ಬಂಟ್ವಾಳ: ನಿಷೇದಾಜೆಯ ನಡುವೆಯೂ ದುಷ್ಕರ್ಮಿಳಿಂದ ಚೂರಿ ಇರಿತಕ್ಕೆ ಒಳಗಾಗಿರುವ ಬಿ.ಸಿ ರೋಡಿನ ಶರತ್ ಇವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. 
ಬಲ್ಲ ಮೂಲಗಳ ಪ್ರಕಾರ ಇರಿತದ ಗಾಯದಿಂದ ತೀವ್ರ ರಕ್ತಸ್ರಾವವಾಗಿದ್ದು ನಿನ್ನೆಯಿಂದ ಇಂದಿನವರೆಗೆ ಹಲವು ರಕ್ತದಾನಿಗಳ ಮೂಲಕ ಆತನಿಗೆ ರಕ್ತ ಸಂಗ್ರರಿಸಿ ನೀಡಲಾಗಿದ್ದು ಆದರೂ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
