ಬಂಟ್ವಾಳ: ಕಾಪುವಿಂದ ಕಾಶ್ಮೀರರದವರೆಗೆ ಸುಮಾರು 11,000 ಕಿ.ಮೀ. ದೂರ ಲೈಟ್ಸ್ ಕ್ಯಾಮಾರಾ ಲಡಾಕ್ ಬೈಕ್ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿ ಊರು ತಲುಪಿದ ಛಾಯಾಗ್ರಾಹಕ ಹಾಗೂ ಹವ್ಯಾಸಿ ಬೈಕ್ ರೈಡರ್ ಸಚಿನ್ ಶೆಟ್ಟಿ ಕಾಪು ಹಾಗೂ ತಂಡವನ್ನು ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ ವತಿಯಿಂದ ಬಿ.ಸಿ.ರೋಡಿನಲ್ಲಿ ಸೋಮವಾರ ಬರಮಾಡಿಕೊಳ್ಳಲಾಯಿತು.BTW_JULY3_4B

ಸಚಿನ್ ಶೆಟ್ಟಿ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಪದಾಧಿಕಾರಿಗಳಾದ ದಯಾನಂದ ಬಂಟ್ವಾಳ, ಹರೀಶ್ ಬಂಟ್ವಾಳ, ರಾಜರತ್ನ, ರವಿಪ್ರಕಾಶ್, ಲಕ್ಷ್ಮಣ್, ವಿಕೇಶ್ ಹಾಜರಿದ್ದರು. ವಿವಿಧ ರಾಜ್ಯಗಳ ಜನರ ಸಾಂಸ್ಕøತಿಕ ಜೀವನ, ದೈನಂದಿನ ಜೀವನ ಕ್ರಮ, ಆಹಾರ ಪದ್ದತಿ ಮತ್ತು ಪ್ರವಾಸಿ ಹಾಗೂ ಐತಿಹಾಸಿಕ ಪ್ರದೇಶಗಳ ಕುರಿತಾಗಿ ಅಧ್ಯಯನ ನಡೆಸಿ ಸಾಕ್ಷ್ಯ ಚಿತ್ರ ನಿರ್ಮಿಸುವ ಉದ್ದೇಶದಿಂದ ಸಚಿನ್ ಎಸ್. ಶೆಟ್ಟಿ ಲೈಟ್ಸ್ ಕ್ಯಾಮಾರಾ ಲಡಾಕ್ ಎನ್ನುವ ಬೈಕ್ ಪ್ರಯಾಣ ಹಮ್ಮಿಕೊಂಡಿದ್ದರು.

By suddi9

Leave a Reply

Your email address will not be published. Required fields are marked *