ಬಂಟ್ವಾಳ : ಬಂಟ್ವಾಳ ಉಪವಿಭಾಗದ ನೂತನ ಎಎಸ್ಪಿಯಾಗಿ ಡಾ.ಕೆ. ಅರುಣ್ ಅವರು ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದರು.ಕಳೆದ ಒಂದೂವರೆ ತಿಂಗಳಿನಿಂದ ತಾಲೂಕಿನಾದ್ಯಂತ ನಡೆಯುತ್ತಿರುವ ಕೋಮು ಸಂಘರ್ಷ,ಎರಡು ಕೊಲೆ ಪ್ರಕರಣ ಸಹಿತ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಬಂಟ್ವಾಳ ಡಿವೈಎಸ್ಪಿ,ಸಿಐ, ನಗರ ಠಾಣಾ ಎಸ್ ಐ ಅವರನ್ನು ಎತ್ತಂಗಡಿಗೊಳಿಸಿ ಸರಕಾರ ಆದೇಶಿಸಿತ್ತು.ಇದೀಗ ನೂತನ ಎಎಸ್ಪಿಯಾಗಿ ಡಾ.ಅರುಣ್ ಅವರು ಅಧಿಕಾರ ಸ್ವೀಕರಿಸಿದರೆ, ಇನ್ಸ್ ಪೆಕ್ಟರ್ ಬಿ.ಕೆ.ಮಂಜಯ್ಯ ಹಾಗೂ ಎಸ್ ರಕ್ಷಿತ್ ಅವರಿನ್ನೂ ರಿಲೀವ್ ಅಗಿಲ್ಲ. ಇಲ್ಲಿಗೆ ಬರಬೇಕಾಗಿದ್ದ ಅಧಿಕಾರಿಗಳು ಇನ್ನೂ ಬರಲಿಲ್ಲ. ಅಧಿಕಾರ ಸ್ವೀಕರಿಸಿದ ಬಳಿಕ ಡಾ. ಅರುಣ್ ಕಲ್ಲಡ್ಕ ಸಹಿತ ಹಲವು ಭಾಗಗಳಿಗೆ ಭೇಟಿ ನೀಡಿದರು.

13bhaspbantwal
*ಡಿಜಿ   ದತ್ತಾ  ಬಿಸಿರೋಡಿಗೆ
ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ  ಪೊಲೀಸ್ ಡಿಜಿ ದತ್ತಾ ಅವರು ಜುಲೈ 14ರಂದು ಬಿ.ಸಿ.ರೋಡಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆನಡೆಸಲಿದ್ದಾರೆ.ಈ ನಡುವೆ ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ  ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈಹಿಂದೆ ಬಂಟ್ವಾಳದಲ್ಲಿ ಎಎಸ್ಪಿಯಾಗಿ ಹಲವಾರು ಅಪರಾಧ ಪ್ರಕರಣವನ್ನು ಭೇದಿಸಿ ಹೆಗ್ಗಳಿಕೆಗೆ ಪಾತ್ರವಾಗಿರುವ ಸದ್ಯ ಹಾಸನ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ಅವರು ಗುರುವಾರ ಬಂಟ್ವಾಳಕ್ಕೆ ಅಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಹತ್ಯಾ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಸ್ಪಷ್ಟ ಸುಳಿವು ಸಿಗದಿರುವುದರಿಂದ  ಪೊಲೀಸರಿಗೂ ಕಗ್ಗಂಟಾಗಿದೆ.

By suddi9

Leave a Reply

Your email address will not be published. Required fields are marked *