ಬಂಟ್ವಾಳ : ಕುಂಬಾರರಿಗೆ ಮಣ್ಣು ಚಿರಪರಿಚಿತ. ಕೆಸರಿನಲ್ಲಿ ಕೆಲಸ ಮಾಡುವುದು ತುಂಬಾ ಇಷ್ಟದ ಕೆಲಸ. ಹಿಂದಿನ ಕಾಲದಲ್ಲಿ ಕುಂಬಾರರಿಗೆ ಬದುಕು ಕಟ್ಟಿಕೊಟ್ಟದ್ದೇ ಈ ಮಣ್ಣು. ಆದರೆ ಇಂದಿನ ಯುವ ಜನಾಂಗಕ್ಕೆ ಕೆಸರಿನ ಪರಿಚಯ ಮಾಡಿಕೊಡುವುದು ತುಂಬಾ ಅವಶ್ಯ ಕೆಲಸ ಎಂದು ಕರಾವಳಿ ಕುಲಾಲ ಕುಂಬಾರರ ಸ್ಥಾಪಕಾಧ್ಯಕ್ಷ ಡಾ|| ಅಣ್ಣಯ್ಯ ಕುಲಾಲ್ ತಿಳಿಸಿದರು.

8YA kesar
ಅವರು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದ ಬಳಿಯ ಅಂಗಾರೆ ಗದ್ದೆಯಲ್ಲಿ ಭಾನುವಾರ ನಡೆದ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಹಾಗೂ ರಾಜ್ಯ ಕುಂಬಾರರ ಮಹಿಳಾ ಸಂಘ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಕೆಸರ್ದ ಕಂಡೊಡು ಕುಸೆಲ್ದ ಗೊಬ್ಬುಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖಾಧಿಕಾರಿ ಓಬಯ್ಯ ಮೂಲ್ಯ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ಬಂಟ್ವಾಳ ಸೌತಡ್ಕ ಫರ್ನಿಚರ್ಸ್‍ನ ಮ್ಹಾಲಕ ನಾಗೇಶ್ ಸಾಲಿಯಾನ್, ವಕೀಲ ಉಮಾಕರ್ ಎನ್. ಬಂಗೇರ, ಬಂಟ್ವಾಳ ಕುಲಾಲ ಕುಂಬಾರರ ಮಹಿಳಾ ಸಂಘದ ಅಧ್ಯಕ್ಷೆ ಯಶೋಧ ಕೃಷ್ಣಪ್ಪ ಭಾಗವಹಿಸಿದ್ದರು.

ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರರ, ಶೌರ್ಯ ಪ್ರಶಸ್ತಿ ವಿಜೇತೆ ಪ್ರತೀಕ್ಷಾ ಎಚ್.ಎಸ್.ರವರನ್ನು ಸನ್ಮಾನಿಸಲಾಯಿತು. ಅಂಗವೈಕಲ್ಯತೆ ಇರುವ ಚಂದ್ರಶೇಖರ್ ಕುಲಾಲ್‍ರಿಗೆ ಆರ್ಥಿಕ ನೆರವು ನೀಡಲಾಯಿತು.ಸತೀಶ್ ಜಕ್ರಿಬೆಟ್ಟು, ಮಾಧವ ಬಿ.ಸಿ.ರೋಡು, ಜೈ ಗಣೇಶ್, ಡಾ| ಬಾಲಕೃಷ್ಣ, ಕವಿರಾಜ್, ಜಯರಾಜ್, ಭಾರತಿ ಟೀಚರ್, ಉಮೇಶ್ ಕುಲಾಲ್, ಸತೀಶ್ ಪಲ್ಲಮಜಲು ಸಹಕರಿಸಿದರು. ಸೇಸಪ್ಪ ನಾಯ್ಡು ಸ್ವಾಗತಿಸಿ, ಡಿ.ಎಂ ಕುಲಾಲ್ ಧನ್ಯವಾದವನ್ನು ನೆರವೇರಿಸಿದರ. ಎಚ್ಚೆ ನೈನಾಡು ಕಾರ್ಯಕ್ರಮ ನಿರೂಪಿಸಿದರು.

 

By Suddi9

Leave a Reply

Your email address will not be published. Required fields are marked *