ಬಂಟ್ವಾಳ : ತಾಲೂಕು, ಸರಕಾರಿ ಪ್ರಥಮದರ್ಜೆಕಾಲೇಜು, ಕಾಮಾಜೆಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ದಿನಾಂಕ 20-07-2017 ರಂದು ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಿಂದ“ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವತಯಾರಿ”ಎಂಬ ವಿಷಯದ ಬಗ್ಗೆ ತರಬೇತಿ ಶಿಬಿರವನ್ನು ನಡೆಸಲಾಯಿತು. ತರಬೇತಿ ಶಿಬಿರವನ್ನು ಉದ್ಘಾಟಿಸುತ್ತಾ ಶ್ರೀ ಹರೀಶ್ ಮಾಂಬಾಡಿ, ಮುಖ್ಯ ಸಂಪಾದಕರು, ಬಂಟ್ವಾಳ ನ್ಯೂಸ್, ಇವರು“ಕಾಲೇಜುವಿದ್ಯಾರ್ಥಿಗಳಿಗೆ ಇಂತಹತರಬೇತಿ ಶಿಬಿರದ ಅಗತ್ಯತೆಯಿದ್ದು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು”, ಶುಭ ಹಾರೈಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನು ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಅಧ್ಯಕ್ಷರಾದ ಶ್ರೀ ವಿ.ಪಿ.ಭಟ್‍ರವರು“ವಿದ್ಯಾರ್ಥಿಗಳು ಅನಾವಶ್ಯಕಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ದಿನ ಪತ್ರಿಕೆಯನ್ನು ಓದಿ ತಮ್ಮ ಸಾಮಾನ್ಯಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು”ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಟೈಮ್‍ಇನ್ಸ್ಟಿಟ್ಯೂಶನ್, ಮಂಗಳೂರು ಇದರ ಪ್ರಬಂಧಕರಾದ ಶ್ರೀ ಆಶಿತ್ ಪೂಜಾರಿಯವರುತರಬೇತಿಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮದರ್ಜೆಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಿರೀಶ್ ಭಟ್, ಸ್ವಸ್ತಿಕಾ ಸಂಸ್ಥೆಯಶ್ರೀ ಪರಮೇಶ್ವರ ಮೊಯಿಲಿ, ಶ್ರೀ ಜಗದೀಶ್ ಹೊಳ್ಳ, ಶ್ರೀ ನರಸಿಂಹ ಹೇರ್ಳೆ, ಕಾಲೇಜಿನ ಪ್ರಾಧ್ಯಾಪಕರಾದ ಹೈದರಾಲಿ, ಟೈಮ್‍ಇನ್ಸ್ಟಿಟ್ಯೂಶನ್, ಮಂಗಳೂರು ಇದರ ಸಹಾಯಕರಾದ ಶ್ರೀ ರವಿರಾಜ್‍ಉಪಸ್ಥಿತರಿದ್ದರು. ಪ್ರಾಂಶುಪಾಲರಾದಗಿರೀಶ್ ಭಟ್‍ರವರು ಸ್ವಾಗತಿಸಿ, ಸ್ವಸ್ತಿಕಾ ಸಂಸ್ಥೆಯಪರಮೇಶ್ವರ ಮೊಯಿಲಿರವರು ವಂದಿಸಿ, ಕಾಲೇಜು ವಿದ್ಯಾರ್ಥಿನಿಕುಮಾರಿ ನಿರೀಕ್ಷಿತರವರುಕಾರ್ಯಕ್ರಮ ನಿರ್ವಹಿಸಿದರು.
