ಉದ್ಯೋಗವನ್ನು ಅರಸಿ ಕೊಲ್ಲಿ ರಾಷ್ಟ್ರಗಳಲ್ಲಿ ಜೀವಿಸಬೇಕಾದ ಸನ್ನಿವೇಶದಲ್ಲಿ ಕುವೈತ್ ನಲ್ಲಿ ಕೆಸಿಎಫ್ ಆಯೋಜಿಸಿದ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಪ್ರೇಮದ ಕಾಳಜಿಯನ್ನು ಇನ್ನಷ್ಟು ಹೆಚ್ಚಿಸಿದೆ.ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಫಾಹಿಲ್ ನಲ್ಲಿರುವ ಕೆಸಿಎಫ್ ಕೇಂದ್ರ ಕಛೇರಿಯಲ್ಲಿ ಬಹುಮಾನ್ಯ ಉಮರ್ ಫಾರೂಕ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ದುವಾದೊಂದಿಗೆ ಆರಂಭವಾಯಿತು.IMG-20170816-WA0007

ಕೇಂದ್ರ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಎಲ್ಲರನ್ನೂ ಸ್ವಾಗತಿಸಿ ಕೆಸಿಎಫ್ ಕುವೈತ್ ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದು ಕುವೈತ್ ನ ಅನಿವಾಸಿಗರಿಗೆ ಸಂತೋಷದ ಕ್ಷಣವಾಗಿದೆ. ಹೋರಾಟ,ತ್ಯಾಗದಿಂದ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ವನ್ನು ಗಳಿಸಿತು ಎಂದು ತಿಳಿಸಿದರು.ಅಧ್ಯಕ್ಷ ಭಾಷಣದಲ್ಲಿ ಬಹುಮಾನ್ಯ ಉಮರ್ ಫಾರೂಕ್ ಸಖಾಫಿಯವರು ನಮಗೆ ಭಾರತದಲ್ಲಿ ಇದ್ದಂತೆ ಸ್ವಾತಂತ್ರ್ಯ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ರಾಷ್ಟ್ರ ಪ್ರೇಮದ ಬಗ್ಗೆ ತಿಳಿಸಿ ದರು.ಜನಾಬ್ ಝಕ್ರಿಯಾ ಆನೆಕಲ್ ಮಾತನಾಡಿ ನಾವು ನಮ್ಮ ರಾಷ್ಟ್ರದ ಬಗ್ಗೆ ಪ್ರೀತಿಯನ್ನು ತೊರಿಸಬೇಕಾಗಿದೆಹುಬ್ಬುಲ್ ವತನ್ ಮಿನಲ್ ಈಮಾನ್(ಸ್ವರಾಜ್ಯ ಪ್ರೇಮವು ಈಮಾನಿನ ಭಾಗವಾಗಿದೆ) ಎಂಬ ಪ್ರವಾದಿ ವಚನದ ಮೂಲಕ ನಾಡಿನ ಸಮಸ್ತ ಜನರಿಗೂ ಸ್ವತಂತ್ರ ಭಾರತದ ಎಪ್ಪತ್ತನೇ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದರು. ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರು ಸರ್ವ ಜನಾಂಗದ ಶಾಂತಿಯ ತೋಟವಾಗಿ ಭಾರತ ಇನ್ನಷ್ಟು ಪ್ರಕಾಶಿಸಲಿ, ಪ್ರಜ್ವಲಿಸಲಿ ನಮ್ಮೊಳಗಿನ ಭಾರತ ಜಾಗೃತಗೊಲ್ಲಲಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು. ಕುವೈತ್ ನಲ್ಲಿ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕಿರುವುದು ಭಾಗ್ಯ ಎಂದು ಹೇಳಿದರು.ಕೊನೆಯದಾಗಿ ತೌಫೀಕ್ ಅಡ್ಡೂರ್ ಧನ್ಯವಾದಗೈದರು

By suddi9

Leave a Reply

Your email address will not be published. Required fields are marked *