೀಸೋಜ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನೇಸರ ಕೇಂದ್ರೀಯ ಸನನ್ವಯ ಸಮಿತಿಯ ಕಾರ್ಯದರ್ಶಿ ಪ್ರಮೀಳ ದರಿಬಾಗಿಲು, ಉಪಾಧ್ಯಕ್ಷರಾದ ರಮೇಶ್ ಹೆಗ್ಡೆ ಬೆಳ್ಳಿಬೆಟ್ಟು, ಕೋಶಾಧಿಕಾರಿ ಶಿವರಾಮ ಶೆಟ್ಟಿ ಮಲ್ಲೂರು ಉಪಸ್ಥಿತರಿದ್ದರು. ಕಾರ್ಯಗಾರದ ಸಭಾಧ್ಯಕ್ಷತೆಯನ್ನು ನೇಸರ ಕೇಂದ್ರೀಯ ಸಮನ್ವಯ ಸಮಿತಿಯ ಅದ್ಯಕ್ಷರಾದ ನೋಬರ್ಟ್ ಸಿಕ್ವೇರಾ ವಹಿಸಿದ್ದರು.

1 (1)
ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಅನಸೂಯ ಕಾಜವ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಹೆಗ್ಡೆ ಬೆಳ್ಳಿಬೆಟ್ಟು ಸ್ವಾಗತಿಸಿದರು. ಸ್ಪಂದನ ಒಕ್ಕೂಟದ ಕೋಶಾಧಿಕಾರಿ ಯಲ್ಸ್ ಡಿ’ಸೋಜ ವಂದಿಸಿದರು.

By suddi9

Leave a Reply

Your email address will not be published. Required fields are marked *