ಸ್ವಾತಂತ್ರ್ಯ ದಿನದಂದು ರಾಷ್ಟ್ರೀಯ ತ್ರಿವರ್ಣ ಧ್ವಜಕ್ಕಾಗುವ ಅವಮಾನವನ್ನು ತಡೆಗಟ್ಟುವುದಕ್ಕಾಗಿ ಶಾಲಾ ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವಂತೆ ಮನವಿ ನೀಡುವ ವೇಳೆ ಒತ್ತಾಯಿಸಲಾಯಿತು.ಪ್ರತಿವರ್ಷ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಗಳಂದು ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟಲು ಅಭಿಯಾನವನ್ನು ನಡೆಸುತ್ತಿದೆ. ಆ ದಿನಗಳಂದು ಬೆಳಗ್ಗೆ ನಾವು ಸ್ವಾಭಿಮಾನದಿಂದ “ಝಂಡಾ ಊಂಚಾ ರಹೇ ಹಮಾರಾ” ವೆಂಬ ಹಾಡನ್ನು ಹಾಡುತ್ತೇವೆ. ಅಂದೇ ಸಂಜೆ ಅದೇ ರಾಷ್ಟ್ರಧ್ವಜವು ಹರಿದು ಹೋದ ಸ್ಥಿತಿಯಲ್ಲಿ ಕಸದ ತೊಟ್ಟಿಗಳಲ್ಲಿ ಬಿದ್ದು ಅಥವಾ ಕಾಲ್ತುಳಿತಕ್ಕೆ ಸಿಲುಕಿ ಅವಮಾನಕ್ಕೆ ಈಡಾಗುವುದು ಕಂಡುಬರುತ್ತಿದೆ! ಕೆಲವೆಡೆ ಅದನ್ನು ಆಟೋಟಗಳಲ್ಲಿ ಆಟಿಕೆಯ ವಸ್ತುವಂತೆ ಬಳಸಲಾಗುತ್ತಿದೆ! ಇದು ನಮ್ಮ ರಾಷ್ಟ್ರಧ್ವಜಕ್ಕಾಗುವ ಅಪಚಾರ, ಅವಮಾನವೇ ಆಗಿದೆ. ಇದು ನಮ್ಮ ರಾಷ್ಟ್ರಧ್ವಜದ ಪ್ರತಿಷ್ಠೆಯನ್ನು ಎತ್ತರಕ್ಕೇರಿಸಲು ತಮ್ಮ ಅಮೂಲ್ಯ ಪ್ರಾಣವನ್ನೇ ಬಲಿದಾನವಾಗಿ ಅರ್ಪಿಸಿದ ಹುತಾತ್ಮರ ಅವಹೇಳನ ಮಾಡಿದಂತಾಗುತ್ತದೆ. ನಾವು ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವ ಅಭಿಯಾನವನ್ನು ಕಳೆದ 15 ವರ್ಷಗಳಿಂದ ನಡೆಸುತ್ತಿದ್ದು ಮಕ್ಕಳ ಮನಸ್ಸಿನಲ್ಲಿ ರಾಷ್ಟ್ರಧ್ವಜದ ಬಗ್ಗೆ ಅಭಿಮಾನವನ್ನು ಮೂಡಿಸಲು ಮಾಡುತ್ತಿರುವ ಕೃತಿಯಾಗಿದೆ.??????????
ಮಕ್ಕಳಿಗೆ ರಾಷ್ಟ್ರಭಕ್ತಿಯನ್ನು ಬೋಧಿಸಲು ಶಾಲೆಗಳಲ್ಲಿ ಇತಿಹಾಸವನ್ನು ಕಲಿಸಲಾಗುತ್ತದೆ. ಈ ಉದ್ದೇಶವನ್ನು ಈಡೇರಿಸಲು ಮತ್ತು ಮತ್ತೊಮ್ಮೆ ರಾಷ್ಟ್ರ ನಿರ್ಮಾಣಕ್ಕಾಗಿ ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸಲು ಈ ಅಭಿಯಾನವನ್ನು ನಡೆಸುತ್ತಿದ್ದೇವೆ. ಮಕ್ಕಳಲ್ಲಿ ಜಾಗೃತಿಯನ್ನು ಉಂಟುಮಾಡಲು ಶಾಲಾ ಕಾಲೇಜುಗಳಲ್ಲಿ ಪ್ರವಚನಗಳು, ರಸಪ್ರಶ್ನೆ ಕಾರ್ಯಕ್ರಮಗಳು, ರಾಷ್ಟ್ರಧ್ವಜದ ಮಹತ್ವವನ್ನು ತಿಳಿಸುವ ಕರಪತ್ರಗಳ ವಿತರಣೆ, ಸಾರ್ವಜನಿಕ ರಸ್ತೆಗಳಲ್ಲಿ ಎಸೆದು ಕಾಲ್ತುಳಿತಕ್ಕೆ ಒಳಗಾಗಬಹುದಾದ ಧ್ವಜಗಳನ್ನು ಹೆಕ್ಕುವುದು- ಇವೇ ಮುಂತಾದ ಮಾಧ್ಯಮಗಳ ಮೂಲಕ ಈ ಅಭಿಯಾನವನ್ನು ನಡೆಸುತ್ತಿದ್ದೇವೆ.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇಂತಹ ರಾಷ್ಟ್ರಜಾಗೃತಿಯ ಕಾರ್ಯವನ್ನು ಪ್ರತಿಯೊಬ್ಬರೂ ಒಬ್ಬ ಭಾರತೀಯ ಪ್ರಜೆಯೆಂದು ಭಾವಿಸಿ ಮಾಡಬೇಕಿದೆ, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳಿಗೆ ನಾವು ಮವಿಯನ್ನು ನೀಡುತ್ತೇವೆ, ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರ ಗಮನಕ್ಕೂ ತರುತ್ತೇವೆ, ರಾಷ್ಟ್ರಧ್ವಜ ಗೌರವ ಕಾಪಾಡಲು ಒಟ್ಟಾಗಿ ಕಾರ್ಯ ಮಾಡೋಣ, ರಾಷ್ಟ್ರಧ್ವಜಕ್ಕೆ ಜಾಗೃತಿಗೆ ಸಂಬಂದಿಸಿದ ವೀಡಿಯೋವನ್ನು ಎಲ್ಲರಿಗೂ ಕಳಿಸುವ ಆಯೋಜನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮನವಿ ನೀಡುವ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಾಂತಪ್ಪ ಗೌಡ, ಮಾಧವ ಎಸ್ ರೈ ಕುಂಬ್ರ, ಪ್ರಶಾಂತ, ಚಂದ್ರಶೇಖರ, ಪ್ರಶಾಂತ ಎನ್ಮಾಡಿ, ರಮೇಶ, ಧರ್ಣಪ್ಪ ಗೌಡ, ಕೇಶವ ಗೌಡ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *