ಮಂಗಳೂರು: ಸರಕಾರಿ ವೈದ್ಯಕೀಯ ವ್ಯವಸ್ಥೆಯಲ್ಲೂ ಎಲ್ಲಾ ರೀತಿಯ ಔಷಧೀಯ ಪದ್ಧತಿಗಳು ಜಾರಿ ಆಗಬೇಕಿದೆ ಈ ಮೂಲಕ ರೋಗಿಗಳು ವಿವಿಧ ರೀತಿಯ ಪ್ರಯೋಜನ ಪಡೆಯಲು ಸಾಧ್ಯ ಎಂದು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ| ರಾಜೇಶ್ವರಿ ದೇವಿ ಅಭಿಪ್ರಾಯ ಪಟ್ಟರು.ಮಂಗಳೂರು ದೇರಳಕಟ್ಟೆ ಅಲ್ಲಿನ ಫಾದರ್ ಮುಲ್ಲರ್ಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಡಿಟೋರಿಯಂನಲ್ಲಿ ಕಳೆದ ಸೋಮವಾರ ಆಯೋಜಿಸಿದ್ದ ವಿಶ್ವ ವೈದ್ಯರ ದಿನಾಚರಣಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿ ಸಂಸ್ಥೆಯ ಸನ್ಮಾನ ಸ್ವೀಕರಿಸಿ ಡಾ| ದೇವಿ ಮಾತನಾಡಿದರು.

aka1

ಆಯುರ್ವೇದ, ಹೋಮಿಯೋಪತಿ ಹಾಗೂ ಅಲೋಪತಿ ಔಷಧಿ ವ್ಯವಸ್ಥ್ಥೆಯಿಂದ ಜನರಲ್ಲಿ ಗೊಂದಲವಿದೆ. ಇದರ ಕುರಿತ ಗೊಂದಲ ನಿವಾರಣೆ ವೈದ್ಯರುಗಳಿಂದ ಸಾಧ್ಯ. ಹೋಮಿಯೋಪತಿ ವೈದ್ಯಕೀಯ ವ್ಯವಸ್ಥೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಇದ್ದು, ಸರಕಾರಿ ವ್ಯವಸ್ಥೆಯಲ್ಲಿಯೂ ಆಯುರ್ವೇದ ಪದ್ಧತಿಗೆ ಆಯುಷ್ ಇಲಾಖೆಯಂತೆ, ಹೋಮಿಯೋಪತಿ ವಿಭಾಗವೂ ಸೇರಿಸಿ ಕೊಳ್ಳಬೇಕಿದೆ ಎಂದೂ ರಾಜೇಶ್ವರಿ ಅಭಿಪ್ರಾಯ ವ್ಯಕ್ತ ಪಡಿಸಿದರು.

aka

ಫಾದರ್ ಮುಲ್ಲರ್ಸ್ ಹೋಮಿಯೋಪತಿ ಆಸ್ಪತ್ರೆ ನಿರ್ದೇಶಕ ರೆ| ಫಾ| ರಿಚರ್ಡ್ ಕುವೇಲ್ಹೋ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥಾಪಕ ಫಾದರ್ ಮುಲ್ಲರ್ ಭಾವಚಿತ್ರಕ್ಕೆ ಪುಷ್ಫಹಾರವನ್ನಿತ್ತು ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆಯನ್ನೀಡಿದರು. ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಫಾ| ಸಿಲ್ವೆಸ್ಟರ್ ಸ್ವಾಗತಿಸಿದರು. ಡಾ| ಅಂಜಲಿ ಮನಾಯಿಲ್ ಮತ್ತು ಡಾ| ಶುೃತಿ ನಾಯರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಆಡಳಿತ ಅಧಿಕಾರಿ ಫಾ| ವಿನ್ಸೆಂಟ್ ಸಲ್ದಾನ್ಹಾ ಧನ್ಯವದಿಸಿದರು.

By suddi9

Leave a Reply

Your email address will not be published. Required fields are marked *