ಬಂಟ್ವಾಳ : ಆಟಿ ಎಂದರೆ ಯಾವುದೇ ಶುಭಕಾರ್ಯಗಳು ನಡೆಯದ ಅಶುಭ ತಿಂಗಳು ಎಂಬ ನಂಬಿಕೆ ಹಿಂದಿನ ಜನರಲ್ಲಿತ್ತು. ಆದರೆ ಆ ಮಾತು ಈಗ ಹುಸಿಯಾಗಿದೆ. ಎಲ್ಲೆಡೆಯಲ್ಲಿಯೂ ಆಟಿಡೊಂಜಿ ದಿನ ಎಂಬ ಕಾರ್ಯ ನಡೆಯುತ್ತಿದೆ. ಊರಿನಲ್ಲಿ ಆಟಿಯಲ್ಲಿ ಸಿಗುವ ಆಹಾರ ಪದಾರ್ಥಗಳಲ್ಲಿ ಪೌಷ್ಠಿಕಾಂಶ ಜಾಸ್ತಿ ಇದ್ದು ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ಜೇಸಿಐ ಬಂಟ್ವಾಳದ ಅಧ್ಯಕ್ಷ ಡಾ. ಬಾಲಕೃಷ್ಣ ಕುಮಾರ್ ತಿಳಿಸಿದರು.ಅವರು ಜೆಸಿಐ ಬಂಟ್ವಾಳ ಮತ್ತು ಸಾಯಿರಾಮ್ ಸಮೂಹ ಸಂಸ್ಥೆ ಇದರ ಸಹಭಾಗಿತ್ವದಲ್ಲಿ ಮೊಡಂಕಾಪಿನ ಸಾಯಿರಾಮ್ ಸಭಾಂಗಣದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.BTW_AUG1_6
ಸಾಯಿರಾಮ್ ಸಮೂಹ ಸಂಸ್ಥೆಯ ಮಾಲಕ ಸದಾನಂದ ಮೊಡಂಕಾಪು ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ವಲಯ ನಿರ್ದೇಶಕ ರಾಧಾಕೃಷ್ಣ ಬಂಟ್ವಾಳ, ನಿಕಟಪೂರ್ವಅಧ್ಯಕ್ಷರಾದ ನಾಗೇಶ್ ಬಾಳೆಹಿತ್ಲು, ಸುರೇಶ್ ನಾವೂರು, ಸಂತೋಷ್ ಜೈನ್ , ಬೂಡಾ ಅಧ್ಯಕ್ಷ ಸದಾಶಿವ ಬಂಗೇರ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಂತರ ಕೀರ್ತಿರಾಜ್ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.

By suddi9

Leave a Reply

Your email address will not be published. Required fields are marked *