ಮಂಗಳೂರು: ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಅಸಹಜ ಸಾವುಗಳು ಅನುಮಾನವನ್ನು ಹುಟ್ಟುಹಾಕುತ್ತಿವೆ ಎಂದು ಅಭಾವಿಪ ಮಂಗಳುರು ವಲಯ ಸರ್ವಕಾಲೇಜು ವಿದ್ಯಾರ್ಥೀ ಸಂಘದ ಮೊಹಿತ್ ಅಭಿಪ್ರಾಯ ಪಟ್ಟರು.

ಆಳ್ವಾಸ್ ವಿದ್ಯಾಸಂಸ್ಥೆಯ ಹಾಸ್ಟೆಲ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕು. ಕಾವ್ಯಾಳ ಸಾವಿನ ತನಿಖೆಯನ್ನು ತೀವ್ರಗೊಳಿಸಿ ಈ ಕೂಡಲೇ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಮಂಗಳೂರಿನ ಜಿಲ್ಲಾಧೀಕಾರಿ ಕಛೇರಿ ಬಳೀ ಬೃಹತ್ ಪ್ರತಿಭಟನಾ ರ್ಯಾಲಿಹಮ್ಮಿಕೊಂಡಿತ್ತು ಈ ಸಂದರ್ಬದಲ್ಲಿ ಮಾತನಾಡಿದ ಸುಧಾರಾಂಈ ಇವರು ” ಇಡೀ ಪ್ರಕರಣದ ಸುತ್ತ ಅನುಮಾನದ ಎಳೆಗಳಿದ್ದು ತೀವ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಮಂಗಳೂರು ನಗಗರದಾದ್ಯಂತ ಶಾಲಾ ಕಾಲೆಜುಗಳ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ನೇತೃತ್ವವನ್ನು ಶೀತಲ್ ಜೈನ್ , ಚೇತನ್ ಪಡೀಲ್ ವಹಿಸಿದ್ದರು.
