ಮುತ್ತೂರು: ತುಳುನಾಡಿನ ಆಟಿ ತಿಂಗಳ ಆಚರಣೆಯ ಹಿಂದೆ ವೈಜ್ಞಾನಿಕ ದೃಷ್ಟಿಕೋನವಿದೆ.ಈಗಿನ ವಿದ್ಯಾಥಿಗಳು ಇದನ್ನರಿತು ತುಳು ಸಂಸ್ಕøತಿಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿಕೊಳ್ಳಬೇಕು ಎಂದು ಮೂಡುಬಿದಿರೆ ರೈತ ಸಂಘದ ಅಧ್ಯಕ್ಷರಾದ ಶ್ರೀ ಧನಕೀರ್ತಿ ಬಲಿಪ ಅವರು ನುಡಿದರು.ECO INAUGERATION
ಅವರು ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಇಕೋ-ಕ್ಲಬ್ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಏರ್ಪಡಿಸಿದ್ದ ಆಟಿ ತಿಂಗಳ 35 ಬಗೆಯ ತಿನಿಸುಗಳ ಪ್ರದರ್ಶನನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಮಾತನಾಡಿದರು.ಪ್ರಾಂಶುಪಾಲ ಶ್ರೀ ನಿರಂಜನ್ ಎ. ರವರು ಅಧ್ಯಕ್ಷತೆ ವಹಿಸಿದ್ದರು.ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀ ಚಂದ್ರಹಾಸ ಶೆಟ್ಟಿ, ಸಿ.ಬಿ.ಸಿ.ಸದಸ್ಯರಾದ ಶ್ರೀ ಮೊಹಮ್ಮದ್ ಉಸ್ಮಾನ್, ಶ್ರೀ ಅಬ್ದುಲ್ ಬಶೀರ್, ಊರ ಪ್ರಮುಖರಾದ ಶ್ರೀ ಹರಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.ECO3 (1)
ಈ ಸಂದರ್ಭದಲ್ಲಿ ಶ್ರೀ ಧನಕೀರ್ತಿ ಬಲಿಪರವರನ್ನು ಸನ್ಮಾನಿಸಲಾಯಿತು.ECO3 (3)
ಇಕೋ-ಕ್ಲಬ್ ಸಂಚಾಲಕರಾದ ಉಪನ್ಯಾಸಕ ಶ್ರೀ ಜಯಪ್ರಕಾಶ್ ಹಾಗೂ ಶ್ರೀಮತಿ ಸುಜಯ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿ ಭವ್ಯ ಮತ್ತು ಫಾತಿಮತ್ ಜೊಹಾರ ಸಹಕರಿಸಿದರು.ಶ್ರೀಮತಿ ರಂಜಿತಾ ಪ್ರಸ್ಥಾವನೆಗೈದು ಸ್ವಾಗತಿಸಿದರು. ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. ಈ ಸಂಬಂಧ ಆಯೋಜಿಸಿದ್ದ ಪರಿಸರ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ECO3 (4)

By Suddi9

Leave a Reply

Your email address will not be published. Required fields are marked *