ಬಂಟ್ವಾಳ : ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ನಲ್ಕೆಮಾರ್ 71ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯತು. ಶಾಲಾ ವಿದ್ಯಾರ್ಥಿಗಳ ಪಥ ಸಂಚಲನ ನಡೆಸಿದ ನಂತರ ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ರತಿ ಭಂಡಾರಿ ದ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ತುಳು ನಾಡು ಪುಣ್ಯಭೂಮಿ ಸೇವಾ ಸಮಿತಿ ಸದಸ್ಯ ಲಕ್ಷ್ಮಣ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್, ಮುಖ್ಯ ಶಿಕ್ಷಕಿ ಅಪೋಲಿನ್ ಪಿಂಟೋ, ಮಾಜಿ ಗ್ರಾ.ಪಂ. ಸದಸ್ಯೆ ಬಬಿತಾ ಕೋಟ್ಯಾನ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಭಾರತಿ ಎಸ್.ಚೌಟ, ಚಿನ್ನರ ಚಾವಡಿ ಶಾಲಾಭಿವೃದ್ಧಿ ಅಧ್ಯಕ್ಷ ವಿಜಯ ಕುಮಾರ್, ಅನಿಲ್ ಪಿಂಟೋ, ಕಮಲಾಕ್ಷ ಕುಂಟಲಚ್ಚಿಲ್, ಜಯರಾಮ್, ಯುವ ಮಂಡಲ ಅಧ್ಯಕ್ಷ ಬೋಜ ಉಪಸ್ಥಿತರಿದ್ದರು. ಸ್ಥಳದಾನಿ ರಾಮಪ್ಪ ಬೀಡು ಮತ್ತು ಮಾದವ ಬಾಳಿಗ ಶಾಲಾ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು. ಅತಿಥಿಗಳನ್ನು ಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ಧನ್ಯವಾದವನ್ನು ಶಿಕ್ಷಕಿ ಶಶಿಕಲಾ ಮಾಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ರೇಖಾ ನಿರೂಪಿಸಿದರು. ಶಿಕ್ಷಕ ಜಗನ್ನಾಥ್ ಸಹಕರಿಸಿದರು. ಸಭಾಕಾರ್ಯಕ್ರಮ ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

