ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಇದರ ನೂತನ ಕಟ್ಟಡ ಉದ್ಘಾಟನೆ, ಪ್ರೌಢ ಶಾಲಾ ವಿಭಾಗದ ಉಚಿತ ಸೈಕಲ್ ವಿತರಣೆ, ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಲು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಮದು ಅವರು ಹೇಳಿದರು.
ಭವಿಷ್ಯತ್ತಿನಲ್ಲಿ ಉತ್ತಮ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಕಾದ ಪೂರಕವಾತವರಣ ನಿರ್ಮಾಣ ಮಾಡಲು ಶಿಕ್ಷಣ ಇಲಾಖೆ ಹೆಚ್ಚಿನ ಮುತುರ್ವಜಿವಹಿಸಬೇಕು, ಸಾಮಾಜಿಕ ಬದಲಾವಣೆಯಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ಅಗತ್ಯವಿದೆ ಎಂದು ಹೇಳಿದರು. 1ಕೋಟಿ 4 ಲಕ್ಷ ಅಂದಾಜು ವೆಚ್ಚದಲ್ಲಿ ಈ ಕಟ್ಟಡ ನಿರ್ಮಾನವಾಗಲಿದ್ದು ಪ್ರಥಮ ಹಂತದ ಕಟ್ಟಡದ ಕೆಲಸ ಪೂರ್uಗೊಂಡು ಉದ್ಘಾಟನೆಯಾಗಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಗ್ರಾ.ಪಂ. ಅಧ್ಯಕಷ ಗಣಪತಿಭಟ್, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ ಸದಸ್ಯ ಸಜೀವ ಪೂಜಾರಿ,ಜಿ.ಪಂ ಸದಸ್ಯ ಎಮ್.ಎಸ್ ಮಹಮ್ಮದ್,ಮಹಾಬಲ ರೈ, ಬಿಎಓ ಲೋಕೇಶ್ ಸಿ, ಎಸ್‍ಡಿಎಮ್.ಸಿಸದಸ್ಯರಾದ ವಿಶ್ವನಾಥ ಬೆಳ್ಚಾಡ, ಪರಮೇಶ್ವರ ಮೂಲ್ಯ, ಪ್ರಭಾಕರ ಶೆಟ್ಟಿ, ಅಬ್ದುಲ್ ಅಜೀಝ್, ರಮೇಶ್ ಅನ್ನಪ್ಪಾಡಿ, ಚಂದು ನಾಯ್ಕ, ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶುಪಾಲ ಬಾಬು ಗಾಂವಕರ್ ಸ್ವಾಗತಿಸಿ ಉಪನ್ಯಾಸಕಿ ವಂದಿಸಿದರು.
