ಬಂಟ್ವಾಳ: ಕಳೆದರೆಡು ತಿಂಗಳ ಕಾಲ ಜಾರಿಯಲ್ಲಿದ್ದ ಸೆಕ್ಷನ್ ೧೪೪ ನಿಷೇದಾಜ್ಙೆ ಹಾಗೂ ಎರಡು ದಿನಗಳಿದ್ದ ನಿರ್ಬಂಧಕಾಜ್ಙೆಯಿಂದ ಬಂಟ್ವಾಳ ತಾಲೂಕು ಮುಕ್ತಗೊಂಡಿದೆ.
  ಸದ್ಯ ತಾಲೂಕಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದ್ದು,ಮುಂಜಾಗ್ರತಾಕ್ರಮವಾಗಿ  ಬಂದೋಬಸ್ತ್ದು ಹೊರಜಿಲ್ಲೆಗಳಿಂದ  ಬಂದಿದ್ದ ಹೆಚ್ಚುವರಿ ಪೊಲೀಸರ ಪೈಕಿ ಕೂಡ ಒಂದೊಂದು ತಂಡ ಮರಳಿ ತಮ್ಮ ಜಿಲ್ಲೆಯತ್ತ ವಾಪಾಸಾಗುತ್ತಿದ್ದಾರೆ. ನಿಷೇದಾಜ್ಙೆ ಹಾಗೂ ನಿರ್ಬಂಧಕಾಜ್ಙೆ ಮುಕ್ತ ವಾಗುತ್ತಿದ್ದಂತೆ ಪುರಸಭಾವ್ಯಾಪ್ತಿಗೊಳಪಟ್ಟ ಗ್ರಾಮಗಸ್ತು ಸಭೆಯನ್ನು  ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರೇ ನಡೆಸಿ ಸಲಹೆ ಸೂಚನೆ ನೀಡಿದ್ದಾರೆ.ಬಳಿಕ ವಿಟ್ಲದಲ್ಲಿ  ಬಂಟ್ವಾಳ ಉಪವಿಭಾಗದ ಎಎಸ್ಪಿ ಡಾ.ಅರುಣ್ ಅವರ ನೇತ್ರತ್ವದಲ್ಲಿ ಬೀಟ್ ಪೊಲೀಸ್ ಸಭೆ ನಡೆದಿದೆ.                  ಮೇ೨೬ರಿಂದಜಾರಿಯಾಗಿತ್ತು: ಕಳೆದಮೇ.೨೬ ರಂದು ಇಬ್ಬರ ನಡುವಿನ  ವಯಕ್ತಿಕ ಜಗಳ ಕೋಮು ಬಣ್ಣಕ್ಕೆ ತಿರುಗಿತ್ತು.ಅಂದು ರಾತ್ರಿ ಮೆಲ್ಕಾರ್ ನಲ್ಲಿ ಯುವಕನೊಬ್ಬನ ಕೊಲೆಗೆ ಯತ್ನ ನಡೆದ ಘಟನೆ ಮರುಕಳಿಸಿದ ಬೆನ್ನಲ್ಲೆ ತಾಲೂಕಿನಲ್ಲಿ ಸೆಕ್ಷನ್ ೧೪೪ ನಿಷೇದಾಜ್ಙೆಯನ್ನು ಜಾರಿಗೊಳಿಸಲಾಗಿತ್ತು.ನಂತರ ಐದು ಬಾರಿ ನಿಷೇದಾಜ್ಙೆಯನ್ನು ವಿಸ್ತರಿಸಲಾಗಿತ್ತು.ನಿಷೇದಾಜ್ನೆಯ  ನಡುವೆ ಎರಡು ಕೊಲೆಗಳು, ಗಲಭೆಗಳು ನಡೆದಿತ್ತು.ಈಹಿನ್ನಲೆಯಲ್ಲಿ ಬಂದೋಬಸ್ತ್ ಗಾಗಿ ಹೊರಜಿಲ್ಲೆಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನುಕರೆಸಲಾಗಿತ್ತು.ಸುಮಾರು ಒಂದುಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು,ಐಜಿಪಿಯಿಂದ ಹಿಡಿದು ಎಸ್ಪಿವರೆಗಿನ ಪೊಲೀಸ್ ಅಧಿಕಾರಿಗಳು ಹೊರಜಿಲ್ಲೆಯ ಎಸ್.ಐ.,ಇನ್ಸ್ ಪೆಕ್ಟರ್ ಗಳು, ಬಂಟ್ವಾಳದಲ್ಲೇ ಮೊಕ್ಕಂ ಹೂಡಿದ್ದರು.ಸಾಲದೆಂಬಂತೆ ಎರೆಡೆರಡು ಬಾರಿ ಎಡಿಜಿಪಿ ಅಲೋಕ್ ಮೋಹನ್ ಕೂಡ ಕಾನೂನು ಸುವ್ಯವಸ್ಥೆ ಪರಿಶೀಲನೆಗೆ ಬೆಂಗಳೂರಿನಿಂದ ಬರಬೇಕಾಯಿತು.ಸದ್ಯ ತಾಲೂಕು ಸಂಪೂರ್ಣ ಕೂಲ್ ಅಗಿದ್ದು,ಜನಸಾಮಾನ್ಯರು ಯಾವುದೇ ಗೊಡವೆಯಿಲ್ಲದೆ ಎಂದಿನಂತೆ ತಮ್ಮ ವ್ಯವಹಾರದಲ್ಲಿನಿರತರಾಗಿದ್ದು,ಶಾಂತಿ,ಸೌಹಾರ್ಧತೆ,ನೆಮ್ಮದಿಯಿಂದ ಇದ್ದಾರೆ.  ಜು.26 ಕ್ಕೆ ಕೊನೆ :  ಮೇ.26 ರಂದು ಜಾರಿಯಾಗಿದ್ದ ಸೆ.೧೪೪ ನಿಷೇದಾಜ್ಙೆ ಜು.೨೬ ರಂದು ಸಡಿಲಿಸಲಾಗಿತ್ತು,ಬಳಿಕ ೨೮ ರವರೆಗೆ ಎರಡು ದಿನಗಳ ನಿರ್ಬಂಧಕಾಜ್ಙೆಯನ್ನು ಜಾರಿಗೊಳಿಸಲಾಗಿತ್ತು.ಇದೀಗ ಈ ನಿರ್ಬಂಧಕಾಜ್ಙೆಯನ್ನು ಸಡಿಲಿಸಲಾಗಿದ್ದು,ತಾಲೂಕು ಈಗ ಎರಡರಿಂದಲೂ ಮುಕ್ತವಾಗಿದೆ.    ಬಂಧನವಾಗಿಲ್ಲ; ನಿಷೇದಾಜ್ಙೆ ಜಾರಿಯಲ್ಲಿರುವಾಗಲೇ ಮೆಲ್ಕಾರ್ ನಲ್ಲಿ ಪವನ್ ಎಂಬ ಯುವಕನ ಕೊಲೆ ಯತ್ನ ಪ್ರಕರಣ ಬಳಿಕ ಬೆಂಜನಪದವಿನಲ್ಲಿ ರಿಕ್ಷಾ ಚಾಲಕ ಅಶ್ರಫ್ ಹಾಗೂ ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಅವರ ಕೊಲೆಗಳು ನಡೆದಿದೆ.ಈ ಪೈಕಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನವಾಗಿದ್ದರೆ.ಪವನ್ ಕೊಲೆಯತ್ನ ಘಟನೆ ನಡೆದು ಎರಡು ತಿಂಗಳು ,ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ತಿಂಗಳು ಸಮೀಪಿಸುತ್ತಿದ್ದರೂ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆದಿಲ್ಲ.ಈ ಎರಡು ಪ್ರಕರಣಗಳು ಒಂದೇ ಮಾದರಿಯಲ್ಲಿ ನಡೆದಿದ್ದು,ಒಂದೇ ತಂಡ ಈ ಕ್ರತ್ಯ ನಡೆದಿರುವ ಗುಮಾನಿ ಇದೆ. ಈ ಎರಡು ಕ್ರತ್ಯದಲ್ಲಿ ಅರೋಪಿಗಳು ಯಾವುದೇ ಸಣ್ಣ ಸುಳಿವು ಬಿಟ್ಟು ಹೋಗದಿರುವುದರಿಂದ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡವನ್ನು ರಚಿಸಲಾಗಿದ್ದು,ಹಲವರನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದರೂ ಸ್ಪಷ್ಟ ಸುಳಿವು ಇನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.ಒಂದು ತಂಡ ತನಿಖೆಯನ್ನು ಹೊರಜಿಲ್ಲೆಗೂ ವಿಸ್ತರಿಸಿದೆ.ಆದರೆ ಅರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವನ್ನು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *