ಬಂಟ್ವಾಳ: ಟ್ರಾಫಿಕ್ ನಿರ್ವಹಣೆ ಮಾಡಬೇಕಾದ ಬಂಟ್ವಾಳ ಸಂಚಾರಿ ಪೊಲೀಸರಿಗೆ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ಗುಂಡಿ ಮುಚ್ಚಿಸುವ ಕಾಯಕವಾಗಿಬಿಟ್ಟಿದೆಯ ಎಂಬ ಪ್ರಶ್ಙೆ ಕಾಡಲಾರಂಬಿಸಿದೆ. ಹೊಂಡಗಳಿಂದ ಕೂಡಿರುವ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ಪಾದಚಾರಿಗಳಿಗೆ ಬಿಡಿ ವಾಹನಸಂಚಾರಕ್ಕೂ ಆಯೋಗ್ಯವಾಗಿದ್ದು, ದಪ್ಪ ಚರ್ಮದ ರಾ.ಹೆ.ಪ್ರಾ.ಇಲಾಖೆಗೆ ಕೇಳಿಸದ ಮತ್ತು ಕಾಣಿಸದ ಹಿನ್ನಲೆಯಲ್ಲಿ ಟ್ರಾಫಿಕ್ ಪೊಲೀಸರುಗುಂಡಿ ಮುಚ್ವುವ ಕಾರ್ಯದಲ್ಲಿ ತೊಡಗಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.ಕಳೆದ ವಾರ ಕೂಡ ಟ್ರಾಫಿಕ್ ಪೊಲೀಸರ ಮುತುವರ್ಜಿಯಿಂದ ತೇಪೆ ಹಾಕಿಸಿದ್ದರು.20170817_111120

ಅದು ಮಳೆಗೆ ಕೊಚ್ಚಿ ಹೋಗಿತ್ತು.ಅದಕ್ಕಿಂತ ಮೊದಲು ಕೂಡ ಗುಂಡಿ ಮುಚ್ಚಿಸಿದ್ದರು.ಇದೀಗ ಗುರುವಾರ ಪುರಸಭೆಯ ಜೆಸಿಬಿ ಬಳಸಿಕೊಂಡು ಟ್ರಾಫಿಕ್ ಎಸ್ ಐ ವಿಠಲ ಶೆಟ್ಟಿ ,ಎಎಸ್ಐ ಬಾಲಕ್ರಷ್ಣ ಅವರ ಮುತುವರ್ಜಿಯಲ್ಲಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸಲಾಗಿದೆ.ಜನಪ್ರತಿನಿಧಿಗಳು ಮಾಡಿಸಬೇಕಾದ ಈ ಕಾರ್ಯವನ್ನು ಟ್ರಾಫಿಕ್ ಪೊಲೀಸರು ಮಾಡಿಸುತ್ತಿದ್ದು,ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು ಎಂಬ ಟೀಕೆ ಸಾರ್ವಜನಿಕ ಬಲಯದಲ್ಲಿ ವ್ಯಕ್ತವಾಗಿದೆ.ಕೆಲ ದಿನಗಳ ಹಿಂದೆ ವಾಹನ ಚಾಲಕರು ಬಿಕ್ಷೆ ಬೇಡಿ ಗುಂಡಿ ಮುಚ್ಚಿದ್ದನ್ನು ಇಲ್ಲಿ ನೆನಪಿಸಬಹುದು.ರಾಜಕೀಯ ಪಕ್ಷಗಳ ನೇತಾರರು ಈರಸ್ತೆ ವಿಚಾರದಲ್ಲಿ ಆರೋಪ,ಪ್ರತ್ಯಾರೋಪದಲ್ಲಿ ತೊಡಗಿದ್ದರೆ,ರಾ.ಹೆ.ಪ್ರಾ.ಇಲಾಖೆ ಈ ರಸ್ತೆ ನಮ್ಮ ವ್ಯಾಪ್ತಿಗೆ ಸೇರಿದ್ದಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಚಾಲಕ ಮತ್ತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಯಾಗಿದ್ದು,ಕೆಲವೊಂದು ತಾಂತ್ರೀಕ ಸಮಸ್ಯೆಯಿಂದ ವಿಳಂಬವಾಗಿದೆ.ಮಳೆಗಾಲ ಮುಗಿದಾಕ್ಷಣ ಕಾಮಗಾರಿ ಕೈಗತ್ತಿಕ್ಕೊಳ್ಳಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರವಷ್ಠೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.ಆದರೆ ಈ ರಸ್ತೆಯಲ್ಲಿ ವಾಹನ ಸಂಚಾರವೇ ದುಸ್ತರವಾಗಿರುವ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ತಾತ್ಕಲಿಕವಾಗಿ ಗುಂಡಿ ಮುಚ್ಚುವ ಕಾರ್ಯ ನಡೆಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *