ಬೆಂಗಳೂರು: ಮದುವೆಯಾದ ಮೇಲೆ ಕನ್ನಡದ ನಟಿಯರು ಮೊದಲಿನ ಹಾಗೇ ನಾಯಕಿಯಾಗಿ ಮಿಂಚಿದ ಉದಾಹರಣೆ ಕಡಿಮೆ. ಆದರೆ ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದ ರಾಧಿಕಾ ಪಂಡಿತ್ ಇದೀಗ ಅಭಿಮಾನಿಗಳಿಗೆ ಶುಭ ಸುದ್ದಿ ಕೊಡುತ್ತಿದ್ದಾರೆ.ಶುಭ ಸುದ್ದಿ ಎಂದಾಕ್ಷಣ ಏನೇನೋ ಯೋಚನೆಗಳು ಬೇಡ. ರಾಧಿಕಾ ಮತ್ತೆ ಬಣ್ಣದ ಲೋಕಕ್ಕೆ ಮರಳಲು ನಿರ್ಧರಿಸಿದ್ದಾರೆ. ಅದಕ್ಕಿಂತ ದೊಡ್ಡ ಖುಷಿ ಅಭಿಮಾನಿಗಳಿಗೆ ಇನ್ನೊಂದು ಇದೆಯಾ?alala

ರಾಧಿಕಾರಂತಹ ಪ್ರತಿಭಾವಂತ ನಟಿ ಮತ್ತೆ ನಟನೆಗೆ ಮರಳಲಿದ್ದಾರೆ. ಮದುವೆಗೆ ಮೊದಲು ನಟಿಸಿದ್ದ ಸಂತು ಸ್ಟ್ರೇಟ್ ಫಾರ್ವರ್ಡ್ ಚಿತ್ರ ಅವರ ಕೊನೆಯ ಚಿತ್ರವಾಗಿತ್ತು. ನಂತರ ಫ್ಯಾಮಿಲಿ ಲೈಫ್ ನಲ್ಲಿ ಬ್ಯುಸಿಯಾಗಿದ್ದ ರಾಧಿಕಾ ಇದೀಗ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ರಂಗಿತರಂಗ ಖ್ಯಾತಿಯ ನಿರೂಪ್ ಬಂಡಾರಿ ರಾಧಿಕಾಗೆ ನಾಯಕರಾಗಲಿದ್ದಾರೆ. ಹೆಚ್ಚಿನ ವಿವರಗಳು ಸದ್ಯದಲ್ಲೇ ಹೊರ ಬೀಳಲಿದೆ.
ಮದುವೆಯಾದ ಮೇಲೆ ನಟಿಯರು ಮೂಲೆ ಸೇರುತ್ತಾರೆಂಬ ಎಲ್ಲಾ ಕಟ್ಟಪಾಡುಗಳನ್ನು ಮುರಿಯಲು ಬಯಸುತ್ತೆನೆ ಎಂದು ರಾಧಿಕಾ ಆಂಗ್ಲ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನೊಂದೆಡೆ ಪತಿ ರಾಕಿಂಗ್ ಸ್ಟಾರ್ ಯಶ್ ಕೂಡಾ ಇದನ್ನು ರಾಧಿಕಾ ಕಮ್ ಬ್ಯಾಕ್ ಎಂದು ಬರೆಯಬೇಡಿ. ಆಕೆ ಮದುವೆ ನಂತರ ಆರು ತಿಂಗಳು ಬ್ರೇಕ್ ತೆಗೆದುಕೊಂಡು ಮರಳುತ್ತಿದ್ದಾಳಷ್ಟೆ ಎಂದಿದ್ದಾರೆ.

By suddi9

Leave a Reply

Your email address will not be published. Required fields are marked *