ಮುಂಬಯಿ: ಮೂಡಬಿದ್ರೆಯ ಶಿಕ್ಷಣ ಸಂಸ್ಥೆಯ ಅವಾರಣದಲ್ಲೇ ಇತ್ತೀಚೆಗೆ ಅನುಮಾನಸ್ಪದವಾಗಿ ಸಾವನ್ನಪ್ಪಿದ ಮೂಡಬಿದ್ರೆಯ ಆಳ್ವಾಸ್ ಹೈಸ್ಕೂಲು ವಿದ್ಯಾಥಿರ್ನಿ ಬ್ಯಾಡ್ಮಿಂಟನ್ ತಾರೆ ಕಾವ್ಯಾ ಪೂಜಾರಿ ಅವರ ಕಟೀಲು ಅಲ್ಲಿನ ನಿವಾಸಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಡಾ| ರಾಜಶೇಖರ ಆರ್.ಕೋಟ್ಯಾನ್ ನಿಯೋಗವು ಭೇಟಿಗೈದು ಮೃತಳ ಮಾತಾಪಿತರಿಗೆ ಸಾಂತ್ವನ ಹೇಳಿದರು.Raashrtiya Billawa Visit KAVYA HOME-1

ಮಗಳ ನಿಗೂಢ ರೀತಿಯ ಸಾವಿನ ಬಗ್ಗೆ ಮಾಹಿತಿ ಪಡಕೊಂಡ ರಾಜಶೇಖರ ಕೋಟ್ಯಾನ್ ನಿಯೋಗವು ಅಪ್ರತಿಮ ಪ್ರತಿಭಾನ್ವಿತೆ ಮಗಳ ಸಾವಿಗೆ ಶೀಘ್ರವೇ ನ್ಯಾಯ ಲಭಿಸುವಂತೆ ಪ್ರಾಥಿರ್ಸುವುದಾಗಿ ತಿಳಿಸಿದರು. ನಿಯೋಗದಲ್ಲಿ ಬಿಲ್ಲವ ಪರಿಷತ್ತ್‍ನ ಶೇಖರ್ ಕರ್ಕೇರ, ಮಹಾಮಂಡಲದ ಕೋಶಾಧಿಕಾರಿ ಯೋಗೇಶ್ ಕೋಟ್ಯಾನ್, ಚಂದ್ರಹಾಸ ಸುವರ್ಣ ಮೂಲ್ಕಿ, ಬಿಲ್ಲವ ಮುಂದಾಳುಗಳಾದ ಧನಂಜಯ ಮಟ್ಟು, ದಿನೇಶ್ ಪೂಜಾರಿ, ಪ್ರಮೋದ್ ಸುವರ್ಣ ಕಿನ್ನಿಗೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *