ಬಂಟ್ವಾಳ; ಕರೊಇಪಾಡಿ ಗ್ರಾ.ಪಂ.ಗೆ ನಡೆದ ಉಪಚುನಾವಣೆಯಲ್ಲಿ ವಿಜೇತರಾದ ಅನ್ವರ್ ಕರೋಪಾಡಿ ಹಾಗೂ ಬೋಳಂತೂರು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾದ ಆಶಾ ಬೋಳಂತೂರು ಅವರನ್ನು ಕಾಂಗ್ರಸ್ ಪಕ್ಷದ ವತಿಯಿಂದ ಬಿ.ಸಿ.ರೋಡಿನಲ್ಲಿ ಅಭಿನಂದಿಸಲಾಯಿತು.ಈಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ರವರು ಮಾತನಾಡಿ ಜಲೀಲ್ ಕರೋಪಾಡಿಯವರ ಹತ್ಯೆಗೆ ಈ ಕ್ಷೇತ್ರದ ಜನತೆ ಉತ್ತರವನ್ನು ನೀಡಿದ್ದಾರೆ.ಆ ಮೂಲಕ ಅವರ ಜನಪರ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಜಲೀಲ್ ಸಹೋದರ ಅನ್ವರ್ ಗೆ ಜನತೆ ಆಶೀವಚನ ೯ದಿಸಿದ್ದಾರೆ ಎಂದರು
.ತಾಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ ಅವರು ಮಾತನಾಡಿಜಲೀಲ್ ಅವರ ಜನಪರವಾದ ಕೆಲಸ,ಸೌಹಾರ್ದತೆಯ ಜೊತೆಗೆ ಸಚಿವ ರಮಾನಾಥ ರೈಯವರ ಅಭಿವ್ರದ್ದಿ ಕೆಲಸಗಳಿಗೆ ಸಿಕ್ಕಿದ ಜಯ ಎಂದರು.ತಾಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ,ಜಾರಪ್ಪ ಶೆಟ್ಟಿ,ಮಹಮ್ಮದ್ ಅನ್ವರ್,ಪುತ್ತುಮೋನು,ರಹೀಂ ಮಿತ್ತನಡ್ಕ,ರಜಾಕ್ ಸೇರಾಜೆ ಸಿದ್ದೀಕ್ ಶಗೀರ್ ,ಮೂಸಬ್ಬ ,ವಿಜಯಪೂಜಾರಿಮೊದಲಾದವರಿದ್ದರು.ಬಳಿಕ ವಿಜೇತರು ಸಚಿವ ರಮಾನಾಥ ರೈ ಅವರನ್ನು ಭೇಟಿ ಗೈದರು.ಈ ಸಂದರ್ಭದಲ್ಲಿ ಅವರನ್ನು ಸಚಿವರು ಅಭಿನಂದಿಸಿದರು.ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಉಪಸ್ಥಿದ್ದರು.
