ಏನಪ್ಪಾಇದು‘ನೀಲ್‍ಗಾಯ್’ಎಂದುಕೊಂಡಿದ್ದೀರಾ?ಹೌದುಇದುಜಿಂಕೆಯನ್ನೇ ಹೋಲುವ ಬೃಹತ್‍ಗಾತ್ರದ ಪ್ರಾಣಿ.ದೇಶೀಯ ಪದ‘ನೀಲ್‍ಗಾಯ್’ ಹಿಂದಿ ಮತ್ತುಉರ್ದುಭಾಷೆಯ ಸಮ್ಮಿಶ್ರಣದಿಂದ ಬಂದಿದೆ.ಈ ಶಬ್ದವನ್ನು ಪ್ರಥಮ ಭಾರಿಗೆ 1882 ರಲ್ಲಿ ಬಳಸಲಾಯಿತೆಂಬಉಲ್ಲೇಖವಿದೆ. ‘ನೀಲ್’ಎಂದರೆನೀಲಿ, ‘ಘಾಯ್’ಎಂದರೆ‘ಆಕಳು’ಎಂದರ್ಥ.ನೀಲ್‍ಗಾಯ್‍ಗಳು ವೈವಿಧ್ಯಮಯ ಹೆಸರಿನಿಂದಕರೆಯಲ್ಪಡುತ್ತಿದ್ದು,‘ನೀಲ್‍ಘೆ’ ‘ನೀಲ್‍ಗೌ’ ‘ನೀಲ್‍ಗೊ’‘ನೀಲ್‍ಗಾವು’‘ಬಿಳಿಗಾಲಿನ ಚಿಗರೆ’ಎಂದೆಲ್ಲಾಕರೆಯಲಾಗುತ್ತದೆ.DSC_2535
ಮೊಘಲ್‍ಚಕ್ರವರ್ತಿಔರಂಗಜೇಬನ ಆಳ್ವಿಕೆಯ ಕಾಲದಲ್ಲಿ (1658-1702) ‘ನೀಲ್‍ಗಾಯ್’ಗಳನ್ನು ‘ನೀಲ್‍ಘೋರ್’ಎಂದುಕರೆಯಲಾಗುತಿತ್ತು.ನೀಲ್‍ಎಂದರೆ ನೀಲಿ, ಘಾಯ್‍ಎಂದರೆಕುದುರೆ.ನೀಲ್‍ಗಾಯ್‍ಗಳು ಸಾಮಾನ್ಯವಾಗಿ ನೋಡಲುಕುದುರೆಯಂತೆಬಲಿಷ್ಠವಾಗಿದ್ದು ಕಾಲಿನಿಂದಭುಜದವರೆಗೆ 3.5 ರಿಂದ 5 ಅಡಿಗಳಷ್ಟು ಎತ್ತರವಿದ್ದುಗಂಡುನೀಲ್‍ಗಾಯ್‍ಗಳು ಸುಮಾರು 110 ಕಿಲೋ ಗ್ರಾಂ ನಿಂದ 290ಕಿಲೋ ಗ್ರಾಂತೂಗುತ್ತವೆ. ಇವುಗಳು ಹಿಂಬದಿ ಇಳಿಜಾರಾದ ಬೆನ್ನನ್ನು ಹೊಂದಿದ್ದುಉದ್ದನೆಯಕತ್ತಿನೊಂದಿಗೆಗಂಟಲಿನ ಅಡಿಯಲ್ಲಿ ಬಿಳಿ ಬಣ್ಣದಕೂದಲನ್ನು ಹೊಂದಿರುತ್ತವೆ. ಅಲ್ಲಲ್ಲಿ ಮುಖದಲ್ಲಿ ಬಿಳಿ ಬಣ್ಣದ ಮಚ್ಚೆಗಳಿದ್ದು ಕೂದಲುಜುಟ್ಟಿನಂತಿರುತ್ತದೆ. ಹೆಣ್ಣು ನೀಲ್‍ಗಾಯ್‍ಗಳಿಗೆ ಕೂದಲುಇರುವುದಿಲ್ಲ. ನೀಲ್‍ಗಾಯ್‍ಗಳು ಸಾಮಾನ್ಯವಾಗಿ ಮೂರುರೀತಿಯ ಗುಂಪುಗಳಲ್ಲಿ ವಾಸಿಸುತ್ತವೆ. ಮೊದಲನೆಯದಾಗಿಒಂದರಿಂದಎರಡು ನೀಲ್‍ಗಾಯ್‍ಗಳು ಸಣ್ಣಸಣ್ಣಮರಿಗಳೊಂದಿಗೆ ವಾಸಿಸುತ್ತವೆ. ಎರಡನೆಯದಾಗಿ ಮೂರರಿಂದಆರುಗಂಡು ಮತ್ತು ಹೆಣ್ಣು ನೀಲ್‍ಗಾಯ್‍ಗಳು ತಮ್ಮಮರಿಗಳೊಂದಿಗೆ ವಾಸಿಸುತ್ತವೆ.ಮೂರನೆನೆಯದಾಗಿಎರಡರಿಂದ ಹದಿನೆಂಟುಗಂಡು ನೀಲ್‍ಗಾಯ್‍ಗಳು ಜೊತೆಯಾಗಿ ವಾಸಿಸುತ್ತವೆ. ಸಾಮಾನ್ಯವಾಗಿ ಇವುಗಳು ಅಪಾಯದ ಮೂಲದಿಂದ ಸುಮಾರು 980 ರಿಂದ 2300 ಅಡಿಗಳಷ್ಟು ದೂರದಲ್ಲೇಇರಲುಇಷ್ಟಪಡುವ ಪ್ರಾಣಿಗಳಾಗಿದ್ದು ಗುಣದಲ್ಲಿತೀರಾಅಂಜುಬುರಕ ಪ್ರಾಣಿಗಳೆನ್ನಬಹುದು. DSC_2549
ನೀಲ್‍ಗಾಯ್‍ಗಳು ಏಷ್ಯಾಖಂಡದಲ್ಲೇಅತ್ಯಂತದೊಡ್ಡಗಾತ್ರದಚಿಗರೆಗಳೆಂದು ಹೇಳಲಾಗಿದೆ. ನೀಲ್‍ಗಾಯ್‍ಗಳು ಸಸ್ಯಹಾರಿಗಳಾಗಿದ್ದು ಹುಲುಸಾದ ಹುಲ್ಲನ್ನು ಮತ್ತುಚಿಗುರಿದಗಿಡಮೂಲಿಕೆಜಾತಿಯ ಸಸ್ಯಗಳನ್ನು ಬಹುವಾಗಿ ಇಷ್ಟಪಡುತ್ತವೆ. ಭಾರತದಉಷ್ಣವಲಯ ಪ್ರದೇಶದಲ್ಲಿ ವಾಸಿಸುವ ನೀಲ್‍ಗಾಯ್‍ಗಳು ದಟ್ಟಾರಣ್ಯದ ಸೊಪ್ಪನ್ನುತಿಂದು ಬದುಕುತ್ತವೆ. ಹೆಣ್ಣುನೀಲ್‍ಗಾಯ್‍ಗಳು ಸಾಮಾನ್ಯವಾಗಿಎರಡು ವರ್ಷಕ್ಕೆ ಮತ್ತುಗಂಡುನೀಲ್‍ಗಾಯ್‍ಗಳು ನಾಲ್ಕರಿಂದಐದು ವರ್ಷಕ್ಕೆ ಲೈಂಗಿಕವಾಗಿ ಬೆಳವಣಿಗೆಯನ್ನು ಹೊಂದುತ್ತವೆ. ಮಿಲನದಅವಧಿಯಲ್ಲಿ ಇವುಗಳ ನಡವಳಿಕೆಯು ತೀರಾ ವೈರುಧ್ಯವಾಗಿದ್ದು ಜೋಡಿಗಳು ತಮ್ಮಗುಂಪಿನಿಂದದೂರವೇ ಉಳಿಯುತ್ತವೆ. ಇವುಗಳ ಗರ್ಭಾವಸ್ಥೆಯಅವಧಿಎಂಟರಿಂದಒಂಭತ್ತು ತಿಂಗಳುಗಳಾಗಿದ್ದು ಒಮ್ಮೆಗೆಒಂದುಅಪರೂಪಕ್ಕೆಎರಡುಅಥವಾ ಮೂರು ಮರಿಗಳನ್ನು ಹಾಕುತ್ತವೆ. ಮರಿಗಳು ಸಾಮಾನ್ಯವಾಗಿ ಮೊದಲ ಕೆಲವು ವಾರಗಳ ಕಾಲ ಆದಷ್ಟು ಹೊರ ಪ್ರಪಂಚದಿಂದಗುಪ್ತವಾಗಿಯೇ ಬದುಕುತ್ತವೆ. ಆರೋಗ್ಯವಂತ ನೀಲ್‍ಗಾಯ್‍ಗಳು ಸುಮಾರು ಹತ್ತು ವರ್ಷಗಳ ಕಾಲ ಬದುಕುತ್ತವೆ.
ಇವುಗಳು ಹೆಚ್ಚಾಗಿ ಚದುರಿದಕುರುಚಲು ಪೊದೆಗಳು ಮತ್ತು ವಿಶಾಲವಾದ ಹುಲ್ಲುಗಾವಲು ಪ್ರದೇಶದಲ್ಲಿ ವಾಸಿಸುತ್ತವೆ. ಉತ್ತರ ಭಾರತದ ಹಿಮಾಲಯದತಪ್ಪಲಿನಲ್ಲಿ ಇವುಗಳ ಸಂತತಿಯುಅತಿಯಾಗಿ ಕಾಣಸಿಗುತ್ತದೆ.ಪಾಕಿಸ್ತಾನ ಮತ್ತು ನೇಪಾಳಗಳಲ್ಲಿ ಇವುಗಳಸಂತತಿಯುಅತ್ಯಂತ ವಿರಳವಾಗಿದ್ದು ಇವುಗಳ ಗಾತ್ರಮತ್ತುವಿಭಿನ್ನ ಬಣ್ಣಗಳ ಕಾರಣದಿಂದಾಗಿಗಂಡು ಮತ್ತುಹೆಣ್ಣುನೀಲ್‍ಗಾಯ್‍ಗಳನ್ನು ಅತ್ಯಂತ ಸುಲಭವಾಗಿಗುರುತಿಸಬಹುದು.ಬಾಂಗ್ಲಾದೇಶದಲ್ಲಿ ಇವುಗಳ ಸಂತತಿ ಸಂಪೂರ್ಣವಾಗಿ ನಶಿಸಿಹೋಗಿದೆಎನ್ನಬಹುದು.ನೀಲ್‍ಗಾಯ್‍ಗಳು ಪ್ರಥಮವಾಗಿ 1920 ರಿಂದ 1930 ರದಶಕದಲ್ಲಿಅಮೆರಿಕಾದಟೆಕ್ಸಾಸ್‍ಕಾಡುಗಳಲ್ಲಿ ಕಂಡು ಬಂದಿದ್ದು2001 ರ ವೇಳೆಗೆ ಟೆಕ್ಸಾಸ್ ಕಾಡುಗಳಲ್ಲಿ ಇವುಗಳ ಸಂಖ್ಯೆ ಸುಮಾರು 37,000 ದಷ್ಟಿತೆಂದು ಅಂದಿನ ಅಂಕಿ ಅಂಶಗಳು ಹೇಳುತ್ತವೆ. ಹಿಂದೂಧರ್ಮದಲ್ಲಿನೀಲ್‍ಗಾಯ್‍ಗಳನ್ನು ನೋಡಲು ಹಸುಗಳಂತೆಯೇ ಇರುವುದರಿಂದ ಇವುಗಳನ್ನು ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತದೆ. ಹದಿನಾರರಿಂದ ಹತ್ತೊಂಬತ್ತನೆಯಶತಮಾನದಲ್ಲಿ ಮೊಘಲರಆಳ್ವಿಕೆಯ ಕಾಲದಲ್ಲಿ ಇವುಗಳನ್ನು ರಾಜರು ಬೇಟೆಯಾಡುತ್ತಿದ್ದರೆಂದುಇತಿಹಾಸದಿಂದ ತಿಳಿದು ಬರುತ್ತದೆ. ಉತ್ತರ ಭಾರತದ ಕೆಲವೊಂದು ರಾಜ್ಯಗಳಲ್ಲಿ ಇವುಗಳು ರೈತನಬೆಳೆಯನ್ನು ಹಾಳು ಮಾಡುವಕಾರಣದಿಂದವಿಶೇಷವಾಗಿ ಬಿಹಾರದಲ್ಲಿನೀಲ್‍ಗಾಯ್‍ಗಳನ್ನು ರೈತನ ಪೀಡಕನೆಂದೂಪರಿಗಣಿಸÀಲಾಗುತ್ತದೆ.DSC_2561
ನೀಲ್‍ಗಾಯ್‍ಇದರವೈಜ್ಞಾನಿಕ ಹೆಸರು‘ಬೊಸೆಲಫುಸ್‍ಟ್ರಗೋಕ್ಯಾಮೆಲಸ್’ಎಂದಾಗಿದ್ದು, ಇದಕ್ಕೆ 1776 ರಲ್ಲಿಜರ್ಮನಿಯ ಪ್ರಸಿದ್ಧ ಪ್ರಾಣಿಶಾಸ್ತ್ರಜ್ಞಪೀಟರ್ ಸಿಮನ್ ಪಾಲ್ಲಾಸೌ ಮೇಲಿನ ಹೆಸರನಿಟ್ಟನೆಂದು ಹೇಳಲಾಗಿದೆ.‘ಬೊಸೆಲಫುಸ್’ ಶಬ್ದವು ಲ್ಯಾಟಿನ್‍ಭಾಷೆಯಿಂದ ಬಂದಿದ್ದು‘ಬೊಸ್’ಎಂದರೆ‘ಹಸು’,‘ಎಲಫೊಸ್’ ಎಂಬ ಶಬ್ದವು ಗ್ರೀಕ್ ಭಾಷೆಯಿಂದ ಬಂದಿದ್ದುಇದರರ್ಥ‘ಜಿಂಕೆ’ಅಥವಾ‘ಚಿಗರೆ’ಎಂದಾಗಿದೆ.ಇಂದು ಮಾನವನಅತಿರೇಕದ ಮೋಜು ಮತ್ತು ಬೇಟೆಯಕಾರಣದಿಂದಾಗಿ, ಸತತಅರಣ್ಯ ನಾಶದಕಾರಣದಿಂದಾಗಿ, ಮತ್ತು ನೀಲ್‍ಗಾಯ್‍ಗಳ ಮೂಲಸ್ಥಾನ ಅರಣ್ಯದಲ್ಲಿನ ಮಾನವನ ಹಸ್ತಕ್ಷೇಪದಕಾರಣದಿಂದಾಗಿ ಇವುಗಳ ಸಂತತಿಯುಅವಸಾನದಅಂಚಿನಲ್ಲಿದೆಎನ್ನಬಹುದು. ಭಾರತದೇಶದಲ್ಲಿ ಇವುಗಳ ಸಂರಕ್ಷಣೆಗಾಗಿ‘ವನ್ಯಜೀವಿ ಸಂರಕ್ಷಣಾಕಾಯ್ದೆ 1972’ ಶೆಡ್ಯೂಲ್-3 ರ ಪ್ರಕಾರ ನೀಲ್‍ಗಾಯ್‍ಗಳನ್ನು ಸಂರಕ್ಷಿತ ಪ್ರಾಣಿಗಳೆಂದು ಘೊಷಿಸಿ ಆದೇಶವನ್ನು ಹೊರಡಿಸಿದೆ.ದೇಶದಲ್ಲಿ ನೀಲ್‍ಗಾಯ್‍ಗಳು ಅತಿಹೆಚ್ಚು ವಾಸಿಸುತ್ತಿರುವ ಸಂರಕ್ಷಿತಾರಣ್ಯಗಳೆಂದರೆ ‘ಘಿರ್‍ರಾಷ್ಟ್ರೀಯಉದ್ಯಾನವನ’ (ಗುಜರಾತ್), ‘ಬಂದಾವ್‍ಘರ್‍ರಾಷ್ಟ್ರೀಯಉದ್ಯಾನವನ’, ‘ಬೋರಿ ವನ್ಯಜೀವಿ ರಕ್ಷಿತಾರಣ್ಯ’, ‘ಸಂಜಯ್‍ರಾಷ್ಟ್ರೀಯಉದ್ಯಾನವನ’, ‘ಸಾತ್ಪುರರಾಷ್ಟ್ರೀಯಉದ್ಯಾನವನ’(ಮಧ್ಯಪ್ರದೇಶ), ‘ತಡೋಬಾಅಂಧೇರಿರಾಷ್ಟ್ರೀಯಉದ್ಯಾನವನ’, (ಮಹಾರಾಷ್ಟ್ರ) ‘ಕುಂಬಾಲ್‍ಘರ್ ವನ್ಯಜೀವಿ ರಕ್ಷಿತಾರಣ್ಯ’, ‘ರಾಂಥಮ್‍ಬೋರ್‍ರಾಷ್ಟ್ರೀಯಉದ್ಯಾನವನ’, ‘ಸಾರಿಸ್ಕಾ ಹುಲಿ ರಕ್ಷಿತಾರಣ್ಯ’ (ರಾಜಸ್ಥಾನ) ಇತ್ಯಾದಿ.
ಹೇಡಿಯೂ, ಸದಾಜಾಗೃತ ಮನಃಸ್ಥಿತಿಯ ನೀಲ್‍ಗಾಯ್‍ಗಳು ಅಪಾಯವೆದುರಾದ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ವೇಗದಲ್ಲಿ ಸುಮಾರು 300 ರಿಂದ 700 ಮೀಟರ್‍ಗಳಷ್ಟು ಎತ್ತರಕ್ಕೆ ನೆಗೆದುಓಡಬಲ್ಲ ವಿಶಿಷ್ಟ ಸಾಮಥ್ರ್ಯವನ್ನು ಹೊಂದಿವೆ. ಹೆಣ್ಣುನೀಲ್‍ಗಾಯ್‍ಗಳುಅಪಾಯದ ಸಂದರ್ಭವನ್ನು ಮರಿಗಳಿಗೆ ತನ್ನಗಂಟಲಿನಿಂದವಿಶಿಷ್ಟ ರೀತಿಯ ಶಬ್ದವನ್ನು ಹೊರಡಿಸುವ ಮೂಲಕ ಎಚ್ಚರಿಕೆಯ ಸಂಕೇತವನ್ನು ನೀಡುತ್ತವೆ. ಐದು ತಿಂಗಳಿಗಿಂತ ಕಡಿಮೆ ವಯಸ್ಸಿನ ತಾರುಣ್ಯದನೀಲ್‍ಗಾಯ್‍ಗಳುಅಪಾಯದ ವಾಸನೆಯನ್ನು ಸುಮಾರು 500 ಮೀಟರ್‍ದೂರದಿಂದಲೇ ಗಮನಿಸಿ ವಿಚಿತ್ರವಾಗಿಕೆಮ್ಮುವ ಮೂಲಕ ಇಡೀಗುಂಪನ್ನುಎಚ್ಚರಿಸುತ್ತವೆ. ಗಂಡು ಮತ್ತು ಹೆಣ್ಣುನೀಲ್‍ಗಾಯ್‍ಗಳುಕಾದಾಡುವುದು ಸಾಮಾನ್ಯವಾಗಿದ್ದು, ಕಾದಾಟದ ಸಂದರ್ಭದಲ್ಲಿತಮ್ಮಕತ್ತನ್ನುಎರಡೂ ದಿಕ್ಕಿನಲ್ಲಿ ಹೊಯ್ದಾಡುವ ಮೂಲಕ ಎದುರಾಳಿಯ ಮೇಲೆ ದಾಳಿಯನ್ನು ನಡೆಸುತ್ತವೆ. ಕಾದಾಟಕ್ಕಿಳಿದ ನೀಲ್‍ಗಾಯ್‍ಗಳು ರಕ್ತಸಿಕ್ತವಾಗಿ, ಚರ್ಮ ಸಿಗಿದು ಕೊನೆಗೆ ಎದುರಾಳಿಯು ಅಥವಾತಾನೇ ಸಾವನ್ನಪ್ಪುವವರೆಗೂಛಲದಂಕ ಮಲ್ಲನಂತೆಕಾದಾಡುವಛಾತಿಯನ್ನು ಹೊಂದಿವೆ.
ದೇಶದಅತ್ಯಂತ ವಿರಳ ಪ್ರಾಣಿಗಳ ಸಾಲಿನಲ್ಲಿ ನೀಲ್‍ಗಾಯ್‍ಗಳೂ ಒಂದಾಗಿದ್ದು, ಇವುಗಳ ರಕ್ಷಣೆಗಾಗಿ ಸರಕಾರ ಹಾಗೂ ವನ್ಯಜೀವಿ ವಿಭಾಗಗಳು ವಿವಿಧರೀತಿಯ ಕಾನೂನುಗಳನ್ನೇನೋ ಜಾರಿಗೆತಂದಿವೆ. ಇವುಗಳ ಅನುಪಾಲನೆಯಜವಾಬ್ದಾರಿಯು ಪ್ರತಿಯೊಬ್ಬ ನಾಗರೀಕ ಹಾಗೂ ಸರಕಾರದಅದ್ಯಕರ್ತವ್ಯವೂಆಗಿದೆ. ಸಸ್ಯಾಹಾರಿಗಳಾಗಿರುವ ನೀಲ್‍ಗಾಯ್‍ಗಳುರೈತನ ಕೃಷಿ ಜಮೀನಿಗೇ ಹೆಚ್ಚು ಹೆಚ್ಚು ಧಾಳಿಯನ್ನು ಮಾಡುತ್ತಿದ್ದು, ಅರಣ್ಯದತಪ್ಪಲಲ್ಲಿ ವಾಸಿಸುವ ರೈತರು ಹಾಗೂ ಜನಸಾಮಾನ್ಯರು ವಿಶೆಷವಾಗಿ ಈ ಪ್ರಾಣಿಗಳ ರಕ್ಷಣೆಯ ಸಂಕಲ್ಪವನ್ನು ಮಾಡಿದಾಗ ಮಾತ್ರ ನೀಲ್‍ಗಾಯ್‍ಗಳ ಸಂತತಿಯನ್ನು ಮುಂದಿನ ದಿನಗಳಲ್ಲಿ ಯಥೇಚ್ಚವಾಗಿಕಾಣಬಹುದಾಗಿದೆ.

ಲೇಖನ:
ಸಂತೋಷ್‍ರಾವ್ ಪೆರ್ಮುಡ |
ಪಟ್ರಮೆಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕುದ.ಕಜಿಲ್ಲೆ.
ದೂ: 9742884160

*******

By suddi9

Leave a Reply

Your email address will not be published. Required fields are marked *