ಬಂಟ್ವಾಳ : ರಾಯಿ ಪೇಟೆಯಲ್ಲಿರುವ ಹೈಮಾಸ್ಕ್ ದಾರಿ ದೀಪವು ಹಲವು ಸಮಯಗಳಿಂದ ನಾದುರಸ್ತಿಯಲ್ಲಿದ್ದು ಇದನ್ನು ಹಲವು ಬಾರಿ ಗ್ರಾಮ ಸಭೆಯಲ್ಲಿ ದುರಸ್ತಿ ಮಾಡಲು ನಿರ್ಣಯ ಕೈಗೊಳ್ಳಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ರಾಯಿ ಗ್ರಾಮ ಪಂಚಾಯತ್‍ನ ಗ್ರಾಮ ಸಭೆಯಲ್ಲಿ ನಡೆಯಿತು.

image001
ರಾಯಿ ಗ್ರಾಮ ಪಂಚಾಯತ್ ನ 2017-18 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ದಯಾನಂದ ಸಪಲ್ಯ ಇವರ ಅಧ್ಯಕ್ಷತೆ ವಹಿಸಿದ್ದು
ಸುಧೀರ್ ಶೆಟ್ಟಿ ರಾಯಿ ರವರು ಪ್ರಸ್ತಾಪಿಸಿ ದಾರಿದೀಪ ದುರಸ್ತಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಹೈಮಾಸ್ಕ್ ದಾರಿ ದೀಪವನ್ನು ಒಂದು ವಾರದೊಳಗೆ ಸರಿಪಡಿಸಲಾಗುವುದೆಂದು ಅಧ್ಯಕ್ಷರು ಭರವಸೆ ನೀಡಿದರು. ನೋಡೆಲ್ ಅಧಿಕಾರಿಯಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಯಾದ ಮಲ್ಲಿಕಾ ಇವರು ಸಭಾ ಕಲಾಪ ನಡೆಸಿಕೊಟ್ಟರು.

ಸಭೆಯಲ್ಲಿ ಕೃಷಿ ಇಲಾಖೆ , ತೋಟಗಾರಿಕಾ ಇಲಾಖೆ, ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಶಿಶು ಅಭಿವೃದ್ದಿ ಇಲಾಖೆ, ಮೆಸ್ಕಾಂ ಇಲಾಖೆ ಬಂಟ್ವಾಳ , ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮೆಸ್ಕಾಂ ಇಲಾಖೆಯ ಇಂಜಿನಿಯರ್ ನಲ್ಲಿ ಬಜಿಲೋಡಿ ಎಂಬಲ್ಲಿ ಹೊಸ ಟಿ.ಸಿ ಅಳವಡಿಸಲು ಬೇಡಿಕೆ ಸಲ್ಲಿಸಲಾಯಿತು. ಗ್ರಾಮಾಭಿವೃದ್ದಿಯ ಬಗ್ಗೆ ಸಾರ್ವಜನಿಕರು ಇತರ ಎಲ್ಲಾ ಇಲಾಖೆಗಳೊಂದಿಗೆ ಸಮಗ್ರವಾಗಿ ಚರ್ಚಿಸಿದರು.
ತಾಲೂಕು ಪಂ. ಸದಸ್ಯೆ ಮಂಜುಳಾ ಸದಾನಂದರವರು ಮಾತನಾಡಿ ತಾಲೂಕು ಪಂಚಾಯತನಿಂದ ದೊರಕುವ ಹೆಚ್ಚಿನ ಅನುದಾನವನ್ನು ಗ್ರಾಮದ ಅಭಿವೃದ್ದಿಗೆ ಒದಗಿಸಿಕೊಡುವುದಾಗಿ ತಿಳಿಸಿದರು.

ಗ್ರಾ. ಪಂ. ಉಪಾಧ್ಯಕ್ಷ ಪುಷ್ಪಲತಾ, ಸದಸ್ಯರಾದ ಹರೀಶ್ ಆಚಾರ್ಯ, ರಾಘವಅಮೀನ್ , ಜಗದೀಶ್ ಕೊಯಿಲ, ಪದ್ಮನಾಭ ಗೌಡ, ಕುಸುಮ, ಸುನಂದ, ಶೋಭಾ, ನಿರುಪಮಾ ಎಸ್. ಭಂಡಾರಿ, ಯಶೋಧ , ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಪಿ. ವೆಂಕಟೇಶ್ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಮಹಮ್ಮದ್ ಶರೀಫ್ ಇವರು ವರದಿ ಮಂಡಿಸಿ ಕೊನೆಯಲ್ಲಿ ವಂದಿಸಿದರು.

By Suddi9

Leave a Reply

Your email address will not be published. Required fields are marked *