ಬಂಟ್ವಾಳ: ಜಾಗತೀಕರಣದ ಪ್ರಭಾವದಿಂದಾಗಿ ಸಾಕಷ್ಟು ಖಾಸಗಿ ಕಂಪೆನಿಗಳ ಪೈಪೋಟಿ ಇದ್ದರೂ ಕೂಡ ಬಿಎಸ್‍ಎನ್‍ಎಲ್ ಸಂಸ್ಥೆ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು.1aug1
ದೂರಸಂಪರ್ಕ ಇಲಾಖೆಯ ಬಿ.ಸಿ.ರೋಡಿನ ಗ್ರಾಹಕ ಸೇವಾ ಕೇಂದ್ರದಲ್ಲಿ ಆ 1. ರಿಂದ ಆ.15ರವರೆಗೆ ನಡೆಯಲಿರುವ ಬಿಎಸ್‍ಎನ್‍ಎಲ್ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿನ ಕೆಲವೊಂದು ಅಭಿವೃದ್ದಿ ಕಾಮಗಾರಿಗಳಿಂದಾಗಿ ಬಿಎಸ್‍ಎನ್‍ಎಲ್ ಸಂಸ್ಥೆಗೆ ಸಾಕಷ್ಟು ನಷ್ಟ ಉಂಟಾದರೂ ಕೂಡ ಪುರಸಭೆಗೆ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು. ಎಜಿಎಂ ವಿಠಲ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮುನ್ನೂರು ಗ್ರಾಹಕ ಕೇಂದ್ರಗಳಲ್ಲಿ ಬಿಎಎನ್‍ಎಲ್ ಉತ್ಸವ ಏಕಕಾಲದಲ್ಲಿ ಉದ್ಘಾಟನೆಗೊಳ್ಳಲಿದ್ದು ಗ್ರಾಹಕರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಸಂಸ್ಥೆ ಈ ಸಂದರ್ಭ ನೀಡಲಿದೆ. ಈ ಎಲ್ಲಾ ಸೌಲಭ್ಯಗಳ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ತಿಳಿಸಿದರು. ಸಂಸ್ಥೆಯ ಜಯಮ್ಮ, ನಾಗರಾಜ್, ಎಸ್.ಎಂ.ಉಪಾಧ್ಯ ವೇದಿಕೆಯಲ್ಲಿದ್ದರು. ಮಾರ್ಕೆಂಟಿಗ್ ವ್ಯವಸ್ಥಾಪಕ ಸದಾನಂದ ಆಳ್ವ ಕಂಪ ಸ್ವಾಗತಿಸಿ, ನಿರೂಪಿಸಿದರು, ಕಚೇರಿ ವ್ಯವಸ್ಥಾಪಕ ಜಾನ್ ಸಿರಿಲ್ ಡಿಸೋಜಾ ವಂದಿಸಿದರು.

By suddi9

Leave a Reply

Your email address will not be published. Required fields are marked *