ಬಂಟ್ವಾಳ:ತಾಲೂಕಿನ ಗೋಳ್ತಮಜಲು ಗ್ರಾಮದ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಶಿಲಾಮಯ ಗರ್ಭಗುಡಿಯ ಪಾದುಕಾನ್ಯಾಸ ಕ್ಷೇತ್ರದ ತಂತ್ರಿವರ್ಯರಾದ ವೇ.ಮೂ.ನೀಲೇಶ್ವರ ಉಚ್ಚಿಲಾತ್ತಾಯ ಪದ್ಮನಾಭ ತಂತ್ರಿಯವರ ನೇತ್ರತ್ವದಲ್ಲಿ ನೆರವೇರಿತು.ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತರ ನಿರ್ದೇಶನದಂತೆ ಈಕಾರ್ಯಕ್ರಮದಲ್ಲಿ ಈ ಪಾದುಕಾನ್ಯಾಸವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ಅವರು ನೆರವೇರಿಸಿದರು.
ದೇವಳದ ಪ್ರಧಾನ ಅರ್ಚಕರಾದ ನಾರಾಯಣ ರಾವ್ ಅವರು ವಿವಿಧ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರ್,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ, ಜಿಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್,ಪ್ರಮುಖರಾದ ಸಂಪತ್ ಕುಮಾರ್ ಶೆಟ್ಟಿ,ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು, ಸಮಿತಿ ಸದಸ್ಯರಾದ ರಾಮಚಂದ್ರ ಬನ್ನಿಂತಾಯ,ದೇವದಾಸ ಪೂಜಾರಿ ಅಡ್ಯನಡ್ಕ,ಪದ್ಮನಾಭ ರೈ,ಕ್ರಷ್ಣಪ್ಪ ಮೂಲ್ಯ,ಬಟ್ಯಪ್ಪ ಶೆಟ್ಟಿ,,ದಿನೇಶ ಶೆಣ್ಯೆ,ಗಣೇಶ ಶೆಟ್ಟಿ ಗೋಳ್ತಮಜಲು,ಗಣೇಶ ನಾಯ್ಕ,ವಸಂತ ಎನ್,ಹೇಮಲತಾ ಗಟ್ಟಿ,ಬಾಲಪ್ಪ ಗೌಡಹಾಗೂ ಸೀಮೆಯ ಭಕ್ತರು,ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
