ಕಲ್ಲಡ್ಕ :ಮೊದಲು ನಮ್ಮನ್ನು ನಾವು ತಿಳಿಯುವುದೇ ಜ್ಞಾನ. ನಾವು ಗಳಿಸಿದ ಜ್ಞಾನ ಪಕ್ವಗೊಳ್ಳಬೇಕಾದರೆ ಗುರು ಬೇಕು. ವಿದ್ಯಾರ್ಥಿಗೆಗುರುವಿನ ಮೇಲೆ ಗೌರವ ನೀಡುವ, ಸಮರ್ಪಣಾಗುಣಇದ್ದರೆ, ಆತ ಯಶಸ್ಸಿನೆಡೆಗೆ ಸಾಗುತ್ತಾನೆಎಂದು ತಿರುಮಲೇಶ್ವರ ಪ್ರಶಾಂತ್, ಇತಿಹಾಸಉಪನ್ಯಾಸಕರು ಶ್ರೀರಾಮ ಪದವಿ ಪೂರ್ವಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.
ಲೋಕ ಕಲ್ಯಾಣವಾಗುವಂತಹ ಸುಸಂಸ್ಕ್ರತ ಶಿಕ್ಷಣ, ಉತ್ತಮ ಚಾರಿತ್ರ್ಯವುಳ್ಳ ಗುರುಅಗತ್ಯ.ಅಂತಹಗುರು ಪರಂಪರೆ ಭಾರತದಲ್ಲಿದೆ.ಆದರ್ಶ ಪುರುಷರಾದ ಶ್ರೀರಾಮ, ಸತ್ಯ ಹರಿಶ್ಚಂದ್ರರಂತಹ, ಋಷಿಮುನಿಗಳು, ತತ್ವಜ್ಞಾನಿಗಳು, ದಾರ್ಶನಿಕರು ಹುಟ್ಟಿದ ಪುಣ್ಯ ಭೂಮಿ ಭಾರತ.ಇಂತಹ ಭಾರತದಲ್ಲಿ ನಾವು ಉತ್ತಮ ನಾಗರಿಕರಾಗಿ ಬದುಕಬೇಕುಎಂದುಜಯಕುಮಾರ್, ನಿವೃತ್ತ ಶಿಕ್ಷಕರು ಸರಕಾರಿ ಪ್ರೌಢಶಾಲೆ ಗೋಳ್ತಮಜಲು ಅವರು ವಿದದ್ಯಾರ್ಥಿಗಳಿಗೆ ಹಿತವಚನ ನೀಡಿದರು.ಆಚಾರ್ಯತ ಪಾದಮಾಧತ್ತೇ ಪಾದಂಶಿಷ್ಯಾಸ್ವಾಮೇಧಃ ಪಾಧಂ ಸಭ್ರಹ್ಮಚಾರಿಭ್ಯಃ ಪಾದಂ ಕಾಲಕ್ರಮೇಣ ಚ/ವಿದ್ಯಾರ್ಥಿಗುರುವಿನಿಂದತನ್ನ ಬುದ್ಧಿವಂತಿಕೆಯಿಂ ಸಹಪಾಠಿಗಳಿಂದ, ಕಾಲಕ್ರಮೇಣವಾಗಿಜ್ಞಾನವನ್ನು ಪಡೆಯುತ್ತಾ ಹೋಗುತ್ತಾನೆ. ಆದ್ದರಿಂದ ಮಾನವನಜೀವನಾಂತ್ಯದವರೆಗೆಇಡೀ ಪ್ರಕೃತಿಯೇಗುರುವಾಗಿರುತ್ತದೆಎಂದುಗೋವಿಂದ ಭಟ್ ಪಂಜಿಗದ್ದೆ, ಸಂಸ್ಕೃತ ಪಂಡಿತರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶಿಕ್ಷಣದ ಜೊತೆಗೆ ಸಮಾಜದ ಏಳಿಗೆಗೆ, ಒಳಿತನ್ನು ಮಾಡುವ ಸದ್ಗುಣಗಳನ್ನು ರೂಡಿಸಿಕೊಳ್ಳಬೇಕು. ಭವ್ಯ ಭಾರತವನ್ನುಕಟ್ಟುವ, ನಾಗರೀಕರಾಗಬೇಕುಎಂದು ಶ್ರೀಯುತ ರಮೇಶ್ ಶ್ರೀಮಾನ್, ಮುಖ್ಯೋಪಾಧ್ಯಾಯರು ಶ್ರೀರಾಮ ಪ್ರೌಢಶಾಲೆ, ಕಲ್ಲಡ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶ್ರೀರಾಮ ಪ್ರೌಢಶಾಲೆಯ ಶ್ರೀಮಾನ್, ಮಾತಾಜಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆ ಅಖಿಲ, ಸ್ವಾಗತಯೋಗಪಾಣಿನಿ, ಧನ್ಯವಾದ ಪ್ರಜ್ಞಾ ಮಾಡಿದದರು.
