ಮಂಗಳೂರು: ಯು2 ಸಿನಿಮಾ ಟಾಕೀಸ್ ಲಾಂಛನದಲ್ಲಿ ತಯಾರಾದ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ನಿರ್ಮಿಸಿರುವ ಎಂ.ಎನ್. ಜಯಂತ್ ಚಿತ್ರಕತೆ ನಿರ್ದೇಶನದ ಶೋಭರಾಜ್ ಪಾವೂರು ಕತೆ, ಸಂಭಾಷಣೆ ಬರೆದಿರುವ `ಏಸ’ ತುಳು ಚಲನ ಚಿತ್ರವು ಜು.15ಕ್ಕೆ ಯಶಸ್ವಿ 50 ದಿನಗಳ ಪ್ರದರ್ಶನವನ್ನು ಪೂರೈಸಿದೆ. ಸಿನಿಮಾ ಮುಂಬೈಯಲ್ಲೂ ಯಶಸ್ವಿ ಪ್ರದರ್ಶನ ಕಂಡಿದೆ.esa
`ಏಸ’ ಹೆಸರೇ ಹೇಳುವಂತೆ ಇಲ್ಲಿ ಬದುಕಿಗಾಗಿ ನಾನಾ ವೇಷ ತೊಡುವ ಮನುಷ್ಯರಿದ್ದಾರೆ. ಕೊನೆಯ ಕ್ಷಣದಲ್ಲಿ ಅವರೆಲ್ಲರ ಬಣ್ಣ ಕಳಚಿದಾಗ ಏನಾಗುತ್ತೆ ಅನ್ನೋದೇ ಚಿತ್ರದ ಕಥಾನಕ ಸಿನಿಮಾದಲ್ಲಿ `ಸ್ವರ್ಣಗುತ್ತು’ ವಿನಲ್ಲಿ ನಡೆದು ಹೋದ ಘಟನಾವಳಿಯೊಂದರ ಹಿನ್ನೆಲೆ ಮತ್ತು ಮುಂದೆ ನಡೆಯುವ ಘಟನೆಗಳಿಗೆ ಗುತ್ತು ಸಾಕ್ಷಿಯಾಗುವ ಸನ್ನಿವೇಶವನ್ನು ನಿರ್ದೇಶಕರು ಮನಸ್ಸಿಗೆ ಮುಟ್ಟುವ ಹಾಗೆ ಕಟ್ಟಿಕೊಂಡಿದ್ದಾರೆ. ಚಿತ್ರವು ಸಂಪೂರ್ಣ ಫ್ಯಾಮಿಲಿ ಓರಿಯೆಂಟೆಡ್ ಆಗಿದ್ದರೂ ಹೊಟ್ಟೆತುಂಬಾ ನಗೋದಕ್ಕೆ ಕೊರತೆಯಿಲ್ಲ. ಸಿನಿಮಾದಲ್ಲಿ ಕುಸೇಲ್ದರಸೆ ನವೀನ್ ಡಿ.ಪಡೀಲ್ ಡಿಫರೆಂಟ್ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯು ತ್ತಾರೆ. ಯಕ್ಷಗಾನ ಕಲಾವಿದನೊಬ್ಬನ ಬದುಕಿನ ಕಥಾನಕ ಚಿತ್ರದಲ್ಲಿದೆ.ಚಿತ್ರದಲ್ಲಿ ತುಳುನಾಡಿನ ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ. ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಹಾಸ್ಯ ದಿಗ್ಗಜರು ಜೊತೆ ಯಾಗಿ ನಟಿಸಿದ್ದು ಚಿತ್ರದಲ್ಲಿ ತುಳುವಿನ ಖ್ಯಾತ ಕಲಾವಿದರ ದಂಡೇ ಇರಲಿದೆ.
ಚಿತ್ರಕ್ಕೆ ಕಥೆ ಬರೆದು ಸಂಭಾಷಣೆಯ ಜವಾಬ್ದಾರಿಯನ್ನು ಶೋಭರಾಜ್ ಪಾವೂರು ನಿಭಾಯಿಸಿದ್ದು, ಚಿತ್ರಕಥೆಯ ಜೊತೆ ನಿರ್ದೇಶಕರಾಗಿ ಕನ್ನಡ ಕಿರುತೆರೆಯ ಮಂದಿಗೆ ಚಿರಪರಿಚಿತರಾಗಿರುವ ಎಂ.ಎನ್.ಜಯಂತ್ ದುಡಿದಿದ್ದಾರೆ.

By suddi9

Leave a Reply

Your email address will not be published. Required fields are marked *