ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ(ರಿ) ಬಂಟ್ವಾಳ ತಾಲೂಕು, ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು, ರೋಟರಿಕ್ಲಬ್ ಬಂಟ್ವಾಳ ಇದರ ಸಹಯೋಗದಲ್ಲಿ ಸರಕಾರಿ ಪ್ರೌಢ ಶಾಲೆ ಸಾಲೆತ್ತೂರುಇಲ್ಲಿದುಶ್ಚಟದ ವಿರುದ್ಧ ಸ್ವಾಸ್ಥ್ಯ ಸಂಕಲ್ಪಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಅಧ್ಯಕ್ಷತೆಯನ್ನು ಶ್ರೀಯುತ ದೇವಿಪ್ರಸಾದ್ ಶೆಟ್ಟಿಯವರು ವಹಿಸಿಕೊಂಡಿದ್ದರು.ಕಾರ್ಯಕ್ರಮದಉದ್ಘಾಟನೆಯನ್ನುರೋಟರಿಕ್ಲಬ್ಅಧ್ಯಕ್ಷರಾದ ಶ್ರೀಯುತ ಸಂಜೀವ ಪೂಜಾರಿಯವರು ನೆರವೇರಿಸಿ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿಟ್ಲ ವಲಯದಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ ಶ್ರೀಯುತ ಬಾಲಕೃಷ್ಣಕಾರಂತಇವರು ಮನುಷ್ಯಜನ್ಮವೆಂಬುದು ಬದುಕಿನಾದ್ಯಾಂತ ಸನ್ಮಾರ್ಗದಲ್ಲಿ ನಡೆದರೆ ಸಾರ್ಥಕಜನ್ಮವಾದಂತೆನಿಸುತ್ತದೆ.ಜೀವನವೆಂಬುದು ಬದುಕಿನ ಬೇರೆ ಬೇರೆ ಹಾದಿಯಕ್ರೋಢೀಕರಣ ಅಮಲು ಹಾಗೂ ಮಾದಕ ದ್ರವ್ಯಗಳಿಂದ ದೂರವಿದ್ದಲ್ಲಿ ಶಾಲಾ ಜೀವನವೆಂಬುದು ಸುಂದರಕ್ಷಣವಾಗುತ್ತದೆ.ಕುತೂಹಲ ಕೆರಳಿಸುವ ಈ ಸಂದರ್ಭದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಜನಜಾಗೃತಿ ವೇದಿಕೆ ಇಂತಹ ಸುಂದರಕಾರ್ಯಕ್ರಮ ಆಯೋಜನೆ ಮಾಡಿದೆ.
ಪರಿಜ್ಞಾನವಿಲ್ಲದೆ ಮಾಡುವ ಕೆಲಸದಲ್ಲಿ ಕೆಲವೊಂದು ಬಾರಿ ಬದುಕೇಕೈಜಾರಿ ಹೋಗುತ್ತದೆ.ನಮ್ಮ ಮನಸ್ಸು ಹೃದಯವನ್ನು ಗಟ್ಟಿಗೊಳಿಸಿ ಸುಂದರ ಪ್ರಜೆಗಳಾಗೋಣ ಎಂದುಉತ್ತಮ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿರೋಟರಿಕ್ಲಬ್ ಕಾರ್ಯದರ್ಶಿ ಶ್ರೀಯುತ ನಾರಾಯಣ ಹೆಗಡೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ರೇವಣ್ಣ, ವಿಟ್ಲ ವಲಯದಒಕ್ಕೂಟದ ವಲಯಾಧ್ಯಕ್ಷರಾದ ಶ್ರೀಯುತ ನರಸಿಂಹ ಬಲ್ಲಾಳ್, ಸಾಲೆತ್ತೂರು ವಲಯದ ಮೇಲ್ವಿಚಾರಕಿ ಶ್ರೀಮತಿ ಮಮತಾ, ಸಾಲೆತ್ತೂರುಒಕ್ಕೂಟಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಸೇವಾಪ್ರತಿನಿಧಿ ಹೇಮಲತಾಉಪಸ್ಥಿತರಿದ್ದರು.
