ಪೊಳಲಿ  :ನನ್ನ ಮೇಲಿರುವ ಎಲ್ಲಾ ಆಪಾದನೆಗಳ ಬಗ್ಗೆ ಸ್ಪಷ್ಟೀಕರಣ ನೀಡುವುದು ನನಗೆ ಬೇಕಿಲ್ಲ ಬದಲಾಗಿ ಸರ್ವಶಕ್ತಿಯಾದ ನಿನ್ನ ಬಳಿ ಬಂದು ನೈಜ ಆರೋಪಿಗಳು ಶಿಘ್ರವಾಗಿ ಪತ್ತೆಯಾಗಿ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತಾಗಲು ನಿನ್ನ ಬಳಿ ಪ್ರಾರ್ಥಿಸುತ್ತಿದ್ದೇನೆ ಎಂದು ಸಚಿವ ರಮಾನಾಥ ರೈ ದೇವರಲ್ಲಿ  ಅವರು ಇಂದು ಬೆಳಿಗ್ಗೆ ಪೊಳಲಿಯ ಶ್ರೀ ದುರ್ಗಾ ಪರಮೇಶ್ವರಿ ಹಾಗೂ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಬೆಂಬಲಿಗರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.21 vp rai
ನನ್ನ ಅಧಿಕಾರಾವಧಿಯಲ್ಲಿ ನಾನು ಯಾವುದೇ ತಪ್ಪನ್ನು ಮಾಡಿಲ್ಲ . ಯಾವುದೇ ಅಹಿತಕರ ಘಟನೆಗಳಿಗೆ ನಾನು ಕುಮ್ಮಕ್ಕು ನೀಡಿಲ್ಲ ತಪಿತಸ್ಥರು ಯಾರಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಸರ್ವಶಕ್ತೆಯಾದ ನಿನ್ನ ಬಳಿ ಪ್ರಾರ್ಥನೆಗೆ ಬರುತ್ತಿರುವುದು ಎರಡನೇ ಬಾರಿ , ಎಲ್ಲ ಬಲ್ಲವಳಾದ ನೀನು ಸತ್ಯಕ್ಕೆ ಜಯ ತಂದು ಕೊಡಬೇಕಾಗಿ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ಪ್ರಾರ್ಥಿಸಿದರು.ಸಾಮೋಹಿಕ ಪ್ರಾರ್ಥನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ” ನಾನಿಲ್ಲಿ ದೇವಾಲಯಕ್ಕೆ ಸಚಿವನಾಗಿ ಬಂದಿಲ್ಲ ಬದಲಾಗಿ ಓರ್ವ ಸಾಮಾನ್ಯ ಭಕ್ತನಾಗಿ ಬಂದು , ನನ್ನ ಬಗ್ಗೆ ಹಲವರು ಮಾಡುತ್ತಿರುವ ಆಪಾದನೆಗಳ ಬಗ್ಗೆ ದೇವಿಯ ಬಳಿ ಪ್ರಾರ್ಥಿಸಿ ಸತ್ಯಕ್ಕೆ ಜಯ ತಂದು ಕೊಡಬೇಕೆಂದು ದೇವಿಯಲ್ಲಿ ಮೊರೆಯಿಟ್ಟಿದ್ದೇನೆ ಜೊತೆಗೆ ಈ ಗಲಭೆಗಳು ಹಾಗೂ ಅಹಿತಕರ ಘಟನೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ದುರುಳರಿಗೆ ದೇವಿಯು ಶಿಕ್ಷೆಯನ್ನು ನೀಡಲಿ ಎಂದು ಬೇಡಿದೆನು ಎಂದು ಹೇಳಿದರು .ಯಾರ ಕಣ್ಣಿಗೆ ಮಣ್ಣೆರಚಿದರೂ ದೇವಿಯ ಕಣ್ಣಿಗೆ ಮಣ್ಣೆರಚಲು ಸಾಧ್ಯವಿಲ್ಲ . ಜೊತೆಗೆ ಎಲ್ಲಾ ಘಟನೆಗಳು ತಿಳಿಯಾಗಿ ಜಿಲ್ಲೆಯಲ್ಲಿ ಶಾಂತಿ ಹಾಗೂ ಸಾಮರಸ್ಯ ನೆಲೆವೂರಲಿ ಎಂದು ಪ್ರಾಥಿಸುತ್ತಿದ್ದೇನೆ ಎಂದರು.KAR_7113
ಪೊಳಲಿಯ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಸಚಿವರು ಉದ್ದಬೆಟ್ಟು ಮಸೀದಿಗೆ ಕಾರ್ಯಕರ್ತರೋಡನೆ ಭೇಟಿ ನೀಡಿ ಅಲ್ಲಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಚಿವರ ಜೊತೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಬೆ ಚಂದ್ರಪ್ರಕಾಶ್ ಶೆಟ್ಟಿ , ಪದ್ಮಶೇಖರ ಜೈನ್ಸ, ದಸ್ಯೆ ಮಂಜುಳ ಮಾವೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್ ,ಅಮ್ಮುಂಜೆ ಕಾಂಗ್ರೆಸ್ ವಲಯಾಧ್ಯಕ್ಷ ಚಂದ್ರಶೇಖರ್ ಭಂಢಾರಿ , ಬಂಟ್ವಾಳ ಪುರಸಭಾದ್ಯಕ್ಷ ರಾಮಕೃಷ್ಣ ಆಳ್ವ ,  ಬೂಡಾ ಅಧ್ಯಕ್ಷ ಸದಾಶಿವ ಬಂಗೇರ , ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಮುಖಂಡರಾದ ದಿನರಾಜ್ ಅರಿಗ, ತಾಪಂ ಸದಸ್ಯ ಸಂಜಿವ ಪೂಜಾರಿ ,ಪ್ರಭಾಕರ ಪ್ರಭು, ಜನಾರ್ಧನ ಚಂಟಿಮಾರ್ , ವೆಂಕಪ್ಪ ಪೂಜಾರಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎ.ಸಿ ಭಂಢಾರಿ, ಕರಿಯಂಗಳ ಕಾಂಗ್ರೆಸ್ ವಲಯಾದ್ಯಕ್ಷ ಉಮೇಶ ಆಚಾರ್ಯ,ಮತ್ತಿತ್ತರರು ಹಾಜರಿದ್ದರು. ದೇವಳದ ವತಿಯಿಂದ ಅರ್ಚಕವೃಂದದವರು ಪ್ರಾರ್ಥಿಸಿ ಪ್ರಸಾದವನ್ನು ನೀಡಿದರು.

* ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

By suddi9