ಬಂಟ್ವಾಳ: ಶಿವರಾಮ ಕಾರಂತ ಅವರು ಬದುಕು-ಬರವಣಿಗೆ ಎರಡರಲ್ಲೂ ಪರಿಸರಕ್ಕೆ ಪ್ರತಿಸ್ಪಂದಿಸುತ್ತಿದ್ದವರು ಎಂದು ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂಜಯ್ ಬಿ.ಎಸ್., ಅಭಿಪ್ರಾಯಪಟ್ಟರು.ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪ.ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನೆಯ ವತಿಯಿಂದ ಆಯೋಜಿಸಿದ್ದ ಡಾ.ಕೆ.ಶಿವರಾಮ ಕಾರಂತರ ಬೆಟ್ಟದ ಜೀವ: ಸಿನೆಮಾ ಪ್ರದರ್ಶನ ಮತ್ತು ಮುಖಾಮುಖಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.???????????????????????????????
ಜೀವನಾನುಭವದಿಂದ ರಚಿತವಾದ ಸಾಹಿತ್ಯ ಕೃತಿಗಳು ಶಾಶ್ವತವಾಗಿ ನೆಲೆನಿಲ್ಲುತ್ತವೆ. ನಾವು ಬದುಕುವ ಪರಿಸರ, ಸಂಸ್ಕøತಿ, ಸಮಾಜದ ಬಗ್ಗೆ ಜೀವ ವೈವಿಧ್ಯಗಳ ಕುರಿತು ಕಾಳಜಿ ಹುಟ್ಟಿಸುವ ಸಾಹಿತ್ಯವು ಮೂಡಿಬರಬೇಕಾಗಿದೆ. ಡಾ.ಕೆ.ಶಿವರಾಮ ಕಾರಂತರು ತಮ್ಮ ಬದುಕು-ಬರವಣಿಗೆ ಎರಡರಲ್ಲೂ ತಮ್ಮ ಸುತ್ತಣ ಪರಿಸರಕ್ಕೆ ಪ್ರತಿಸ್ಪಂದಿಸುತ್ತ ಬಂದವರು. ಕಾರಂತರು ನಿರಂತರ ಅನ್ವೇಷಣೆಯ ಮೂಲಕ ಬದುಕಿನ ವಿವಿಧ ಆಯಾಮಗಳ ನಿಜಾರ್ಥವನ್ನು ಶೋಧಿಸಿದವರು. ಹಾಗಾಗಿಯೇ ಕಾರಂತರ ಸಾಹಿತ್ಯ ಕೃತಿಗಳು ಎಲ್ಲಾ ಕಾಲಕ್ಕೂ ಸಲ್ಲುವ ಶಾಶ್ವತ ಮೌಲ್ಯವನ್ನು ಪ್ರತಿನಿಧಿಸುತ್ತವೆ. ಕಾರಂತರ ಅನ್ವೇಷಣಾ ಪ್ರವೃತ್ತಿಯ ಮುಖ್ಯ ಕಾದಂಬರಿ ‘ಬೆಟ್ಟದ ಜೀವ’. ನಿಸರ್ಗ ಜೊತೆಗಿನ ತೀವ್ರ ಒಡನಾಟ ಹಾಗೂ ಸಂಘರ್ಷದಲ್ಲೇ ಬೆಟ್ಟದ ಜೀವ ಕಾದಂಬರಿ ಅರಳಿದೆ. ಸವಾಲಾಗಿರುವ ನಿಸರ್ಗವನ್ನು ಪಳಗಿಸಿ ಕೃಷಿಮಾಡುವ ಧೈರ್ಯ ಕಾದಂಬರಿಯ ನಾಯಕ ಮಾಡುತ್ತಾನಾದರೂ ಕಡೆಗೆ ಪ್ರಕೃತಿ ಎದುರಲ್ಲಿ ಸೋಲು ಅನುಭವಿಸುತ್ತಾನೆ. ಆಧುನಿಕತೆಯ ಮಾಯೆ ಗ್ರಾಮ್ಯ ಬದುಕಿನ ಸಮೃದ್ಧಿಯನ್ನು ಒಳಗೊಳ್ಳುವ ಸಂಚನ್ನು ಬೆಟ್ಟದ ಜೀವ ಕಾದಂಬರಿ ಅನಾವರಣಗೊಳಿಸುತ್ತದೆ. ಇಂದು ನಾವು ಕಾಣದ ಅಪೂರ್ವ ಹಳ್ಳಿಯ ಜಗತ್ತು ಕಾದಂಬರಿಯಲ್ಲಿ ಕಾಣಿಸುತ್ತದೆ. ಗ್ರಾಮ್ಯ ಕೃಷಿ ಬದುಕು, ಮುಗ್ಧ ಜನರು, ಅನ್ಯೋನ್ಯ ಸಂಬಂಧಗಳು, ಸಮೃದ್ಧ ಪರಿಸರ ಇವು ಕಾದಂಬರಿಯ ಹೆಚ್ಚುಗಾರಿಕೆಯಾಗಿದೆ. ಆಧುನಿಕ ಸ್ಪರ್ಶಕ್ಕೆ ಒಳಗಾದ ಯುವ ಪೀಳಿಗೆಯು ಹಳ್ಳಿಯಿಂದ ದೂರಾಗುವ ಜೊತೆಗೆ ಸಂಬಂಧಗಳ ವಿಘಟನೆಯೂ ನಡೆಯುತ್ತದೆ ಎಂಬುವುದನ್ನು ಮನೋಜ್ಞವಾಗಿ ತಿಳಿಸುತ್ತದೆ. ವಿದ್ಯಾರ್ಥಿಗಳು ಸಮೃದ್ಧ ಬದುಕನ್ನು ಕಟ್ಟಿಕೊಳ್ಳುವ ದಿಶೆಯಲ್ಲಿ ಇಂತಹ ಸಾಹಿತ್ಯ ಕೃತಿಗಳನ್ನು ಓದುವ ಅಗತ್ಯತೆ ಇದೆ ಎಂದು ಅವರು ಹೇಳಿದರು.
ಪಿ.ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಸಿನೆಮಾವು ಕಾದಂಬರಿಯ ಆಶಯವನ್ನು ಸಶಕ್ತವಾಗಿ ನಿರ್ವಹಿಸಿದೆ. ಹಣದ ಬೆನ್ನುಹತ್ತಿದ ಮನುಷ್ಯನಿಗೆ ಸಂಬಂಧಗಳೆಲ್ಲಾ ಅರ್ಥರಹಿತವಾಗುತ್ತಿರುವ ಸಂದರ್ಭದಲ್ಲಿ ಅನನ್ಯ ಮನುಷ್ಯ ಸಂಬಂಧದ ಅಗತ್ಯತೆಯನ್ನು ಸಿನಿಮಾವು ಎತ್ತಿಹಿಡಿಯುತ್ತದೆ. ಪುಸ್ತಕದ ಓದಿನಿಂದ ದೂರವಾಗುತ್ತಿರುವ ವಿದ್ಯಾರ್ಥಿಗಳಿಗೆ ಸಂಸ್ಕøತಿ, ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಇಂತಹ ಸಿನೆಮಾಗಳ ಪ್ರದರ್ಶನ ಅಗತ್ಯವಾಗಿ ನಡೆಯಬೇಕು ಎಂದರು.ಪ್ರಾಂಶುಪಾಲೆ ಶಶಿಕಲಾ ಕೆ., ಅಧ್ಯಕ್ಷತೆ ವಹಿಸಿದ್ದರು. ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಶೋಚನೀಯ ಸಂಗತಿ. ಬದುಕು ಅರಳಿಸುವ ಕೃತಿಗಳನ್ನು ಓದುವುದು ವರ್ತಮಾನದ ಅಗತ್ಯವಾಗಿದೆ ಎಂದರು.
ಎನ್ನೆಸೆಸ್ ಯೋಜನಾಧಿಕಾರಿ ಚೇತನ್ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಯೋಜನಾಧಿಕಾರಿಗಳಾದ ಪ್ರದೀಪ್ ಪೂಜಾರಿ, ಶೀವಪ್ರಸಾದ್ ನೀರಚಿಲುಮೆ, ವಿಜೇತಾ, ಕವಿತಾ, ದಿವ್ಯಲಕ್ಷ್ಮಿ ಉಪಸ್ಥಿತರಿದ್ದರು.ಎನ್ನೆಸೆಸ್ ಘಟಕ ನಾಯಕ ಭರತ್ ಸ್ವಾಗತಿಸಿ, ಘಟಕ ನಾಯಕಿ ಅನುಜ್ಞಾ ವಂದಿಸಿದರು. ಸ್ವಯಂಸೇವಕಿ ಗೌತಮಿ ಕಾರ್ಯಕ್ರಮ ನಿರೂಪಿಸಿದರು. ಪಿ.ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಸಿನೆಮಾ ಪ್ರದರ್ಶನ ಮತ್ತು ಚರ್ಚೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *