ಉಳ್ಳಾಲ : ಮುನ್ನೂರು ಗ್ರಾಮದ ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ “ಆಟಿಡೊಂಜಿದಿನ” ಕಾರ್ಯಕ್ರಮ ಶ್ರೀಕ್ಷೇತ್ರ ಸೋಮನಾಥ ಉಳಿಯದ ವಠಾರದಲ್ಲಿನಡೆಯಿತು. ಮಂಗಳೂರು ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಅವರು ಹಲಸಿನ ಹಣ್ಣು ತುಂಡರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸೋಮನಾಥಉಳಿಯ ಶ್ರೀಅರಸು, ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ಎಸ್.ರಾಮರಾಜ ನಾಯ್ಕ್‍ರವರು ದಿಕ್ಸೂಚಿ ಭಾಷಣಗೈದು ಆಟಿ ತಿಂಗಳು ಅಪಬ್ರಂಶು ತಿಂಗಳಲ್ಲ, ಬಡತನದ ಮಾಸವು ಅಲ್ಲ, ಪ್ರಕ್ರತಿ, ಸಮ್ರದ್ದತೆಯ ದಿನಗಳಾಗಿದ್ದವು. ನಮ್ಮದು ಕ್ರಷಿ ಪ್ರದಾನದೇಶವಾಗಿದ್ದು, ಹಿಂದಿನ ಕಾಲದಲ್ಲಿ ಕ್ರಷಿಕರಿಗೆ ಬಡತನವಿದ್ದರೂ, ನೆಮ್ಮದಿಯ ಜೀವನ ನಡೆಸುತ್ತಿದ್ದರು ಎಂದರು. ನಿಸರ್ಗ ಸಮತೋಲನ ಕಾಪಾಡುವ ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಾಡುಗಳು ಜೀವನದ ಅವಿ ಅಂಗವಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಮಂಡಲದ ಸದಸ್ಯೆಯರು ದೇವಾಲಯದ ವಠಾರದಲ್ಲಿ ಒಂದೊಂದು ಸಸಿಗಳನ್ನು ನೆಟ್ಟು ಅದನ್ನು ಪೆಷಿಸಬೇಕು. ಅಗ ಪರಿಸರವು ಹಸಿರು ಹೋದಿಕೆಯಾಗುವುದರ ಜೊತೆಗೆ ನಮ್ಮ ಆರೋಗ್ಯವು ವ್ರದ್ದಿಸುವುದು ಎಂದರು.
ಅತಿಥಿ ಸ್ಥಾನದಿಂದ ಮಾತನಾಡಿದ ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯ್ಕ್‍ರವರು ಅಷಾಢ ಮಾಸ ಅಶುಭ ಎಂದು ಯಾವ ಶಾಸ್ತ್ರದಲ್ಲೂ ಇಲ್ಲ. ಆ ಕಾಲದಲ್ಲೂ ಬಡತನದ ಜೊತೆಗೆ ಶ್ರೀಮಂತಿಕೆಯು ಇತ್ತು.ನಾವು ಹಿರಿಯರು ಹಾಕಿ ಕೊಟ್ಟ ಸಂಪ್ರದಾಯದಂತೆ ನಡೆದುಕೊಂಡಾಗ ಅಟಿ ತಿಂಗಳ ಕಾರ್ಯಕ್ರಮಕ್ಕೆ ವಿಶೇಷ ಆರ್ಥ ಬರುತ್ತದೆ. ಈ ದೆಸೆಯಲ್ಲಿ ಶ್ರೀ ಸೋಮೇಶ್ವರಿ ಮಹಿಳಾ ಮಂಡಳಿಯ ಪ್ರಯತ್ನ ಅಭಿನಂದನೀಯ ಎಂದರು.ಜಿ.ಪಂ.ಸದಸ್ಯೆ ಧನಲಕ್ಷ್ಮಿ ಗಟ್ಟಿ ಅವರು ಆಟಿ ತಿಂಗಳು ಮಹತ್ವವನ್ನು ತಿಳಿಸಿದರಲ್ಲದೆ ಶ್ರೀ ಸೋಮೇಶ್ವರಿ ಮಹಿಳಾಮಂಡಳಿಯ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು. ಶ್ರೀಸೋಮೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ಹೇಮಾ ಕೆ.ಮಂಕಿಸ್ಟ್ಯಾಂಡ್ ಸಭಾಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮಹಿಳಾ ಮಂಡಳಿ ಒಕ್ಕೂಟದ ಸದಸ್ಯೆ ಸುಹಾಸಿನಿ.ಜೆ,ಶ್ರೀ ಸೋಮೇಶ್ವರಿ ಸೌ.ಸ.ನಿಯಮಿತದ ಅಧ್ಯಕ್ಷ ಉಮಾನಾಥ ನಾಯ್ಕ್ ಉಳ್ಳಾಲ ರವರು ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಜಾಲ್ ಗ್ರಾಮದ ಬಡ ಕುಟುಂಬ ಬಬಿತಾ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಗಾಳದ ಕೊಂಕಣಿ ಅಭ್ಯುದಯ ಸಂಘದ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯ್ಕ್,ಕಾರ್ಯದರ್ಶಿಗಳಾದ ಮುರಳೀಧರ್ ನಾಯ್ಕ್,ಆಶಾ ನಾಯ್ಕ್ ಗೋರಿಗುಡ್ಡೆ, ಉಪಾಧ್ಯಕ್ಷ ರಂಜನ್‍ಎಂ., ಕೋಶಾಧಿಕಾರಿ ಚಂದ್ರಶೇಖರ ಬಪ್ಪಾಲ್,ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು, ಪ್ರ.ಕಾರ್ಯದರ್ಶಿಯು.ದಯಾನಂದ ನಾಯ್ಕ್,ಕೋಶಾಧಿಕಾರಿ ಧರ್ಮಪಾಲ್ ಪಂಪ್ ವೆಲ್,ಕಾರ್ಯಾಧ್ಯಕ್ಷ ಶಿವಾನಂದ ನಾಯ್ಕ್ ಉಳಿಯ,ಬ್ಯಾಂಕ್ ನಿವ್ರತ್ತ ಅಧಿಕಾರಿ ಸುಧೀರ್ ನಾಯ್ಕ್ ಬಿಜೈ, ಸತೀಶ್ ನಾಯ್ಕ್ ಉಳಿಯ,ಗಣೇಶ್ ನಾಯ್ಕ್ ಉಳಿಯ, ಹರೀಶ್ ಸುರತ್ಕಲ್,ಪ್ರವೀಣ್ ಬಂಟ್ವಾಳ, ಹರೀಶ್ ಸುರತ್ಕಲ್,ಯೋಗೀಶ್ ನಾಯ್ಕ್ ಪಂಪ್ ವೆಲ್,ಇಂಜಿನಿಯರ್ ಶ್ರೀರಿಷ್ ಕಾಪಿಕಾಡ್, ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಯಶೋಧ ಸುಭಾಸ್ ನಗರ,ಪದಾಧಿಕಾರಿಗಳಾದ ಶಾರದ ಅಸೈಗೋಳಿ,ಉಷಾ ಕಲ್ಲಾಪು, ಇಂದಿರಾ ಉಳಿಯ, ವಿಜಯ ಉಳಿಯ,ಕಸ್ತೂರಿ ಉಳಿಯ,ಅನಿತಾ ಉಳಿಯ, ವೇದಾವತಿ,ಅನುರಾಧಬಂಟ್ವಾಳ,ಶ್ರೀ ಸೋಮೇಶ್ವರಿ ಸೌ.ಸ.ನಿ.ದಕಾರ್ಯದರ್ಶಿ ಲಾವಣ್ಯ ಗೋರಿಗುಡ್ಡೆ ಮೊದಲಾದವರಿದ್ದರು. ಮಹಿಳಾ ಮಂಡಲದ ಸದಸ್ಯೆ ಮೋಹಿನಿ ಶೆಟ್ಟಿಬೊಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ರೇಣುಕಾ ಕಲ್ಲಾಪುವರದಿವಾಚಿಸಿ ,ಕೊನೆಯಲ್ಲಿವಂದಿಸಿದರು.ವೆಂಕಟೇಶ್ ಬಂಟ್ವಾಳ,ರೋಹಿತ್ ನಿರೂಪಿಸಿದರು. ಇದೇ ವೇಳೆ ಮಹಿಳಾ ಮಂಡಳಿಯ ಸದಸ್ಯೆಯರು ಸಿದ್ದಪಡಿಸಿದ ಇಪ್ಪತ್ತಕ್ಕೂ ಹೆಚ್ಚು ಬಗೆಯ ವಿವಿಧ ಖಾದ್ಯಗಳ ರುಚಿಯನ್ನು ನೆರೆದ ಜನಸಮೂಹ ಸವಿದರು. ಹಾಗೆಯೇ ವಿವಿಧ ಬಗೆ ಸೊಪ್ಪು, ವಸ್ತುಗಳಪ್ರದರ್ಶನವನ್ನುಏರ್ಪಡಿಸಲಾಗಿತ್ತು.ಕ್ರಷ್ಣ ಕೋಡಿ ಫ್ರಂಡ್ಸ್‍ನ ಸದಸ್ಯರು ಈ ಕಾರ್ಯಕ್ರಮಕ್ಕೆ ಸಹಕರಿಸಿದರು.

