ಕೋಲಾರ: ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ, ಶಾಸಕ ವರ್ತೂರ್ ಪ್ರಕಾಶ್ ಅವರ ಪತ್ನಿ ಶ್ಯಾಮಲಾ(40) ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕಳೆದ 2 ದಿನಗಳಿಂದ ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿದ್ದು , ಬಹು ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.ಪತಿ ಪ್ರಕಾಶ್ ಸೇರಿದಂತೆ ಪುತ್ರರಾದ ಪ್ರಕಾಶ್, ತೇಜಸ್ ಮತ್ತು ರಕ್ಷಿತ್‌ರನ್ನು ಅಗಲಿದ್ದಾರೆ.ಇಂದು ಸಂಜೆ ವರ್ತೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ನೂರಾರು ಮಂದಿ ಪ್ರಕಾಶ್ ಅಭಿಮಾನಿಗಳು ಮನೆಗೆ ಆಗಮಿಸಿದ್ದಾರೆ.
