ಕೈಕಂಬ:ವಜ್ರದೇಹಿ ಬಳಗದ ಪ್ರಾಯೋಜಕತ್ವದಲ್ಲಿ ಶ್ರೀ ಕ್ಷೇತ್ರ ವಜ್ರದೇಹಿ ಮಠದಲ್ಲಿ ನಡೆದ 50ನೇ ಮಹಾಸತ್ಸಂಗದಲ್ಲಿ ಪ್ರಶಾಂತ್ ಗುರುಪುರ ಸಾರಥ್ಯದ ರಂಗ್‍ದ ಕಲಾವಿದರು ಅಭಿನಯದ “ರಂಗ್‍ದ ತೆಲಿಕೆ” ಪದತೊಟ್ಟಿಗೆ ನಲಿಕೆ ಎಂಬ ವಿಶೇಷ ಹಾಸ್ಯಮಯ ಕಾರ್ಯಕ್ರಮ ಹೊಸ ಪ್ರಯೋಗಗಳೊಂದಿಗೆ ಯಶಸ್ವಿಯಾಗಿ ಮೂಡಿಬಂತು. ಪ್ರಶಾಂತ್ ಸಕ್‍ಲೇಶ್‍ಪುರ ಇವರ ಕಂಠಸಿರಿಯಲ್ಲಿ ಇಂಪಾದ ಹಾಡುಗಳೊಂದಿಗೆ ವಿಭಿನ್ನ ಶೈಲಿಯ ನೃತ್ಯನರ್ತನ ನೆರೆದ ಜನರ ಮನಸೂರೆಗೊಳಿಸಿತು.
ನಂತರ ತಂಡದ ಪ್ರಬುಧ್ದ ಕಲಾವಿದರಿಂದ ಹಾಸ್ಯದ ರಸದೌತಣ ಬಡಿಸಲಾಯಿತು.ಜೊತೆಗೆ ರಂಗ್‍ದ ರಾಗ ಗುರುಪುರ ಅರ್ಪಿಸುವ ಮೊದಲ ಹಾಡು “ಧರ್ಮಸಾರಥಿ” ಬಿಡುಗಡೆಗೊಂಡು ಜನಮನಗೆದ್ದಿತು. ರಂಗ್‍ದ ತೆಲಿಕೆ ಎಂಬ ಹೊಸ ವಿಶಿಷ್ಟ ಗೊಂಚಿಲು ಕಲಾಭಿಮಾನಿಗಳನ್ನು ಕೊನೆಯವರೆಗೂ ನಕ್ಕುನಗಿಸಿತು. ಪ್ರಶಾಂತ್ ಗುರುಪುರ ಹಾಗೂ ಭರತ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.






