ಸುದ್ದಿ9ಬಂಟ್ವಾಳ: ಮಂಗಳೂರು- ಬೆಂಗಳೂರು ಸಂಪಕರ್ಿಸುವ ರಾಷ್ಟ್ರೀಯ ಹೆದ್ದಾರಿ 75 ಮೆಲ್ಕಾರ್ ಜಂಕ್ಷನ್ನಲ್ಲಿ ರಸ್ತೆಯಲ್ಲಿ ಮೃತ್ಯು ಕೂಪ ಹೊಂಡಗಳು ಬಾಯಿ ತೆರೆದು ನಿಂತಿವೆ. ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ಹೊಂಡಗಳು ತುಂಬಿ ಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರಯಾಣ ಅಪಾಯಕಾರಿಯಾಗಿದೆ. ಸರಿಯಾಗಿ ರಸ್ತೆ ಬದಿಯ ಚರಂಡಿಯನ್ನು ಹೂಳೆತ್ತದೆ ನೀರು ಹೆದ್ದಾರಿಯಲ್ಲಿ ಹರಿದು ಹೋಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ ಎನ್ನುವುದು ಸ್ಥಳೀಯರ ಆರೋಪ. ಮೆಲ್ಕಾರ್ ಆಸ್ಪತ್ರೆಯ ಎದರುಗಡೆ ಚರಂಡಿ ನೀರು ಹರಿದು ಹೋಗಲು ಚರಂಡಿಯಿಲ್ಲ. ಚರಂಡಿಯನ್ನು ಮುಚ್ಚಿ ಖಾಸಗಿ ವ್ಯಕ್ತಿಗಳು ಕಪ್ಪು ಕಲ್ಲು ಕೋರೆಗೆ ಹೋಗಲು ರಸ್ತೆ ಮಾಡಿದ್ದಾರೆ ಈಗಾಗಿ ಇಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದು ಅಲ್ಲಲ್ಲಿ ಗುಂಡಿ ಬಿದ್ದಿವೆ ಎಂದು ಸಾಮಾಜಿಕ ಕಾರ್ಯಕರ್ತ ರವಳನಾಥ ಆರೋಪಿಸಿದ್ದಾರೆ. ರಸ್ತೆಯಲ್ಲಿ ಹೊಂಡಗಳು ಬಿದ್ದು ಮಳೆ ನೀರು ನಿಂತಾಗ ದ್ವಿಚಕ್ರ ವಾಹನ ಚಾಲಕರು ರಸ್ತೆ ಕಾಣದೆ ಗುಂಡಿಗೆ ಬಿದ್ದು ಒಟ್ಟು ನಾಲ್ಕು ಜನ ಆಸ್ಪತ್ರೆ ಗೆ ಸೇರಿದ್ದಾರೆ.
ಸ್ಥಳಿಯ ಪುರಸಭೆಗೆ ಈ ಬಗ್ಗೆ ದೂರು ನೀಡಲಾಗಿದೆ. ಬೇಸಿಗೆ ಕಾಲದಲ್ಲಿ ಚರಂಡಿಯ ಹೂಳೆತ್ತುವ ಕಾರ್ಯವನ್ನು ಮಾಡಿದ್ದರೆ ಮಳೆಗಾಲದಲ್ಲಿ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳಿಯರು. ಎರಡು ದಿನಗಳಲ್ಲಿ ಈ ರಸ್ತೆಯನ್ನು ಸಂಬಂದಪಟ್ಟವರು ಸರಿ ಮಾಡದಿದ್ದರೆ ರಸ್ತೆ ತಡೆ ಮಾಡುವ ಬಗ್ಗೆ ಎಚ್ಚರವನ್ನು ನೀಡಿದ್ದಾರೆ.
ವಾಹನಗಳು ಸಂಚರಿಸುವ ವೇಳೆ ಪ್ರತಿ ಹೊಂಡವನ್ನು ಪ್ರದಕ್ಷಿಣೆ ಹಾಕಿಯೇ ಮುಂದೆ ಸಾಗ ಬೇಕಾದ ಅನಿವಾರ್ಯತೆ ಒದಗಿದೆ. ಪ್ರತೀ ವರ್ಷವೂ ಮಳೆಗಾಲದ ವೇಳೆ ಪ್ರತ್ಯಕ್ಷವಾಗುವ ಈ ಹೊಂಡಗಳಿಂದ ಪ್ರಯಾಣಿಕರಿಗೆ ಮುಕ್ತಿಯೇ ಸಿಕ್ಕಿಲ್ಲ. ಈ ಹೊಂಡಗಳು ದಿನದಿಂದ ದಿನಕ್ಕೆ ತಮ್ಮ ಗಾತ್ರವನ್ನು ಹಿಗ್ಗಿಸಿಕೊಂಡು ಕೆರೆ, ಬಾವಿಯಂತೆ ತನ್ನ ಆಳವನ್ನು ವಿಸ್ತರಿಸಿಕೊಳ್ಳುತ್ತಿವೆ. ಮಳೆ ನೀರು ನಿಂತರೇ ಸಾಕು ಈ ಹೊಂಡಗಳಿಂದ ವಾಹನ ಸವಾರರಿಗೆ ಎದುರಾಗುವ ಅಪಾಯವನ್ನು ಊಹಿಸಲು ಸಾಧ್ಯವಿಲ್ಲ. ಈಗಾಗಲೇ ಹಲವು ಮಂದಿ ವಾಹನ ಸಹಿತ ಹೊಂಡದೊಳಗೆ ಬಿದ್ದು ಗಾಯಗಳನ್ನು ಮಾಡಿಕೊಂಡ ಉದಾಹರಣೆಗಳು ಹಲವು ಇವೆ. ಆದರೂ ಹೆದ್ದಾರಿಯ ನಿರ್ವಹಣೆಯ ಜವಬ್ದಾರಿ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದ್ಯಾವುದರ ಅರಿವು ಇಲ್ಲದೆ ಕಂಬಳಿ ಹೊದ್ದು ಮಲಗಿದೆ. ಮೆಲ್ಕಾರ್ ಹಾಗೂ ಬಿ.ಸಿ.ರೋಡಿನ ಕೆಲವು ಭಾಗಗಳಲ್ಲಿ ಸಾರ್ವಜನಿಕರು, ವಾಹನ ಚಾಲಕರು ಸೇರಿಕೊಂಡು ಕಲ್ಲು ಹಾಕಿ ಹೊಂಡ

ಮುಚ್ಚುವ ಪ್ರಯತ್ನ ನಡೆಸಿದ್ದಾರೆ.

3

4

2

By Suddi9

Leave a Reply

Your email address will not be published. Required fields are marked *