ಕೊಳ್ನಾಡು, ಮಂಚಿ, ಸಾಲೆತ್ತೂರು, ಕನ್ಯಾನ ಮತ್ತು ಕರೋಪಾಡಿ ಈ ಐದು ಗ್ರಾಮಗಳನ್ನೊಳಗೊಂಡ ಕೊಳ್ನಾಡು ಬಿಜೆಪಿ ಶಕ್ತಿ ಕೇಂದ್ರಕ್ಕೆ ಬಾಲಕೃಷ್ಣ ಸೆರ್ಕಳ ಇವರನ್ನಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕುಡ್ತಮುಗೇರಿನಲ್ಲಿ ನಡೆದ ವಿಸ್ತಾರಕ ಸಮಾವೇಶದಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಇವರ ಸಮ್ಮುಖದಲ್ಲಿ ಬಿಜೆಪಿ ಬಂಟ್ವಾಳ ಅಧ್ಯಕ್ಷ ದೇವಿದಾಸ ಶೆಟ್ಟಿ ಯವರು ಬಾಲ ಕೃಷ್ಣ ಸೆರ್ಕಳ ಇವರನ್ನು ಅಧ್ಯಕ್ಷರಾಗಿ ಘೋಷಿಸಿದರು.
ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಕರೊಪ್ಪಾಡಿ, ಉಪಾಧ್ಯಕ್ಷರುಗಳಾಗಿ ಪ್ರಶಾಂತ್ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ, ಜತೆಕಾರ್ಯದರ್ಶಿಗಳಾಗಿ ನಾರಾಯಣ ಗೌಡ ಕಾಡುಮಠ ಮತ್ತು ಉದಯಶಂಕರ್ ಮಂಚಿ ಹಾಗೂ 15 ಜನರನ್ನು ಸದಸ್ಯರಾಗಿ ನೇಮಕ ಮಾಡಲಾಯಿತು. ಬಾಲಕೃಷ್ಣ ಸೆರ್ಕಳ ರವರು ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪರಿವಾರ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಾಲೆತ್ತೂರಿನಲ್ಲಿ ಅಭೂತಪೂರ್ವ ಹಿಂದು ಶಕ್ತಿ ಸಂಗಮವನ್ನು ಅತ್ಯಂತ ಯಶಸ್ವಿಯಾಗಿ ತನ್ನ ತಂಡದೊಂದಿಗೆ ಸಂಘಟಿಸಿರುತ್ತಾರೆ.
