ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಭಜನಾ ಮಂದಿರ ದ ಆಶ್ರಯದಲ್ಲಿ 85ನೇ ವರ್ಷದ ಮೊಸರು ಕುಡಿಕೆ ಉತ್ಸವ ಅದ್ದೂರಿಯ ಮೆರವಣಿಗೆಯೊಂದಿಗೆ ನಡೆಯಿತು. ವಿವಿಧ ಸ್ತಬ್ದ ಚಿತ್ರಗಳು ಜನರ ಮನಸೂರೆಗೊಳಿಸಿತು. ನೇತು ಹಾಕಲಾಗಿದ್ದ್ ಮಡಿಕೆಗಳನ್ನು ಯುವಕರ ತಂಡ ಪಿರಮಿಡ್ ರಚಿಸಿ ಒಡೆಯುತ್ತದ್ದ್ ದೃಶ್ಯ ಅಲ್ಲಲ್ಲಿ ಕಂಡು ಬಂತು. ಬಾರೀ ಜನ ಸಾಗರ ನೆರೆದಿದತ್ತು. ತುಂತುರು ಮಳೆಯನ್ನು ಲೆಕ್ಕಿಸದೆ ಮೊಸರು ಕುಡಿಕೆ ಸಂಭ್ರಮದಲ್ಲಿ ಜನರು ಬಾಗಿಯಾದರು . ನಾಸಿಕ್ ಬ್ಯಾಂಡ್ ಸೆಟ್, ಕೃಷ್ಣ ವೇಷದಾರಿಗಳು, ಗಮನ ಸೆಳೆದವು . ವಿವಿಧ ಸಂಘ ಸಂಸ್ಥೆಗಳು ಭಾಗಿಯಾದವು. ಶ್ರೀಕೃಷ್ಣ ದೇವರನ್ನು ಶೋಬಾಯಾತ್ರೆರೆಯ ಮೂಲಕ ಮಂದಿರದಿಂದ ಕರಿಂಗಾಣ ಕ್ರಾಸ್ ರಸ್ತೆವರೆಗೆ ತೆರಳಿ ವಾಪಾಸು ಶ್ರಿರಾಮ ಮಂದಿರದಕ್ಕೆ ತರಲಾಯಿತು.



