ಬಂಟ್ವಾಳ:ಪುತ್ತೂರು ಶಾಸಕಿ ಶಕುಂತಲಾ ಶೆಟ್ಡಿ ಗುರುವಾರ ಸಂಜೆ ಅರ್.ಎಸ್.ಎಸ್ ಕಾರ್ಯಕರ್ತ ಶರತ್ ಅವರ ನಿವಾಸಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು.ಈ ಸಂದರ್ಭ ಶರತ್ ತಾಯಿ ಶಾಸಕಿ ಮುಂದೆ ಕಣ್ಣೀರಿಟ್ಟಾಗ ಮಾತನಾಡಿದ ಶಕುಂತಲಾ ಶೆಟ್ಟಿ, ಶರತ್ ಅಂತ್ಯಸಂಸ್ಕಾರ ವೇಳೆ ದೃಶ್ಯಮಾಧ್ಯಮದಲ್ಲಿ ತನ್ನ ಪತಿಯ ಊರಿನ ಪರಿಚಯಸ್ಥರನ್ನು ಕಂಡಿದ್ದೆ. ಮತ್ತೆ ವಿಚಾರಿಸಿದಾಗ ಶರತ್ ತಾಯಿ ನಮ್ಮೂರಿನವರೇ ಎಂದು ಗೊತ್ತಾಯಿತು ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುದ್ಧಿವಂತರ, ವಿದ್ಯಾವಂತರ ಸುಸಂಸ್ಕøತರ ಜಿಲ್ಲೆಯಲ್ಲಿ ಶೇ.2ರಷ್ಟು ಕಿಡಿಗೇಡಿಗಳಿಂದ ನಡೆಯುವ ಹಿಂಸಾಕೃತ್ಯ ಜಿಲ್ಲೆಗೆ ಅಪಮಾನಕರ ವಿಚಾರ ಎಂದು ಹೇಳಿದರು. ಸಾಕಷ್ಟು ಪೊಲೀಸ್ ಬಂದೋಬಸ್ತ್ ಇದ್ದಾಗಲೂ ಕೊಲೆಯಂಥ ದುಷ್ಕøತ್ಯಗಳು ನಡೆಯುತ್ತಿವೆ ಎಂದಾದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃತ್ಯವನ್ನು ಯಾರೇ ಮಾಡಿರಲಿ ಪೆÇಲೀಸ್ ಇಲಾಖೆ ಯಾವುದೇ ಒತ್ತಡಕ್ಕೊಳಗಾಗದೆ ಆರೋಪಿಗಳನ್ನು ಬಂಧಿಸಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ಕಾನೂನಿನ ಭಯ ಮೂಡಿಸುವ ಕೆಲಸವಾಗಬೇಕು ಮುಂದಿನ ದಿನಗಳಲ್ಲಾದರೂ ಸಮಾಜದಲ್ಲಿ ಪರಸ್ಪರ ಹೃದಯ ಬೆಸೆಯುವ ಕಾರ್ಯವಾಗಬೇಕು ತನ್ಮೂಲಕ ಎಲ್ಲರೂ ಒಟ್ಟಾಗಿ ಬಾಳವಂತಾಬೇಕು, ಜಿಲ್ಲೆಯಲ್ಲಿ ಮರಳಿ ಶಾಂತಿ ವಾತಾವರಣ ನೆಲೆಯಾಗಬೇಕು ಎಂದ ಅವರು ಮಗನನ್ನು ಕಳಕೊಂಡ ನೊಂದ ಜೀವಗಳಿಗೆ ದು:ಖವನ್ನು ಸಹಿಸುವ ಶಕ್ತಿ ಭಗವಂತನ ನೀಡಲಿ ಎಂದು ಆಶಿಸಿದರು.
ಈ ಸಂದರ್ಭ ಕಾಂಗ್ರಸ್ ಮುಖಂಡರಾದ ರಮಾನಾಥ ವಿಟ್ಲ, ಮಹೇಶ್ ನಾಯ್ಕ್ ಉಪಸ್ಥಿತರಿದ್ದರು.ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಗುರುವಾರ ಶರತ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
