ಮಂಗಳೂರು: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಹನುಮನಗರ ಕಲ್ಲಡ್ಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು “ಪುರುಷರ ಮತ್ತು ಮಹಿಳೆಯರ ಯೋಗಾಸನ ಸ್ಪರ್ಧೆಯು 2017-18 “ ಸೆ. 5ರಂದು ಮಂಗಳವಾರ ಬೆಳಗ್ಗೆ 9 ಗಂಟೆಗೆ ಅಜಿತಕುಮಾರ ಸಭಾಭವನದಲ್ಲಿ ಉದ್ಘಾಟನೆಗೊಳ್ಳಲಿದೆ.
ಮಂಗಳೂರು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ.ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರಅಗ್ನಿಶಾಮಕದಳ ನಾಗರಾಜ ಪೂಜಾರಿ ಉಡುಪಿ , ಚಲನಚಿತ್ರ ನಿರ್ಮಾಪಕ ಸುದೇಶ್ ಭಂಡಾರಿ ಕಿನ್ನಿಮಜಲು ಬೀಡು, ಗ್ರಾ. ಪಂ. ಸದಸ್ಯ ಉದ್ಯಮಿ ಗೋಪಾಲ ಅಶ್ವತ್ಥಡಿ ಇರಾ ಭಾಗವಹಿಸಲಿದ್ದಾರೆ.
