ಪುದು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿ ಇವರ 10 ಲಕ್ಷ ಅನುದಾನದಿಂದ ಕೊಟ್ಟಿಂಜ -ಕೊಡ್ಮಾಣ್ ಸಂಪರ್ಕ ರಸ್ತೆಗೆ ಕಾಂಕ್ರೀಟೀಕರಣಗೊಂಡು ಉದ್ಘಾಟನೆ ನೆರವೇರಿತು. ಈ ಸಂಧರ್ಭದಲ್ಲಿ ಮಂಗಳೂರು ವಿಧಾನಸಭಾ ಬಿಜೆಪಿ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಬೋಳಿಯಾರ್, ಪ್ರಧಾನಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ ,ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ,ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ,ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಷ್ ನಾಯ್ಗ ,ಉಪಾಧ್ಯಕ್ಷೆ ಜಯಶ್ರೀ ಕರ್ಕೇರ, ಪುದು ಗ್ರಾಮ ಪಂಚಾಯತ್ ಸದಸ್ಯರುಗಳಾದ ಪದ್ಮನಾಭ ಶೆಟ್ಟಿ ಕೊಟ್ಟಿಂಜ, ದಯನಂದ ಕಾಪಿಕಾಡು,ದ.ಕ.ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ಹಾಜಿ ಕೆ.ಎ.ಮಹಮ್ಮದ್ ಮುನೀರ್,ಎ,ಪಿ.ಎಂ.ಸಿ ಸದಸ್ಯ ವಿಠಲ್ ಸಾಲ್ಯಾನ್,ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶೈಲಜಾ.ಪಿ.ಶೆಟ್ಟಿ, ಪುದು ಶಕ್ತಿಕೇಂದ್ರ ಅಧ್ಯಕ್ಷ ಪವನ್ ಅಬ್ಬೆಟ್ಟು, ಪ್ರಧಾನ ಕಾರ್ಯದರ್ಶಿ ದಿನೇಶ್ ಆರ್ ಶೆಟ್ಟಿ,ಗುತ್ತಿಗೆದಾರರಾದ ದಿನೇಶ್ ರೈ ಕುಪ್ಪಿಲ ಗುತ್ತು,ಸಂತೋಷ್ ಕೊಡ್ಮಾಣ್ ,ಸಂತೋಷ್ ಶೆಟ್ಟಿ ಕೊಟ್ಟಿಂಜ ,ಸದಾಶಿವ ಶೆಟ್ಟಿ ಕೊಟ್ಟಿಂಜ, ಹನೀಫ್ ಅಮೆಮಾರ್ ಮತ್ತಿತರರು ಉಪಸ್ಥಿತರಿದ್ದರು.
