ಬಿ.ಸಿ ರೋಡಿನ ಸರ್ವಿಸ್ ರಸ್ತೆಯ ಸಂಪೂರ್ಣ ಹದಗೆಟ್ಟಿದ್ದು ಜನಪ್ರತಿನಿಧಿಗಳಾರು ಇತ್ತ ಗಮನ ಹರಿಸುತ್ತಿಲ್ಲವೆಂಬುದು ಜನಸಾಮಾನ್ಯರ ಅಳಲಾದರೆ,ನಿನ್ನೆ ಸುರಿದ ಮಳೆಗೆ ಬಿಸಿರೋಡು ಬಸ್ಸು ನಿಲ್ದಾಣ ಪರಿಸರದಲ್ಲಿ ನೀರು ನಿಂತದ್ದು ಕೃತಕ ನೆರೆಯ ಪರಿಸ್ಥಿತಿ ಉಂಟಾಗಿದೆ. ಇದರಿಂದ ಪಾದಾಚಾರಿಗಳಿಗೆ , ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ.DSC_4426

DSC_4430

DSC_4432

 

ಗುರುವಾರ ರಾತ್ರಿ ಸುರಿದ ಸಾಧಾರಣ ಮಳೆಗೆ ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಕೃತಕ ನೆರೆಯಾಗಿದ್ದು ಪಾದಾಚಾರಿಗಳು, ಪ್ರಯಾಣಿಕರು ಪರದಾಡುವಂತಾಯಿತು.
ಚರಂಡಿ ನಿರ್ಮಾಣಕ್ಕಾಗಿ ಬಿ.ಸಿ.ರೋಡ್ ಸರ್ವೀಸ್ ರಸ್ತೆಯುದ್ದಕ್ಕೂ ಅಗೆದು ಹಾಕಲಾಗಿದೆ. ಪ್ರಸ್ತುತ ಚಂರಡಿ ನಿರ್ಮಾಣಾ ಪೂರ್ಣಗೊಂಡಿದ್ದರೂ ಅಗೆದಿರುವ ಮಣ್ಣು ಚರಂಡಿಯಲ್ಲಿ ತುಂಬಿದ್ದರಿಂದ ಮಳೆ ನೀರು ಹರಿದುಗೋಗದೆ ಚರಂಡಿ ಬ್ಲಾಕ್ ಆಗಿದೆ.
ಮಳೆ ನೀರು ಸರ್ವೀಸ್ ರಸ್ತೆಯಲ್ಲಿ ನಿಂತಿದ್ದಲ್ಲದೆ ಪ್ರಯಾಣಿಕರು ಬಸ್‍ಗಾಗಿ ಕಾಯುವ ಪ್ರದೇಶದಲ್ಲಿ ಕೃತಕ ನೆರೆ ಆಗಿದೆ. ಒಂದೆಡೆ ರಸ್ತೆಯಲ್ಲಿ ನಡೆದಾಡಲು ಪಾದಾಚಾರಿಗಳು ಪರದಾಡಿದರೆ ಮಗದೊಂದೆಡೆ ವಾಹನಗಳು ಸಂಚಾರಿಸುವಾಗ ಪಾದಾಚಾರಿಗಳಿಗೆ ಕೆಸರ ಸಿಂಪಡಿಣೆಯಾಯಿತು. ವಾಹನಗಳ ಚಕ್ರಗಳಿಂದ ಕೆಸರು ಒಂದೆಡೆಯಿಂದ ಇನ್ನೊಂದೆಡೆಗೆ ಹರಡಿದ್ದರಿಂದ ಬಿ.ಸಿ.ರೋಡ್ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿತು.
ಅವೈಜ್ಞಾನಿಕ ಹಾಗೂ ಪೂರ್ಣ ಕಾಮಗಾರಿ ಮಾಡದಿರುವುದರಿಂದ ಈ ಎಲ್ಲ ಸಮಸ್ಯೆ ಉಂಟಾಗಿದೆ. ಕೆಸರಿನಿಂದ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗಳು ಮತ್ತು ವಾಹನಗಳಿಂದ ಕೆಸರ ಸಿಂಚನೆಯಾದ ಸಾರ್ವಜನಿಕರು ಅಧಿಕಾರಿಗಳಿಗೆ ಹಾಗೂ ಪಾದಾಚಾರಿಗಳಿಗೆ ಹಿಡಿ ಶಾಪ ಹಾಕಿದರು. ಇನ್ನೂ ಮಳೆಗಾಲ ಆರಂಭವಾಗಿಲ್ಲ. ಮೊದಲ ಸಾಧಾರಣ ಮಳೆಗೆ ಈ ರೀತಿಯಾದರೆ ಮಳೆಗಾಲದಲ್ಲಿ ಬಿ.ಸಿ.ರೋಡಿನ ಸ್ಥಿತಿ ಏನು ಎಂದು ಪ್ರಶ್ನಿಸಿದರು.

By Suddi9

Leave a Reply

Your email address will not be published. Required fields are marked *