ಬಂಟ್ವಾಳ ತಾಲೂಕು ಮಟ್ಟದ ವಿಶ್ವಜನಸಂಖ್ಯಾ ದಿನಾಚರಣೆಯನ್ನು ಲಯನ್ಸ್‍ಕ್ಲಬ್ ಬಿ. ಸಿ. ರೋಡ್‍ನಲ್ಲಿಆರೋಗ್ಯ ಇಲಾಖಾ ವತಿಯಿಂದ ಆ. 30 ರಂದುಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಶ್ರೀ ಚಂದ್ರಹಾಸಕರ್ಕೇರಾ ಅಧ್ಯಕ್ಷರು,ತಾಲೂಕು ಪಂಚಾಯತ್ ಬಂಟ್ವಾಳ ಉದ್ಘಾಟಿಸಿ ಜನಸಂಖ್ಯಾ ಸ್ಫೋಟವನ್ನುತಡೆಗಟ್ಟುವುದು ಪ್ರತಿಯೊಬ್ಬರ ಜವಬ್ದಾರಿ ಹಾಗೂ ಈ ನಿಟ್ಟಿನಲ್ಲಿ ಆರೋಗ್ಯಇಲಾಖೆಯ ಸಿಬ್ಬಂದಿಗಳು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಕರ್ತವ್ಯ ನಿಭಾಯಿಸಬೇಕೆಂದು ಕರೆ ನೀಡಿದರು.

P_20170830_110144ಅಬ್ಬಾಸ್ ಆಲಿ,ಉಪಾಧ್ಯಕ್ಷರು ತಾಲೂಕು ಪಂಚಾಯತ್ ಬಂಟ್ವಾಳ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಏರುತ್ತಿರುವ ಜನಸಂಖ್ಯೆದೇಶದ ಅಭಿವೃದ್ಧಿಗೆ ಮಾರಕ ಹಾಗೂ ಜನಸಂಖ್ಯಾ ನಿಯಂತ್ರಣದಲ್ಲಿ ಆಶಾಕಾರ್ಯಕರ್ತೆಯ ಪಾತ್ರ ಪ್ರಮುಖ ಎಂಬ ಸಂದೇಶ ನೀಡಿದರು.ಶ ಧನಲಕ್ಷ್ಮಿ ಬಂಗೇರಾ,ಅಧ್ಯಕ್ಷ ಸ್ಥಾಯಿ ಸಮಿತಿ ಬಂಟ್ವಾಳ ಹಾಗೂ ಪುರಸಭೆ ಮಾಜಿ ಅಧ್ಯಕ್ಷೆ  ವಸಂತಿಚಂದಪ್ಪಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ತಾಲೂಕು ಪಂಚಾಯತ್ ಸದಸ್ಯೆಯರಾದ  ರತ್ನಾವತಿಜಯರಾಮ್ ಶೆಟ್ಟಿ,  ಪದ್ಮಾವತಿಪೂಜಾರಿ,  ಬೇಬಿ ಇವರು ಉಪಸ್ಥಿತರಿದ್ದರು. ಡಾ. ವಿಶ್ವೇಶ್ವರ ಭಟ್, ವೈದ್ಯಾಧಿಕಾರಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ‘’ಹೊಸ ಅಲೆ, ಹೊಸ ವಿಶ್ವಾಸ, ಸಂಪೂರ್ಣಜವಾಬ್ದಾರಿಯಿಂದ ಕುಟುಂಬ ವಿಕಾಸ’’ ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಡಾ. ದೀಪಾಪ್ರಭು, ತಾಲೂಕುಆರೋಗ್ಯಾಧಿಕಾರಿ ಸ್ವಾಗತಿಸಿ, ಶ್ರೀಮತಿ ಕಸ್ತೂರಿ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *