ಕಟೀಲು: ನನ್ನ ಮಗಳು ಕಾವ್ಯ ಆತ್ಮಹತ್ಯೆ ಮಾಡಿಕೊಳ್ಳುವಂತಹಾ ವಿದ್ಯಾರ್ಥಿನಿಯಲ್ಲ ಬದಲಾಗಿ ದೈರ್ಯ ಮನಸ್ಥಿತಿ ಹೊಂದಿರುವ ಹೆಣ್ಣುಮಗಳು ಆಕೆಯ ಸಾವಿನ ಸುತ್ತ ಹಲವಾರು ಅನುಮಾನಗಳಿವೆ ದಯವಿಟ್ಟು ಈ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಯಾಗುವಂತೆ ಮಾಡಿ ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ,ಇಂದು ತಮ್ಮ ಮನೆಗೆ ಭೇಟಿ ನೀಡಿದ ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಭಿವೃದ್ದಿ ಸಮಿತಿಯ ಪದಾದಿಕಾರಿಗಳು ಹಾಗೂ ಬಿಲ್ಲವ ಏಕೀಕರಣ ಸಮಿತಿಯ ಪದಾದಿಕಾರಿಗಳ ಎಂದು ಮುಂದೆ ಅವಲತ್ತುಕೊಳ್ಳುವ ದೃಶ್ಯ ಮನಕಲಕುವಂತಿತ್ತು. 
ಬ್ಯಾಡ್ಮಿಂಟನ್ ಆಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದ ಪ್ರತಿಭೆ ಅರಳುವ ಮುಂಚೆಯೆ ಕಮರಿ ಹೋಗಿದ್ದು ಮನೆಯಲ್ಲಿರುವ ಆಕೆಯ ಸಾಧನೆಯ ನೆನಪಿನ ಸ್ಮರಣಿಕೆಯನ್ನು ನೋಡುವಾಗ ಮಗಳ ನೆನಪು ಬಹಳಷ್ಟ ಕಾಡುತ್ತದೆ ಆದರೆ ಆಕೆ ಇಂದು ನಮ್ಮೊಂದಿಗಿಲ್ಲ ಆದರೆ ಆಕೆಯ ಪ್ರತಿಭೆಗೆ ಮತ್ತು ಆಕೆಯ ಜೀವಕ್ಕಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡಿ ಮತ್ತು ನನ್ನ ಮಗಳಿಗಾದ ಗತಿ ಇನ್ನು ಮರುಕಳಿಸದಂತೆ ಎಚ್ಚರ ವಹಿಸಿ ಎಂದು ಅವಲತ್ತುಕೊಂಡರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಭಿವೃದ್ಧಿ ಸಮಿತಿ, ಹಾಗೂ ಬಿಲ್ಲವ ಏಕೀಕರಣ ಸಮಿತಿಯ ಮುಖ್ಯಸ್ಥರಾದ ರವಿ ಪೂಜಾರಿ ಚಿಲಿಂಬಿ, ಮೋಹನ್‍ದಾಸ್ , ರಾಜಶೇಖರ್, ದೀಪಕ್ ಕೋಟ್ಯಾನ್, ಲಕ್ಷ್ಮಣ್ ಕೋಟ್ಯಾನ್,ವಾಮನ್ ಪೂಜಾರಿ ಸೂರ್ಲ ಮತ್ತಿತರರು ಮನೆಗೆ ಭೇಟಿ ನೀಡಿ ಸಾಂತ್ವಾನಗೈದು ಸೂಕ್ತ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುವ ಭರವಸೆ ನೀಡಿದರು.
